Sunday, May 29, 2022
Powertv Logo
Homeರಾಜ್ಯಕೋಲಾರದಲ್ಲಿ ಕೊರೋನಾ ಟೆಸ್ಟ್ ವರದಿ ಬಾರದ ಹಿನ್ನೆಲೆ - ಖಾಸಗಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಪ್ರತಿಭಟನೆ

ಕೋಲಾರದಲ್ಲಿ ಕೊರೋನಾ ಟೆಸ್ಟ್ ವರದಿ ಬಾರದ ಹಿನ್ನೆಲೆ – ಖಾಸಗಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಪ್ರತಿಭಟನೆ

ಕೋಲಾರ: ಕೋಲಾರದಲ್ಲಿ ಕೊರೋನಾ ಟೆಸ್ಟ್ ವರದಿ ಬಾರದ ಹಿನ್ನಲೆ ಕ್ವಾರಂಟೈನ್​ನಲ್ಲಿದ್ದ ವೈದ್ಯ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ ನಡೆಸಿದರು. ಕೋಲಾರದ ಶ್ರೀನಿವಾಸಪುರ ಪಟ್ಟಣದ ಶ್ರೀ ವೆಂಕಟೇಶ್ವರ ಆಸ್ಪತ್ರೆ ಮುಂಭಾಗ ವೈದ್ಯ ಡಾ.ವೆಂಕಟಾಚಲಪತಿ ಹಾಗೂ ಅವರ ಸಿಬ್ಬಂದಿ ಪ್ರತಿಭಟನೆ ನಡೆಸಿದ್ರು.

ಜೂನ್ 8 ರಂದು ಜ್ವರ, ಕೆಮ್ಮು ಎಂದು ಬಂದ ರೋಗಿಗೆ, ಡಾ.ವೆಂಕಟಾಚಲ ಚಿಕಿತ್ಸೆ ನೀಡಿದ್ದರು. ಕೊರೋನಾ ರೋಗ ಲಕ್ಷಣಗಳು ಕಂಡು ಬಂದ ಹಿನ್ನಲೆ ರೋಗಿಯನ್ನು ಕೊರೋನಾ ಟೆಸ್ಟ್ ಮಾಡಿಸುವುದಕ್ಕೆ ಸೂಚನೆ ನೀಡಲಾಗಿತ್ತು. ಜೊತೆಗೆ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ರೋಗಿಯನ್ನು ಪರಿಶೀಲಿಸಿದ ವೇಳೆ, ಆತನಿಗೆ ಕೊರೋನಾ ಸೋಂಕು ಇರುವುದು ದೃಢವಾಗಿತ್ತು. ಈ ಹಿನ್ನಲೆ ಆರೋಗ್ಯ ಇಲಾಖೆ ಅಧಿಕಾರಿಗಳು ವೆಂಕಟೇಶ್ವರ ಆಸ್ಪತ್ರೆಯ ವೈದ್ಯ ವೆಂಕಟಾಚಲಪತಿ, ಸಿಬ್ಬಂದಿ ಸೇರಿದಂತೆ ಸುಮಾರು 12 ಜನರನ್ನು ಅದೇ ಆಸ್ಪತ್ರೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿತ್ತು. ಜೊತೆಗೆ ಜೂನ್ 12 ರಂದು ವೈದ್ಯ ಹಾಗೂ ಸಿಬ್ಬಂದಿಯವರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಕೊರೋನಾ ಟೆಸ್ಟ್ ಮಾಡಲಾಗಿತ್ತು.

ಆದ್ರೆ, ಕೊರೋನಾ ಟೆಸ್ಟ್ ಮಾಡಿ ಆರು ದಿನಗಳು ಕಳೆದಿದ್ದರೂ ಇದುವರೆಗೂ ವರದಿ ಬಾರದ ಹಿನ್ನಲೆ ವೈದ್ಯ ಹಾಗೂ ಅವರ ಸಿಬ್ಬಂದಿ, ಕ್ವಾರಂಟೈನ್​ನಿಂದ ಹೊರಬಂದು ಆಸ್ಪತ್ರೆ ಮುಂಭಾಗ ಪ್ರತಿಭಟನೆ ಮಾಡಿದ್ದಾರೆ. ಅಲ್ಲದೆ ಶೀಘ್ರ ವರದಿ‌ ನೀಡದೆ ವಿಳಂಬ ಮಾಡುತ್ತಿರುವ ಹಿನ್ನೆಲೆ, ಜನರ ಮಾನಸಿಕ ಜೀವನದ ಮೇಲೆ ಪರಿಣಾಮ ಬೀರುವುದರಿಂದ, ಆರೋಗ್ಯ ಇಲಾಖೆಯವರು, ಜನರ ಜೀವನದಲ್ಲಿ ಚೆಲ್ಲಾಟವಾಡುತ್ತಿದ್ದಾರೆಂದು ಆರೋಪಿಸಿದರು. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಶ್ರೀನಿವಾಸಪುರ ಠಾಣಾ ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಿದರು.

LEAVE A REPLY

Please enter your comment!
Please enter your name here

- Advertisment -

Most Popular

Recent Comments