Homeರಾಜ್ಯಚಿತ್ರರಂಗದ ಮೇಲೆ ಮತ್ತೆ ಲಾಕ್ ಡೌನ್ ಹೇರಬೇಡಿ : ದುನಿಯಾ ವಿಜಯ

ಚಿತ್ರರಂಗದ ಮೇಲೆ ಮತ್ತೆ ಲಾಕ್ ಡೌನ್ ಹೇರಬೇಡಿ : ದುನಿಯಾ ವಿಜಯ

ಶಿವಮೊಗ್ಗ: ಶಿವಮೊಗ್ಗದಲ್ಲಿ ಕ್ರಿಕೆಟ್ ಆಟವಾಡಿ, ಚಿತ್ರರಂಗದ ಮೇಲೆ ಲಾಕ್ ಡೌನ್ ಹೇರಬೇಡಿ ಎಂದು ಖ್ಯಾತ ನಾಯಕ ನಟ ದುನಿಯಾ ವಿಜಿ ಮನವಿ ಮಾಡಿಕೊಂಡಿದ್ದಾರೆ. 

ನಿನ್ನೆ ರಾತ್ರಿ ಶಿವಮೊಗ್ಗದ ಎನ್.ಇ.ಎಸ್. ಮೈದಾನದಲ್ಲಿ, ಕ್ರಿಕೆಟ್ ಆಡವಾಡುವುದಕ್ಕೂ ಮುನ್ನ ಮಾದ್ಯಮಗಳೊಂದಿಗೆ ಮಾತನಾಡಿದ ದುನಿಯಾ ವಿಜಿ, ಈಗಾಗಲೇ ಒಂದು ವರ್ಷದಿಂದ ನಾವು ನಲುಗಿ ಹೋಗಿದ್ದೇವೆ. ಕಳೆದೊಂದು ವರ್ಷದಿಂದ ಚಿತ್ರರಂಗದಲ್ಲಿ ಯಾವುದೇ ಚಟುವಟಿಕೆಗಳು ನಡೆದಿಲ್ಲ.  ಈಗಷ್ಟೇ ದೊಡ್ಡ ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆಗೊಳ್ಳುತ್ತಿವೆ. ಚಿತ್ರರಂಗದವರು ಸೇರಿದಂತೆ, ನಿರ್ಮಾಪಕರು ಈಗಿನ್ನು ಚೇತರಿಸಿಕೊಳ್ಳುತ್ತಿದ್ದಾರೆ. ಪ್ರೇಕ್ಷಕರು ಮಾಸ್ಕ್, ಸ್ಯಾನಿಟೈಸರ್ ಬಳಸಿಕೊಂಡು ಮುನ್ನೆಚ್ಚರಿಕೆಯಿಂದ ಸಿನಿಮಾ ವೀಕ್ಷಿಸಲಿ.  ಅಲ್ಲದೇ, ಈಗಾಗಲೇ, ಈ ಬಗ್ಗೆ ಮುಖ್ಯಮಂತ್ರಿಗಳು ಥಿಯೇಟರ್ ಮೇಲಿನ ಶೇ. 50 ರಷ್ಟರ ನಿಯಮ ಹೇರಲ್ಲ ಎಂದು ಸ್ಪಷ್ಟನೆ ಕೂಡ ನೀಡಿದ್ದಾರೆ. ಅವರಲ್ಲಿ ನಾನು ಕೂಡ ಮನವಿ ಮಾಡಿಕೊಳ್ಳುತ್ತೇನೆ. ಚಿತ್ರರಂಗ ಈಗಿನ್ನು ಸುಧಾರಿಸಿಕೊಳ್ಳುತ್ತಿದೆ. ಮತ್ತೆ ಚಿತ್ರರಂಗದ ಮೇಲೆ ಮಾತ್ರ ಲಾಕ್ ಡೌನ್ ಹೇರಬೇಡಿ ಅಂತಾ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ಇನ್ನು ಎನ್.ಇ.ಎಸ್. ಮೈದಾನದಲ್ಲಿ, ದುನಿಯಾ ವಿಜಿ ನೋಡಲು ನೂರಾರು ಅಭಿಮಾನಿಗಳ ದಂಡು ಮೈದಾನಕ್ಕೆ ನುಗ್ಗಿತ್ತು. ದುನಿಯಾ ವಿಜಿ ಕ್ರಿಕೆಟ್ ಆಡಲು ಕೂಡ ಆಗದಂತೆ ಅವರನ್ನು ಮುತ್ತುವರೆದಿದ್ದರು. ತಮ್ಮ ನೆಚ್ಚಿನ ನಾಯಕನನ್ನು ನೋಡಿ, ಪುಳಕಿತಗೊಂಡ ಅಭಿಮಾನಿಗಳು, ಅವರ ಕೈಕುಲುಕಲು ಒದ್ದಾಡಿದರು. ಈ ವೇಳೆ ಪೊಲೀಸರು, ಸೇರಿದ್ದ ಅಭಿಮಾನಿಗಳನ್ನು ದೂರ ತಳ್ಳಿ, ವಿಜಿ ಕ್ರಿಕೆಟ್ ಆಡಲು ಅನುವು ಮಾಡಿಕೊಟ್ಟರು.

LEAVE A REPLY

Please enter your comment!
Please enter your name here

- Advertisment -

Most Popular

Recent Comments