Friday, September 30, 2022
Powertv Logo
Homeರಾಜ್ಯನಾಯಿ ಬೊಗಳಿದ್ದಕ್ಕೆ ಗೇಟ್ ತೆಗೆದು ಕಾಂಪೌಂಡ್ ಒಳಕ್ಕೆ ಬಂದ ಒಂಟಿ ಸಲಗ

ನಾಯಿ ಬೊಗಳಿದ್ದಕ್ಕೆ ಗೇಟ್ ತೆಗೆದು ಕಾಂಪೌಂಡ್ ಒಳಕ್ಕೆ ಬಂದ ಒಂಟಿ ಸಲಗ

ಹಾಸನ : ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ನಿತ್ಯವೂ ಜನರ ನಿದ್ದೆಗೆಡಿಸಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಉದೇವಾರ ಸಮೀಪದ ಅಂಬಿಕ ಎಸ್ಟೇಟ್ ಬಳಿ ಒಂಟಿ ಸಲಗ ಸಾಗುತ್ತಿದ್ದಾಗ ನಾಯಿ ಬೊಗಳಿದೆ, ಇದನ್ನು ಕಂಡ ಒಂಟಿ ಸಲಗ ಗೇಟ್ ತೆಗೆದು ಕಾಂಪೌಂಡ್ ಒಳಗೆ ಬಂದಿದೆ. ಬಳಿಕ ನಾಯಿಗಳು ಹೆದರಿ ಹಿಂದಕ್ಕೆ ಹೋಗಿವೆ, ರಾತ್ರಿ ವೇಳೆ ಈ ಘಟನೆ ನಡೆಸಿದ್ದು, ನಾಯಿಗಳು ಬೊಗಳುವುದು, ಒಂಟಿ ಸಲಗ ಮನೆಯ ಗೇಟ್ ತೆಗೆದು ಒಳಬಂದಿರುವ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾಂಪೌಂಡ್ ಒಳಗೆ ಕೆಲ ನಿಮಿಷವಿದ್ದು ಗಜರಾಜ ನಂತರ ತೆರಳಿದೆ. ಮಲೆನಾಡು ಭಾಗದ ಜನರು ಒಂದೆಡೆ ಬೆಳೆ ನಾಶ ಮತ್ತೊಂದೆಡೆ ಜೀವ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಕಾಡಾನೆ ಹಾವಳಿ ತಪ್ಪಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

18 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments