Home ರಾಜ್ಯ ಬೆಂಗಳೂರು ಇಂದಿನಿಂದ ಲಾಕ್​ಡೌನ್ ಸಡಿಲಿಕೆ:  ಬೆಂಗಳೂರಿನಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ರವರೆಗೆ ಓಡಾಡುವವರಿಗೆ ಪಾಸ್​...

ಇಂದಿನಿಂದ ಲಾಕ್​ಡೌನ್ ಸಡಿಲಿಕೆ:  ಬೆಂಗಳೂರಿನಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ರವರೆಗೆ ಓಡಾಡುವವರಿಗೆ ಪಾಸ್​ ಅಗತ್ಯವಿಲ್ಲ

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಲಾಕ್​ಡೌನ್ ಸಡಿಲಿಕೆ ಮಾಡಿದ್ದು, ಬೆಂಗಳೂರಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ರವರೆಗೆ ಓಡಾಡಲು ಯಾವುದೇ ಪಾಸ್​ನ ಅಗತ್ಯವಿಲ್ಲ. ಆದರೆ ಕಂಪೆನಿಗಳಿಗೆ ಹೋಗುವವರು ಅವರ ಐಡಿ ಕಾರ್ಡನ್ನು ಇಟ್ಟುಕೊಂಡಿರಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್  ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು,‘ಬೆಳಗ್ಗೆ 7 ರಿಂದ ಸಂಜೆ 7 ರವರೆಗ ಪಾಸ್​ನ ಅಗತ್ಯವಿಲ್ಲ. ಆದರೆ ಸಂಜೆ 7 ರ ನಂತರ ಮರುದಿನ 7 ರವರೆಗೆ ಪಾಸ್ ಇದ್ದರೂ ಯಾರೂ ಓಡಾಡಲು ಅನುಮತಿ ಇಲ್ಲ. ಆದರೆ ತುರ್ತು ಪರಿಸ್ಥಿತಿ ಇದ್ದರೆ ಹಾಗೂ ಅಗತ್ಯ ವಸ್ತುಗಳ ಸಾಗಾಟಕ್ಕೆ ಮಾತ್ರ ರಾತ್ರಿ ಸಂಚಾರ ಅವಕಾಶಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾಸ್ಕರ್ ರಾವ್, ಲಾಕ್​ಡೌನ್ ಸಡಿಲಿಕೆಯೂ ಕೆಲವೊಂದು ನಿಯಮಗಳು ಅನ್ವಯವಾಗಲಿದೆ.ಈ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹಾಗಾಗಿ ಲಾಕ್​ಡೌನ್ ಸಡಿಲಿಕೆಯಲ್ಲಿರುವ ನಿಯಮಗಳೇನು ?

  • ಕಂಟೈನ್ಮೆಂಟ್ ಝೋನ್​ಗಳಲ್ಲಿರುವ ನಿಯಮಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳು ಇರುರುದಿಲ್ಲ. ಈ ಹಿಂದೆ ಇದ್ದ ನಿಯಮಗಳೇ ಮುಂದುವರಿಯಲಿದೆ.
  • ಸಂಜೆ 7 ರ ವೇಳೆಗೆ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು.
  • ಇಂದಿನಿಂದ ಟ್ರಾಫಿಕ್ ರೂಲ್ಸ್​ಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
  • ಆರೋಗ್ಯ ಇಲಾಖೆಯ ಸೂಚನೆಗಳು ಹಾಗೂ ನಿಯಮಗಳನ್ನು  ಪಾಲಿಸಬೇಕು.
  • ವಾಹನಗಳು 30 ಕಕಿಲೋಮೀಟರ್​ಗಿಂತ ವೇಗವಾಗಿ ಓಡಾಡುವಂತಿಲ್ಲ.
  • ಇನ್ನು ಮದ್ಯದಂಗಡಿಗಳನ್ನು ಇಂದಿನಿಂದ ಸಂಜೆ 6 ಗಂಟೆಯವರೆಗೆ ಓಪನ್ ಮಾಡಲು ಅವಕಾಶ
  • ಬಾರ್​ಗಳ ಬಳಿ ಮಾಸ್ಕ್, ಗ್ಲೌಸ್​ಗಳನ್ನು ಕಡ್ಡಾಯವಾಗಿ ಧರಿಸಬೇಕು. ಇನ್ನು ಅಲ್ಲಿ ಸಾಮಾಜಿಕ ಅಂತರವನ್ನು ಪಾಲಿಸಬೇಕು. ಅಲ್ಲದೆ ಸಿಸಿಟಿವಿ ಹಾಗೂ ಸೆಕ್ಯುರಿಟಿ ಕಡ್ಡಾಯವಾಗಿರಬೇಕು.
  • ಈಗ ವಿಧಿಸಿರುವ ನಿಯಮಗಳನ್ನು  ಉಲ್ಲಂಘಿಸಿದರೆ ಸೆಕ್ಷನ್ 188 ಹಾಗೂ ಎನ್​ಡಿಎಂಎ ಆ್ಯಕ್ಟ್ ಅಡಿ ಕೇಸ್ ದಾಖಲಿಸಲಾಗುತ್ತದೆ.
  • ಕಂಪೆನಿ,ಕಚೇರಿ ಕೆಲಸಕ್ಕೆ ಹೋಗುವವರಿಗೆ ಪಾಸ್ ಕಡ್ಡಾಯ
  • ಶಾಪಿಂಗ್ ಕಾಂಪ್ಲೆಕ್ಸ್, ಮಾಲ್, ಪ್ರಮುಖ ವಾಣಿಜ್ಯ ಕೇಂದ್ರಗಳು ಓಪನ್ ಇರಲ್ಲ.
  • ಐಟಿಬಿಟಿ ಕೆಲಸಕ್ಕೆ ಹೋಗುವವರು ಹಾಗೂ ಬೇರೆ ರಾಜ್ಯಗಳಿಗೆ ಹೋಗುವವರು ಆ ರಾಜ್ಯದಿಂದ ಎನ್​ಓಸಿ ತರಬೇಕು.
  • ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಗೆ ತೆರಳುವವರು ಇಂದಿನಿಂದ ಆನ್​ಲೈನ್ ಅರ್ಜಿ ಸಲ್ಲಿಸಬೇಕು.  ಆದರಲ್ಲೂ ಸರಿಯಾದ ಕಾರಣವನ್ನು ತಿಳಿಸಬೇಕು.
  • ಕಂಪೆನಿಗಳಿಹಗೆ ಕೆಲಸಕ್ಕೆ ಹೋಗುವವರು ಐಡಿ ಕಾರ್ಡನ್ನು ಜೊತೆಯಲ್ಲಿಟ್ಟುಕೊಂಡಿರಬೇಕು. ಅಗತ್ಯವಿದ್ದಲ್ಲಿ ತೋರಿಸಬೇಕು.
  • ಇನ್ನು ಶಾಲಾ ಕಾಲೇಜು, ದೇವಾಸ್ಥಾನಗಳು ಓಪನ್ ಇರುವುದಿಲ್ಲ.
  • ಸಾರ್ವಜನಿಕರು ಯಾರೂ ನಡೆದುಕೊಂಡು ಹೋಗುವಂತಿಲ್ಲ. ಎಲ್ಲರೂ ವಾಹನಗಳಲ್ಲೇ ಚಲಿಸಬೇಕು.
  • ಜಾಗಿಂಗ್ ಹಾಗೂ ವಾಕಿಂಗ್ ಹೋಗುವವರು ಬೆಳಗ್ಗೆ 7 ರ ತನಕ ವಾಕಿಂಗ್ ಕೂಡ ಹೋಗುವಂತಿಲ್ಲ.
  • ಮೇ 17ರವರೆಗೆ 144 ಸೆಕ್ಷನ್ ಜಾರಿಯಲ್ಲಿರುತ್ತದೆ
  • ಮೇ 4ರಿಂದ ಸಂಜೆ 7 ಗಂಟೆಯಿಂದ ಮರುದಿನ ಬೆಳಗ್ಗೆ 7 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. 

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments