Sunday, May 29, 2022
Powertv Logo
Homeರಾಜ್ಯಸಾಕ್ಷಿ ಸಾಬೀತು ಆದ್ರೆ ಪೀಠ ತ್ಯಾಗ ಮಾಡಲು ಸಿದ್ಧ : ದಿಂಗಾಲೇಶ್ವರ ಸ್ವಾಮೀಜಿ

ಸಾಕ್ಷಿ ಸಾಬೀತು ಆದ್ರೆ ಪೀಠ ತ್ಯಾಗ ಮಾಡಲು ಸಿದ್ಧ : ದಿಂಗಾಲೇಶ್ವರ ಸ್ವಾಮೀಜಿ

ಗದಗ : ಕಾವಿ ಹಾಗೂ ಖಾದಿ ವಾಕ್ ಸಮರ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣ್ತಿಲ್ಲ. ಸ್ವಾಮೀಜಿ ಪೂರ್ವಾಶ್ರಮ ಬಲ್ಲೆವು ಎಂಬ ಸಚಿವ ಸಿ.ಸಿ ಪಾಟೀಲ ಹೇಳಿಕೆಗೆ ದಿಂಗಾಲೇಶ್ವರ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವರು ಪೂರ್ವಾಶ್ರಮದ ಬಗ್ಗೆ ಸಾಬೀತು ಮಾಡ್ಲಿ. ಸಚಿವರು ಸಾಬೀತು ಪಡಿಸಿದ ದಿನವೇ ಪೀಠ ತ್ಯಾಗ ಮಾಡಲು ಸಿದ್ಧನಿದ್ದೇನೆ. ಸಚಿವರ ಕೈನಲ್ಲಿ ಸರ್ಕಾರ, ಅಧಿಕಾರ, ಹಣವಿದೆ. ನನ್ನ ಪೂರ್ವಾಶ್ರಮದ ಬಗ್ಗೆ ನನಗೆ ಗೊತ್ತಿಲ್ಲ. 5ನೇ ವರ್ಷಕ್ಕೆ ಮಾನಸಿಕವಾಗಿ ಸನ್ಯಾಸತ್ವ ಸ್ವೀಕರಿಸಿದ್ದೇನೆ. 7ನೇ ವರ್ಷಕ್ಕೆ ಮನೆಯಿಂದ ಹೊರಬಂದು ಸನ್ಯಾಸಿ ಆದೆ. ನನ್ನ ಪೂರ್ವಾಶ್ರಮ ಬಗ್ಗೆ ಮಾತನಾಡುವ ನೀವು, ನಮ್ಮ ಮನೆ ಮಾಲೀಕರಾ? ಅಥವಾ ಜೀತದಾಳು ಆಗಿದ್ರಾ? ಪೂರ್ವಾಶ್ರಮ, ನೈತಿಕತೆ, ಮೂರುಸಾವಿರ ಮಠದ ರೌಡಿಸಂ ಬಗ್ಗೆ ಮಾತನಾಡದ್ದೀರಿ. ಸ್ಪಷ್ಟತೆ ನೀಡದಿದ್ರೆ ಬರುವ 27 ರಂದು ನರಗುಂದ ಪಟ್ಟಣದ ಸಚಿವರ ಮನೆ ಮುಂದೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಇನ್ನು ಶ್ರೀಗಳು ಜಾಮೀನು ಮೇಲೆ ಇದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ನಾನು ಜಾಮೀನು‌ ಮೇಲೆ ಇರುವುದು ಸತ್ಯ. ಕೇಸ್ ಹೇಗೆ ಆದವು, ಯಾವ ಕಾರಣಕ್ಕೆ ಜಾಮೀನು ಮೇಲೆ ಇದೇನಿ ಎಂದು ರಾಜ್ಯಕ್ಕೆ ಗೊತ್ತಿದೆ. ಹೈಕೋರ್ಟ್ ಎಲ್ಲಾ ಕೇಸ್ ವಜಾಗೊಳಿಸಿತ್ತು. ನಿಮ್ಮಂತಹ ರಾಜಕಾರಣಿಗಳ ಕುತಂತ್ರದಿಂದ ಮತ್ತೆ ಅಲ್ಲಿ ಸೇರಿಸುವ ಕೆಲಸ ಮಾಡಿದಿರಿ. ನ್ಯಾಯಾಲಯ ಅದಕ್ಕೆ ತೀರ್ಪು ನೀಡುತ್ತೆ. ವಿಧಾನಸೌಧವೇ ಆ ವಿಚಾರಕ್ಕೆ ತೀರ್ಪು ನೀಡುವುದಾದ್ರೆ, ನ್ಯಾಯಾಲಯದ ಪ್ರಕರಣಗಳನ್ನು ವಿಧಾನ ಸೌಧಕ್ಕೆ ತರೆಸಿಕೊಂಡು ವಿಚಾರಣೆ ಮಾಡಲಿ ಎಂದರು.

ಇನ್ನು ಪೋಲಿಸ್ ಅಧಿಕಾರಿಗಳನ್ನು ಗ್ರಾಮಕ್ಕೆ ಕಳುಹಿಸುತ್ತಿದ್ದಿರಿ. ನನ್ನ ಜಾಮೀನು ಬಗ್ಗೆ ಗ್ರಾಮದ ಜನ್ರನ್ನು ವಿಚಾರ ಮಾಡ್ತಿದ್ದಾರೆ. ಪೋಲೀಸ್ ಇಲಾಖೆ ಯಾವುದಕ್ಕಾಗಿ ಬಳಸಿಕೊಳ್ಳುತ್ತಿದ್ದಿರಿ? ಹೆದರಿಸುವ ಕೆಲಸ ಮಾಡ್ತಿದಿರಾ ಹೇಗೆ? ಹೆದರಿಸಲು ಮುಂದಾದ್ರೆ ನಾವು ಹೆದರುವ ಸ್ವಾಮಿಗಳು ನಾನಲ್ಲ. ಅಧಿಕಾರವಿದೆ ಎಂದು ಹುಚ್ಚು ಸಾಹಸಕ್ಕೆ ಕೈ ಹಾಕಿದರೆ ಅದನ್ನು ಸ್ವಾಗತಿಸುತ್ತೇನೆ ಎಂದರು.

ನೈತಿಕತೆ ಇಲ್ಲದ ಇಂತವರನ್ನು ಪರಮಪೂಜ್ಯರೆಂದು ಹೇಗೆ ಒಪ್ಪಿಕೊಳ್ಳಬೇಕೆಂದ ಸಚಿವರಿಗೆ ಅನಾಗರಿಕ ಎಂದರು. ನಾವು ಪರಮಪೂಜ್ಯರು ಎಂದು ನೀವು ಹೇಳಿ ಅಂತ ಹೇಳಿಲ್ಲ ಪಾಟೀಲರೇ ಭಕ್ತರು, ಸುಸಂಸ್ಕೃತರು ಪರಮಪೂಜ್ಯರು ಅಂತಾರೆ. ನಿಮ್ಮಂತಹ ಅನಾಗರಿಕರು ಅಲ್ಲ ಎಂದು ಸಚಿವ ಸಿ.ಸಿ ಪಾಟೀಲರನ್ನು ಅನಾಗರಿಕ ಎಂದು ವಾಗ್ದಾಳಿ ಮಾಡಿದರು.

- Advertisment -

Most Popular

Recent Comments