ನವದೆಹಲಿ : ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಂತಕರು ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಾನೂನಿನಲ್ಲಿ ಏನೇನು ಮಾರ್ಗಗಳಿದೆಯೋ ಎಲ್ಲವನ್ನೂ ಹುಡುಕುತ್ತಿದ್ದಾರೆ. ಮಾರ್ಚ್ 20ರಂದು ನಿಗದಿಯಾಗಿರುವ ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಈಗಾಗಲೇ ಅಂತರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅದರ ಬೆನ್ನಲ್ಲೇ ವಿಚ್ಛೇದನಕ್ಕಾಗಿ ಅಪರಾಧಿಯೊಬ್ಬನ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇನ್ನುಈ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಅಕ್ಷಯ್ ಠಾಕೂರ್ ಅವರ ಪತ್ನಿ ವಿಚ್ಛೇದನಕ್ಕಾಗಿ ಬಿಹಾರದ ಔರಂಗಬಾದ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಕ್ಷಯ್ ಮೂಲತಃ ಔರಂಗಾಬಾದ್ನ ಲಹಂಗ್ನ ನಿವಾಸಿಯಾಗಿರುವ ಕಾರಣದಿಂದಾಗಿ ಇಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿದೆ. ನನ್ನ ಪತಿ ಅಕ್ಷಯ್ ನಿರ್ದೋಷಿ, ಆದರೂ ನ್ಯಾಯಾಲಯ ಆತನನ್ನು ಅಪರಾಧಿ ಎಂದು ಹೇಳಲಾಗುತ್ತಿದೆ. ನಾನು ಆತನ ವಿಧವಾ ಪತ್ನಿಯಾಗಿ ಬಾಳಲಾರೆ ಆದ್ದರಿಂದ ನನಗೆ ಆತನಿಂದ ವಿಚ್ಛೇದನ ನೀಡಬೇಕೆಂದು ಅಕ್ಷಯ್ ಪತ್ನಿ ಪುನೀತಾ ಕೋರಿದ್ದಾರೆ.
ಕಾನೂನಿನಲ್ಲಿ ಅವಕಾಶ ಇದ್ಯಾ? : ಹಿಂದು ವಿವಾಹ ಅಧಿನಿಯಮ 13.2.2ರ ಅನ್ವಯ ಅಕ್ಷಯ್ ಪತ್ನಿ ಪುನಿತಾ ವಿಚ್ಛೇದನ ಪಡೆಯಲು ಅರ್ಹರಾಗಿದ್ದಾರೆ. ಈ ಅಧಿನಿಯಮದ ಅಡಿಯಲ್ಲಿಯೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಪುನೀತಾ ಪರ ವಕೀಲ ಮುಖೇಶ್ ಕುಮಾರ್ ಹೇಳಿದ್ದಾರೆ. ಇನ್ನು ಈ ಅರ್ಜಿಯ ವಿಚಾರಣೆಯನ್ನು ಮಾರ್ಚ್ 19 ರಂದು ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ.