ಬೆಂಗಳೂರು: ಕರ್ನಾಟಕದಲ್ಲಿ ಬುಲ್ಡೋಜರ್ ಮಾಡೆಲ್ ಜಾರಿ ವಿಚಾರವಾಗಿ ಬಿಜೆಪಿ ಶಾಸಕರ ಒತ್ತಡಕ್ಕೆ ಡಿ.ಕೆ.ಶಿವಕುಮಾರ್ ಕಿಡಿ ಕಾಡಿದ್ದಾರೆ.
ಬಿಜೆಪಿಯವರು ಕರ್ನಾಟಕವನ್ನ ಸ್ವಲ್ಪ ಶಾಂತಿಯಿಂದ ಇರಲು ಬಿಟ್ಟರೆ ಸಾಕು. ನಾನು ಈಗಲೇ ಬುಲ್ಡೋಜರ್ ಮಾಡೆಲ್ ಬಗ್ಗೆ ಮಾತಾಡಲ್ಲ. ಹುಬ್ಬಳ್ಳಿ ಘಟನೆಗೆ ಕಾಂಗ್ರೆಸ್ ಭಾಗಿ ವಿಚಾರವಾಗಿ ಮಾತನಾಡಿದ ಅವರು ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ ಏನೇ ಆದ್ರೂ ಕಾಂಗ್ರೆಸ್ ಕಾರಣ ಅಂತಾರೆ. ನಮ್ಮ ಜಿಲ್ಲಾ ಅಧ್ಯಕ್ಷ ಗಾಡಿ ಮೇಲೆ ನಿಂತುಕೊಳ್ಳಲು ಆಗುತ್ತಾ? ಅಲ್ತಾಪ್ ಘಟನೆಯಲ್ಲಿ ಗಾಯಾಳುಗಳಿಗೆ ಸಹಾಯ ಮಾಡಿದ್ದಾರೆ. ಯಾರೇ ಇದ್ರೂ ಒದ್ದು ಒಳಗೆ ಹಾಕಲಿ. ನಾನು ಕೂಡ ಕಮಿಷನರ್ ಭೇಟಿ ಮಾಡಿದ್ದೇನೆ. ಕೇವಲ ಬಿಜೆಪಿ ನಾಯಕರು ಆರೋಪ ಮಾಡ್ತಾರೆ. ಸಿಎಂ ಮನೆಗೆ ಮುತ್ತಿಗೆ ಹಾಕಿದ್ದಕ್ಕೆ ಕೇಸ್ ಹಾಕಿದ್ರು. ಈಶ್ವರಪ್ಪ ಮೆರವಣಿಗೆ ಮಾಡಿದ್ರು ಕೇಸ್ ಹಾಕಿದ್ರಾ? ಎಂದು ಡಿಕೆಶಿ ಬಿಜೆಪಿ ಶಾಸಕರ ಮೇಲೆ ವಾಗ್ದಾಳಿ ಮಾಡಿದ್ದಾರೆ.