Saturday, October 1, 2022
Powertv Logo
Homeಸಿನಿಮಾ'ಮಾಲ್ಗುಡಿ ಡೇಸ್​​ನ 'ಮಾಲ್ಗುಡಿ' ಎಲ್ಲಿದೆ ಗೊತ್ತಾ?

‘ಮಾಲ್ಗುಡಿ ಡೇಸ್​​ನ ‘ಮಾಲ್ಗುಡಿ’ ಎಲ್ಲಿದೆ ಗೊತ್ತಾ?

ಮಾಲ್ಗುಡಿ! ಸಾಮಾನ್ಯವಾಗಿ ಈ ಹೆಸರು ನೀವೆಲ್ಲಾ ಕೇಳಿರ್ತೀರಿ. ಕೆಲವರು ಮಾಲ್ಗುಡಿ ಅಂತ ಊರಿದೆ ಅಂತಲೂ ಅಂದುಕೊಂಡಿರ್ಬಹುದು! ಆದರೆ, ವಾಸ್ತವದಲ್ಲಿ ‘ಮಾಲ್ಗುಡಿ’ ಎಂಬ ಊರೇ ಇಲ್ಲ!

ಹಾಗಾದರೆ ಶಂಕರ್ ನಾಗ್ ‘ಮಾಲ್ಗುಡಿ ಡೇಸ್’ ಎಂಬ ಟೆಲಿ ಸೀರಿಯಲ್​ನಲ್ಲಿ ತೋರಿಸಿರೋ ಮಾಲ್ಗುಡಿ ಯಾವ್ದು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು..! ಆರ್.ಕೆ ನಾರಾಯಣ್ ಅವರ ‘ಮಾಲ್ಗುಡಿ  ಡೇಸ್’ ಆಧಾರಿತ ಹಿಂದಿ ಸೀರಿಯಲ್ ‘ಮಾಲ್ಗುಡಿ ಡೇಸ್’. ಆರ್.ಕೆ ನಾರಾಯಣ್ ಅವರು ಮೈಸೂರಿನವರು ಆಗಿರೋದ್ರಿಂದ ‘ಮಾಲ್ಗುಡಿ’ ಮೈಸೂರಿನ ಯಾವ್ದೋ ಹಳ್ಳಿ ಇರ್ಬಹುದು ಅಂತ ಎಷ್ಟೋ ಜನ ಅನ್ಕೊಂಡಿದ್ದಾರೆ. ಆದರೆ, ಮೈಸೂರಲ್ಲಿ ಈ ಹೆಸರಿನ ಊರೇ ಇಲ್ಲ! ಮಾಲ್ಗುಡಿ ಅನ್ನೋದು ಆರ್. ಕೆ. ಎನ್ ಅವರ ಸೃಷ್ಟಿ! ಅಂದ್ರೆ,ಅದು ಕಾಲ್ಪನಿಕ ಪ್ಲೇಸ್ ಅಷ್ಟೇ.

ಶಂಕರ್ ನಾಗ್ ಅವರು ಡೈರೆಕ್ಷನ್ ಮಾಡಿ, ಆ್ಯಕ್ಟ್ ಮಾಡಿರೋ ‘ಮಾಲ್ಗುಡಿ ಡೇಸ್ ‘ನ ಮಾಲ್ಗುಡಿ ಮಲೆನಾಡಿನ ಆಗುಂಬೆ..! ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾಗಿರೋ ಆಗುಂಬೆಯೇ ಶಂಕರ್ ನಾಗ್ ಅವರ ‘ಮಾಲ್ಗುಡಿ’! ಮಾಲ್ಗುಡಿ ಡೇಸ್ ನ ಶೂಟಿಂಗ್ ಆಗಿದ್ದು ಇಲ್ಲಿಯೇ ಎಂಬುದು ಎಷ್ಟೋ ಜನರಿಗೆ ಗೊತ್ತೇ ಇಲ್ಲ!

8 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments