ಪಾಕ್​ ಮಾಧ್ಯಮಗಳಲ್ಲಿ ಹಸಿ ಹಸಿ ಸುಳ್ಳು ಸುದ್ದಿ ಪ್ರಸಾರ..!

0
288

ಇಸ್ಲಮಾಬಾದ್ : ಟೆರರಿಸ್ತಾನ್ ಅಂತ ಜಾಗತಿಕ ಮಟ್ಟದಲ್ಲಿ ಉಗಿಸಿಕೊಳ್ಳುತ್ತಿರುವ ಪಾಕಿಸ್ತಾನದ ಮಾಧ್ಯಮಗಳು ಪತ್ರಿಕಾ ಧರ್ಮವನ್ನು ಮರೆತಿವೆ. ಯಥಾ ರಾಜ ತಥಾ ಪ್ರಜಾ ಅನ್ನುವಂತೆ ರಣಹೇಡಿ ರಾಷ್ಟ್ರದ ಮಾಧ್ಯಮಗಳಿಂದ ಹಸಿಹಸಿ ಸುಳ್ಳು ಸುದ್ದಿಗಳನ್ನಲ್ಲದೆ ಮತ್ತೇನನ್ನೂ ನಿರೀಕ್ಷಿಸಲೂ ಸಾಧ್ಯವಿಲ್ಲ.
 ‘ಪಾಕ್​ ಭಾರತದ ವಿಮಾನವನ್ನು ಹೊಡೆದುರುಳಿಸಿದೆ’ ಅಂತ ಸುಳ್ಳು ಸುದ್ದಿಯನ್ನು  ಬಿತ್ತರಿಸುವಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿವೆ ಪಾಕ್​ ಮಾಧ್ಯಮಗಳು..! ಸೋಶಿಯಲ್ ಮೀಡಿಯಾದಲ್ಲಿ ಮತ್ತು ಟೆಲಿವಿಷನ್​ ವಾಹಿನಿಗಳಲ್ಲಿ ಸುಳ್ಳು ಸುದ್ದಿ ವೈರಲ್ ಆಗುತ್ತಿದೆ. 2016ರಲ್ಲಿ ಪತನಗೊಂಡಿದ್ದ ವಿಮಾನದ ಚಿತ್ರ ತೋರಿಸಿ, ಬುಡ್ಗಾಮ್​ನಲ್ಲಿ ಪಾಕ್​ ಭಾರತದ ವಿಮಾನವನ್ನು ಹೊಡೆದುರುಳಿಸಿದೆ ಅಂತ ಬಿಂಬಿಸುತ್ತಿದ್ದಾರೆ.
ಅಲ್ಲಿನ ಮಾಧ್ಯಮಗಳು ಪ್ರಸಾರ ಮಾಡ್ತಿರೋ ಈ ಸುದ್ದಿಯನ್ನು ಪಾಕ್ ಆರ್ಮಿಯೇ ಅಲ್ಲಗಳೆದಿದೆ. ಅಲ್ಲಿನ ಸೇನಾ ಮುಖ್ಯಸ್ಥ ಆಸಿಫ್​ ಗಫೂರ್​ ಅವರು, ಭಾರತದ ಯಾವ್ದೇ ವಿಮಾನವನ್ನು ನಾವು ಹೊಡೆದುರುಳಿಸಿಲ್ಲ. ಅದೆಲ್ಲಾ ಸುಳ್ಳು ಸುದ್ದಿ ಅಂತ ಹೇಳಿದ್ದಾರೆ. ಹೀಗೆ ಪಾಕ್​ ಮತ್ತು ಅಲ್ಲಿನ ಮಾಧ್ಯಮಗಳ ಗೋಸುಂಬಿತನ ಬಯಲಾಗಿದೆ.

LEAVE A REPLY

Please enter your comment!
Please enter your name here