Friday, October 7, 2022
Powertv Logo
Homeದೇಶಸಬರಮತಿ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್ ಹೀಗೆ ಬರೆದಿದ್ದು ಸರಿನಾ? ಅಮೆರಿಕ ಅಧ್ಯಕ್ಷರ​​ ನಡೆಗೆ ನೆಟ್ಟಿಗರು...

ಸಬರಮತಿ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್ ಹೀಗೆ ಬರೆದಿದ್ದು ಸರಿನಾ? ಅಮೆರಿಕ ಅಧ್ಯಕ್ಷರ​​ ನಡೆಗೆ ನೆಟ್ಟಿಗರು ಕಿಡಿ!

ಅಹಮದಾಬಾದ್: ಭಾರತ ಪ್ರವಾಸದಲ್ಲಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಗುಜರಾತ್​ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂದರ್ಶಕರ ಪುಸ್ತಕದಲ್ಲಿ ಮಹಾತ್ಮ ಗಾಂಧೀಜಿಯ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸುವ ಬದಲಾಗಿ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಸಲ್ಲಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಇಂದು ಮಧ್ಯಾಹ್ನ ಅಹಮದಾಬಾದ್​ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಡೊನಾಲ್ಡ್ ಟ್ರಂಪ್​ ಅಲ್ಲಿಂದ ರಸ್ತೆ ಮಾರ್ಗವಾಗಿ ತೆರಳಿ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಆಶ್ರಮದಲ್ಲಿ ಸುಮಾರು 15 ರಿಂದ 20 ನಿಮಿಷ ಕಳೆದ ಡೊನಾಲ್ಡ್​ ಟ್ರಂಪ್​ಗೆ ಪ್ರಧಾನಿ ನರೇಂದ್ರ ಮೋದಿ ಚರಕವನ್ನು ಪರಿಚಯಿಸಿದರು. ಬಳಿಕ ಟ್ರಂಪ್​ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಂದರ್ಶಕರ ಪುಸ್ತಕಕ್ಕೆ ಸಹಿ ಹಾಕಿದರು.

ಇನ್ನು ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್​ ಅವರು ಮಹಾತ್ಮ ಗಾಂಧೀಜಿಯ ಕುರಿತಾದ ಅಭಿಪ್ರಾಯ ವ್ಯಕ್ತಪಡಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇವೆಲ್ಲದರ ವ್ಯತಿರಿಕ್ತವಾಗಿ ಬರೆದ ಟ್ರಂಪ್ ​‘ನನ್ನ ಅತ್ಯುತ್ತಮ ಗೆಳೆಯ ಮೋದಿಗೆ, ಈ ಅಪೂರ್ವ ಭೇಟಿಗೆ ಧನ್ಯವಾದಗಳು’ ಎಂದು ಬರೆದಿದ್ದಾರೆ.

ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್​ ಬರೆದಿರುವ ಅಭಿಪ್ರಾಯ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ, ಟ್ರಂಪ್​ ಗಾಂಧಿಯ ಕುರಿತು ಬರೆದಿದ್ದಾರೋ ಎಂದು ನೋಡಿದರೆ ಇದೇನಿದು? ಎಂದು ಪತ್ರಕರ್ತೆ ಮತ್ತು ಸಾಮಾಜಿಕ ಕಾರ್ಯಕರ್ತೆ ರಾಣಾ ಆಯ್ಯೂಬ್ ಆಕ್ಷೇಪಿಸಿದ್ದಾರೆ.

ಇನ್ನು ಕರ್ನಾಟಕ ಬಿಜೆಪಿ ಕೂಡಾ ಇದೇ ಫೋಟೋವನ್ನು ಟ್ವೀಟ್ ಮಾಡಿದ್ದು, ನರೇಂದ್ರ ಮೋದಿ ಬಗ್ಗೆ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ‘ನಮಸ್ತೆ ಟ್ರಂಪ್‘​ ಎಂಬ ಹ್ಯಾಷ್​ಟ್ಯಾಗ್​ ಮೂಲಕ ಹಂಚಿಕೊಂಡಿದೆ.

ಒಟ್ಟಾರೆ ಟ್ರಂಪ್​ನ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದ್ದಂತೂ ಸುಳ್ಳಲ್ಲ.

 

LEAVE A REPLY

Please enter your comment!
Please enter your name here

- Advertisment -

Most Popular

Recent Comments