Home ರಾಜ್ಯ ‘ಮನೆ ಮಾಲೀಕನನ್ನು ರಕ್ಷಿಸಿ ಸಾವಿಗೆ ಶರಣಾದ ಶ್ವಾನ’

‘ಮನೆ ಮಾಲೀಕನನ್ನು ರಕ್ಷಿಸಿ ಸಾವಿಗೆ ಶರಣಾದ ಶ್ವಾನ’

ವಿಜಯಪುರ: ಶ್ವಾನ ಮನುಷ್ಯನ ಅತಿ ನಿಯತ್ತಿನ ಪ್ರಾಣಿ, ತನ್ನನು ಸಾಕಿದ ಯಜಮಾನನ ಮಾನ ಪ್ರಾಣ ಉಳಿಸಲು ಜೀವವನ್ನೇ ಪಣಕ್ಕಿಟ್ಟಿರುವ ಸಾವಿರಾರು ಪ್ರಕರಣ ದೇಶದಲ್ಲಿ‌ನಡೆದು ಹೋಗಿವೆ. ಅಂತದೇ ಒಂದು ಪ್ರಕರಣ ವಿಜಯಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ತನ್ನ ಮಾಲೀಕನ ಜೀವ ಉಳಿಸಲು ಹೋಗಿ ಶ್ವಾನ ಹಾವಿನ ‌ಜತೆ ಸೆಣಸಾಡಿ ಜೀವ ಬಿಟ್ಟಿದೆ. ಈ ಪ್ರಸಂಗ ಈ ಭಾರಿ ಪ್ರಶಂಸೆಗೆ ಕಾರಣವಾಗಿದೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯ ಪಟ್ಟಣ ಪಂಚಾಯಿತಿ ಸದಸ್ಯ ಕಲ್ಲನಗೌಡ ಪಾಟೀಲ ಎಂಬವರ ತೋಟದ ಮನೆಯಲ್ಲಿ ಅವರು ಸಾಕಿದ ರಾಜಾ ಹೆಸರಿನ ಡಾಬರ್ ಮನ್ ಶ್ವಾನ ಹಾವಿನ ಜತೆ ಸೆಣಸಿ ಪ್ರಾಣ ಬಿಟ್ಟಿದೆ.

ಕಳೆದ 9 ವರ್ಷಗಳ ಹಿಂದೆ ಕಲ್ಲನಗೌಡ ಪಾಟೀಲ 5ಸಾವಿರ ರೂ. ನೀಡಿ ಡಾಬರ್ ಮನ್ ಶ್ವಾನವನ್ನು ಖರೀದಿಸಿದ್ದರು. ಅವರ ತೋಟದ ಮನೆಯಲ್ಲಿ ಇದು ಕಾವಲು ಕಾಯುತ್ತಿತ್ತು. ಕಳೆದ ಐದಾರು ತಿಂಗಳಿಂದ ತೋಟದಲ್ಲಿರುವ ನಾಗರ ಹಾವುಗಳು ತೋಟದ ಮನೆಯಲ್ಲಿ ಕಾಣಿಸಿಕೊಂಡಾಗೊಮ್ಮೆ ಈ ಶ್ವಾನ ಅವುಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಕೊಂದಿದೆ. ಇದೇ ರೀತಿ ಕಳೆದ ಮೂರು ದಿನಗಳ ಹಿಂದೆ ತೋಟದಲ್ಲಿ ಮಾಲೀಕ ಕಲ್ಲನಗೌಡ ಪಾಟೀಲ ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡುವಾಗ ಟ್ರ್ಯಾಕ್ಟರ್ ನಲ್ಲಿ 6 ಅಡಿ ಉದ್ದದ ನಾಗರಹಾವು ಸೇರಿಕೊಂಡಿತ್ತು. ಇದನ್ನು ಗಮನಿಸದೇ ಟ್ರ್ಯಾಕ್ಟರ್ ಚಾಲನೆ ಮಾಡಲು ಹೋಗಿದ್ದ ಕಲ್ಲನಗೌಡ ಅವರಿಗೆ ಹಾವು ಕಚ್ಚಬಹುದೆಂದು ಶ್ವಾನ ಅದರ ಮೇಲೆ ಎರಗಿದೆ. ಸುಮಾರು ಹೊತ್ತು ಅದರ ಜೊತೆ ಹೋರಾಡಿ ಅದನ್ನು ಕಚ್ಚಿ ಕೊಂದಿದೆ. ಆದರೆ ಹಾವನ್ನು ಕಚ್ಚಿದ್ದ ಶ್ವಾನದ ದೇಹದೊಳಗೆ ಹಾವಿನ ವಿಷ ಸೇರಿಕೊಂಡು ಹಾವು ಸತ್ತ ಅರ್ಧ ಗಂಟೆ ನಂತರ ಶ್ವಾನ ರಾಜಾ ಸಹ ಸಾವೀಗಿ ಡಾಗಿದೆ. ಶ್ವಾನದ ಮಾಲೀಕ ಮೇಲಿನ ನಿಯತ್ತು ಊರಿಗೆ ಊರೆ ಶ್ವಾನದ ಗುಣಗಾನ ಮಾಡಿದ್ದಾರೆ. ಕಲ್ಲನಗೌಡ ಪಾಟೀಲ ಸಹ ತನ್ನ ಶ್ವಾನದ ಸಾವಿಗೆ ಮಮ್ಮಲು‌ ಮರಗಿದ್ದಾರೆ. ತನ್ನ ಪ್ರಾಣ ಉಳಿಸಲು ಹೋಗಿ ಶ್ವಾನ ಸಾವನ್ನಪ್ಪಿದ್ದಕ್ಕೆ ಅದೇ ತೋಟದಲ್ಲಿ ಶ್ವಾನಕ್ಕೆ ಸಮಾಧಿ ನಿರ್ಮಿಸಲು ಮುಂದಾಗಿದ್ದಾರೆ.

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಏನೆಲ್ಲಾ ಮಾಡುತ್ತಾನೆ. ಆದರೆ ನಿಯತ್ತಿನ ಪ್ರಾಣಿ ಶ್ವಾನಗಳು ಮಾತ್ರ ತಮಗೆ ಅನ್ನ ಹಾಕಿದ ಯಜಮಾನನಿಗೆ ತೊಂದರೆಯಾದರೆ ಸಾಯಲು ಹಿಂಜರಿಯುವದಿಲ್ಲ ಎನ್ನುವದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

ನಿಖಿಲ್ ಕುಮಾರ್ ಸ್ವಾಮಿಗೂ ಕೊರೋನಾ ಪಾಸಿಟಿವ್

ಬೆಂಗಳೂರು : ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಅವರಿಗೂ ಕೊರೋನಾ ಪಾಸಿಟಿವ್ ವರದಿಯಾಗಿತ್ತು ಈಗ ನಿಖಿಲ್ ಅವರಿಗೂ ಪಾಸಿಟಿವ್ ಬಂದಿದೆ. ಇಂದು ನಿಖಿಲ್ ಅವರ ಮೊದಲನೇ ವಾರ್ಷಿಕೋತ್ಸವವೂ ಆಗಿದೆ.  ನಾನು ಇಂದು...

ವಿವಾಹಕ್ಕೆ 100 – 200, ಅಂತ್ಯಸಂಸ್ಕಾರಕ್ಕೆ 25 – 50 ಜನ ಮಾತ್ರ

ಬೆಂಗಳೂರು : ಸಿಎಂ ಯಡಿಯೂರಪ್ಪನವರು ಕೊರೋನಾ ಕಾರಣದಿಂದ ಆಸ್ಪತ್ರೆಗೆ ದಾಖಲಾದ ಕಾರಣ ಸಚಿವ ಸುಧಾಕರ್ ಮತ್ತು ಬೊಮ್ಮಾಯಿ ಅವರು ಸಭೆ ನಡೆಸಿ ರಾಜ್ಯದಲ್ಲಿ ಇನ್ಮೇಲೆ ಟಫ್ ರೂಲ್ಸ್ ಶುರುವಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ.  ಕೊವಿಡ್ ನಿಯಮ...

ಕೊರೋನಾ ಇಲ್ಲ ಅಂದವರ ಕಪಾಳಕ್ಕೆ ಬಾರಿಸಿ: ಸುನೇತ್ರ

ಬೆಂಗಳೂರು: ಕೊರೋನಾಗೆ ನಟಿ ಸುನೇತ್ರ ಪಂಡಿತ್ ಸಹೋದರಿ ಸಾವನ್ನಪ್ಪಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಎಂದು ನಟಿ ಸುನೇತ್ರ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರೋ ಓರ್ವ ಅಧಿಕಾರಿಯಿಂದ ನನ್ನ ಸಹೋದರಿ ಸಾವಾಗಿದೆ ಎಂದು ಸುಮನಹಳ್ಳಿ ಚಿತಾಗಾರ...

‘ಹೆಚ್.ಡಿ.ಕುಮಾರಸ್ವಾಮಿಗೆ ಕೊರೋನಾ ದೃಡ’     

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಕೊರೋನಾ ದೃಡ ಪಟ್ಟಿದೆ. ಸಂಪರ್ಕದಲ್ಲಿದ್ದವರಿಗೆ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಟ್ವೀಟ್ ಮೂಲಕ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.  ಕುಮಾರಸ್ವಾಮಿ ಶೀಘ್ರವಾಗಿ ಆರೋಗ್ಯ ಸುಧಾರಣೆ ಆಗಲಿ ಎಂದು ಗಣ್ಯರು...

Recent Comments