ಕೊರೋನಾ ವಿರುದ್ಧದ ಹೋರಾಟಕ್ಕೆ ಸ್ಯಾಂಡಲ್ವುಡ್ ತಾರೆಯರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಬಡವರು, ನಿರಾಶ್ರಿತರಿಗಾಗಿ ಕೆಲವರು ದೇಣಿಗೆ ಕೊಟ್ಟರೆ ಇನ್ನು ಕೆಲವರು ಸ್ವತಃ ಅವರೇ ಬೀದಿಗಿಳಿದು ಸಹಾಯ ಮಾಡುತ್ತಿದ್ದಾರೆ. ಇದೀಗ ಡಾಲಿ ಧನಂಜಯ್ ಕೂಡಾ ಅಂತಹದ್ದೊಂದು ಕೆಲಸಕ್ಕೆ ಕೈ ಹಾಕಿದ್ದಾರೆ.
ಈ ಹಿಂದೆಯು ಧನಂಜಯ್ ತಮ್ಮ ಸಾಮಾಜಿಕ ಕಳಕಳಿಯ ಕೆಲಸಗಳಿಂದ ಅನೇಕರ ಪ್ರೀತಿಯನ್ನು ಗಳಿಸಿದ್ದಾರೆ. ತಾವು ಮಾಡಿದ ಕೆಲಸಕ್ಕೆ ಯಾವುದೇ ರೀತಿಯ ಪ್ರತಿಫಲವನ್ನೂ ಬಯಸದೇ ಎಲ್ಲರಿಗೂ ಸಹಾಯ ಮಾಡುತ್ತಾ ಬಂದಿದ್ದಾರೆ. ಅದೇ ರೀತಿ ಇದೀಗ ಲಾಕ್ಡೌನ್ನಿಂದ ಬಡವರಿಗೆ, ನಿರ್ಗತಿಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಅಂತಹವರಿಗೆ ಧನಂಜಯ್ ಸ್ವತಃ ತಾವೇ ಮುಂದೆಬಂದು ಆಹಾರ ಪೊಟ್ಟಣ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ನೀಡುತ್ತಿದ್ದಾರೆ. ಬೆಂಗಳೂರಿನ ಅನೇಕ ಏರಿಯಾಗಳಲ್ಲಿ ಬಡವರಿಗಾಗಿ ಸುತ್ತಾಡುತ್ತಿದ್ದು, ಅವರ ಕೆಲಸಕ್ಕೆ ಅಭಿಮಾನಿಗಳು ಸಾಥ್ ನೀಡುತ್ತಿದ್ದಾರೆ.
zithromax online pharmacy
zithromax for chlamydia treatment