Home ರಾಜ್ಯ ಈ ವ್ಯಕ್ತಿ ಅಧಿಕಾರಿಗಳ ಮುಂದೆ ತಲೆ ಕೆಳಗೆ ಮಾಡಿ ನಿಂತಿದ್ದು ಯಾಕೆ ಗೊತ್ತಾ?

ಈ ವ್ಯಕ್ತಿ ಅಧಿಕಾರಿಗಳ ಮುಂದೆ ತಲೆ ಕೆಳಗೆ ಮಾಡಿ ನಿಂತಿದ್ದು ಯಾಕೆ ಗೊತ್ತಾ?

ಶಿವಮೊಗ್ಗ: ಒಂದು ಕಡೆ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.  ಮತ್ತೊಂದು ಕಡೆ ಮಾಸ್ಕ್ ಸ್ಯಾನಿಟೈಸರ್ ಬಳಕೆ ಕೂಡ ಕಡ್ಡಾಯ ಮಾಡಲಾಗಿದೆ.  ಆದರೆ ಇಲ್ಲೊಬ್ಬರು ಕೊರೋನಾನೆ ಇಲ್ಲ.  ಆರೋಗ್ಯವಂತರು ಮಾಸ್ಕ್ ಹಾಕಬೇಕೇಂದೇನೂ ಇಲ್ಲ ಎಂದಿರುವ ಕರಪತ್ರ ತೋರಿಸಿ ಅಧಿಕಾರಿಗಳಿಗೆ ಬೆದರಿಸಿದ್ದಾರೆ.  ಅಷ್ಟೇ ಅಲ್ಲ, ತಲೆ ಕೆಳಗೆ, ಕಾಲು ಮೇಲೆ ಮಾಡಿ ನಿಂತು ಚಪ್ಪಲಿ ಬೇರೆ ತೋರಿಸಿ ಆಶ್ಚರ್ಯ ಮೂಡಿಸಿದ್ದಾರೆ.  ಹೌದು, ಇದು ಆಶ್ಚರ್ಯವಾದರೂ ಸತ್ಯವಾಗಿದ್ದು ಇದೀಗ ಈ ವ್ಯಕ್ತಿ ಬಂಧನಕ್ಕೊಳಗಾಗಿದ್ದಾರೆ.  ಅಂದಹಾಗೆ, ಶಿವಮೊಗ್ಗದ ಈ ವ್ಯಕ್ತಿ ಹೆಸರು ಟಿ.ಆರ್. ಕೃಷ್ಣಪ್ಪ ಅಂತಾ.  ಸಾಮಾಜಿಕ ಹೋರಾಟಗಾರಾಗಿರುವ ಇವರು, ಎಂತಹ ಅಧಿಕಾರಿಗಳನ್ನೇ ಆಗಲಿ ನಡುಗಿಸುತ್ತಾರೆ.  ಕೆಲವಾರು ವಿಚಾರಗಳಲ್ಲಿ ಬೆಂಗಳೂರಿನವರೆಗೂ, ಪಾದಯಾತ್ರೆ, ಸೈಕಲ್ ಅಭಿಯಾನ ಕೂಡ ನಡೆಸಿ, ಸರ್ಕಾರಕ್ಕೆ ಬಿಸಿ ಕೂಡ ಮುಟ್ಟಿಸಿದ್ದಾರೆ.  ಇದೀಗ ಮಾಸ್ಕ್ ಹಾಕದೆ, ಅಧಿಕಾರಿಗಳಿಗೆ ನಿಂದನೆ ಮಾಡಿದ್ದು ಬಂಧನಕ್ಕೊಳಗಾಗಿದ್ದಾರೆ.

ಅಂದಹಾಗೆ ರಿಪ್ಪನ್‌ಪೇಟೆಯಲ್ಲಿ ಜನತಾ ಕರ್ಪ್ಯೂ ನಿಯಂತ್ರಣ ಕಾರ್ಯದಲ್ಲಿ ತೊಡಗಿದ್ದ ತಹಶೀಲ್ದಾರ್‌ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಮಾಸ್ಕ್ ಹಾಕದೆ ತಿರುಗಾಡುತ್ತಿದ್ದ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ ಟಿ.ಆರ್‌. ಕೃಷ್ಣಪ್ಪನವರನ್ನು ಕರೆದು ವಿಚಾರಣೆ ನಡೆಸಿದ್ದಾರೆ.  ಈ ವೇಳೆ ಅವಾಚ್ಯವಾಗಿ ನಿಂದನೆಯ ಮಾತುಗಳನ್ನಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಕೃಷ್ಣಪ್ಪ, ಅರೋಗ್ಯವಂತ ವ್ಯಕ್ತಿ ಮಾಸ್ಕ್  ಹಾಕಬೇಕು ಎಂಬ ನಿಯಮ ಏನು ಇಲ್ಲ ಎಂಬ ಕರಪತ್ರದ ತುಣಕು ತೋರಿಸಿ, ಎಲ್ಲಿದೆ ಕೊರೊನಾ !!? ನಾನು ಕಪ್ಪಾಗಿದ್ದೇನೆಂದು ನನ್ನ ಹತ್ತಿರ ಅದು ಬರದು..! ಯಾರು ನನ್ನನ್ನು ಏನೋ ಮಾಡಿಕೊಳ್ಳಲು ಸಾಧ್ಯ? ನಾನು ಮಾಸ್ಕ್ ಹಾಕುವುದಿಲ್ಲ ಎಂದು ದರ್ಪದ ಮಾತುಗಳನ್ನಾಡಿದ್ದಾರಂತೆ.  ಈ ರೀತಿ ಉಡಾಫೆಯ ಉತ್ತರ ನೀಡಿ ನಿಂದಿಸಿ ಅಸಭ್ಯವಾಗಿ ವರ್ತಿಸಿದ್ದಲ್ಲದೆ ನಾನು ಆರೋಗ್ಯವಾಗಿದ್ದೇನೆ ಎಂದು ರಸ್ತೆಯಲ್ಲಿಯೇ ತಲೆ ಕೆಳಗಾಗಿ ಕಾಲು ಮೇಲೆ ಮಾಡಿ ನಿಂತುಕೊಳ್ಳುವುದರೊಂದಿಗೆ ಅಧಿಕಾರಿಗಳಿಗೆ ಚಪ್ಪಲಿ ತೋರಿಸಿದ್ದಾರೆ.  ಈ ಘಟನೆಯಿಂದ ಪ್ರತ್ಯಕ್ಷದರ್ಶಿಗಳು ಕೆಲಕಾಲ ನಿಬ್ಬೆರಗಾಗಿದ್ದಾರೆ.

ಈ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪಿಡಿಓ ಜಿ. ಚಂದ್ರಶೇಖರ್ ರಿಪ್ಪನ್‌ಪೇಟೆ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಅರೋಪಿಯನ್ನು ಬಂಧಿಸಿದ್ದಾರೆ.  ಅಲ್ಲದೇ, ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

ಬೈಕ್‌ ಅಪಘಾತದಲ್ಲಿ ನಟ ಸಂಚಾರಿ ವಿಜಯ್‌ ಗೆ ಗಂಭೀರ ಗಾಯ..

ಬೆಂಗಳೂರು :  ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ಗೆ ಅಪಘಾತವಾಗಿದ್ದು, ಸಂಚಾರಿ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಸಂಚಾರಿ ವಿಜಯ್ ತಲೆಗೆ...

Recent Comments