Saturday, May 21, 2022
Powertv Logo
Homeರಾಜ್ಯನಾನು ಪರ್ಸಂಟೇಜ್ ಕೊಟ್ಟಿಲ್ಲ: ದಿಂಗಾಲೇಶ್ವರ ಸ್ವಾಮೀಜಿ

ನಾನು ಪರ್ಸಂಟೇಜ್ ಕೊಟ್ಟಿಲ್ಲ: ದಿಂಗಾಲೇಶ್ವರ ಸ್ವಾಮೀಜಿ

ಗದಗ : ನಾನು ಪರ್ಸಂಟೇಜ್ ಕೊಟ್ಟಿಲ್ಲ ಆದರೆ ಪರ್ಸಂಟೇಜ್ ಕಟ್ ಮಾಡಿಕೊಂಡೆ ಕೊಡ್ತಿವಿ ಅನ್ನೋ ಹಠಕ್ಕೆ ಸರ್ಕಾರದವರು ಬಿದ್ದಿದ್ದಾರೆ. ಮತ್ತು ಆ ಹಣ ನಮಗಿನ್ನೂ ಕೊಟ್ಟಿಲ್ಲ ಎಂದು ಮಠಗಳ ಅನುದಾನದ 30% ವಿಚಾರಕ್ಕೆ ಶಿರಹಟ್ಟಿ ಸಂಸ್ಥಾನ ಮಠದ ದಿಂಗಾಲೇಶ್ವರ ಸ್ವಾಮಿಜಿ ಮತ್ತಷ್ಟು ಸ್ಪಷ್ಟನೆ ನೀಡಿದ್ದಾರೆ.

ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು ನಮಗೆ ಎಪ್ಪತ್ತೈದು ಲಕ್ಷಕ್ಕೆ ಎಪ್ಪತ್ತೈದು ಲಕ್ಷ ಕೊಟ್ಟಿಲ್ಲ. ಕಡಿತಗೊಳಿಸುವಲ್ಲಿ ಸರ್ಕಾರದ ನಿಯಮಾವಳಿಗಳಿದ್ದರೇ ನಮ್ಮ ಆಕ್ಷೇಪವೇನೂ ಇಲ್ಲ. ಆದರೆ ಎಪ್ಪತ್ತೈದು ಲಕ್ಷಕ್ಕೆ ಇಪ್ಪತ್ತೈದು ಲಕ್ಷವನ್ನು ಗದಗ ಹಾಗೂ ಶಿರಹಟ್ಟಿ ಲ್ಯಾಂಡ್​ ಆರ್ಮಿಯವರು ಡಿಮ್ಯಾಂಡ್​​ ಇಟ್ಟಿದ್ದಾರೆ ಎಂದರು.

ಭ್ರಷ್ಟಾಚಾರ ಇಲ್ಲವಾದರೆ ನಮ್ಮ ಮಠಕ್ಕೆ ಎಷ್ಟು ಅನುದಾನ ಬಂದಿದೆಯೋ ಆ ಅನುದಾನ ಬೇಗ ರೀಲಿಸ್ ಮಾಡಿಸಿ. ಯಾಕೆ ಇಟ್ಟುಕೊಂಡು ಕೂತಿದ್ದೀರಿ ಅನ್ನೋ ಪ್ರಶ್ನೆ ಕೇಳುತ್ತಿದ್ದೇವೆ ಎಂದು ಕಿರಿಕಾಡಿದರು.

ಇನ್ನು ದಾಖಲೆ ತೋರಿಸಿ ಅನ್ನೋ ಭೈರತಿ‌ ಬಸವರಾಜ ಪ್ರಶ್ನೆಗೂ ಉತ್ತರಿಸಿ ಮಠಗಳಲ್ಲಿ ದೇಣಿಗೆ ಪಾವತಿ ಇಟ್ಟು ಕೂತಿರುತ್ತೇವೆ. ಯಾರೋ ಬಂದು ಹನ್ನೊಂದು ರೂಪಾಯಿ ಬರೆಸಿದರೂ ಪಾವತಿ‌ ನೀಡುತ್ತೇವೆ. ಆದರೆ ಸರ್ಕಾರಿ ಕಚೇರಿಗಳಲ್ಲಿ ಇಷ್ಟು ಲಂಚ ಕೊಟ್ಟಿದ್ದಾರೆಂದು ಪಾವತಿ‌ ಪುಸ್ತಕ ಇಟ್ಟು ಕೂತಿದ್ದಾರೆಯೇ..? ಯಾವುದೇ ತರಹದ ದಾಖಲಾತಿಗಳನ್ನ ತೋರಿಸೋಕೆ ಆಗೋದಿಲ್ಲ.. ದಾಖಲಾತಿ ಕೇಳುತ್ತೀರಲ್ಲ.. ನಿಮ್ಮ ಜನ್ಮಕ್ಕೆ ಏನಾದರೂ ನಾಚಿಗೆ ಇದೆಯಾ.. ? ಲಂಚಕ್ಕೆ ಎಲ್ಲಾದರೂ ಯಾರಾದರೂ ದಾಖಲಾತಿ‌ ಕೊಡೋಕೆ ಅಗುತ್ತಾ..? ಲಂಚ ಒಳಗೆ ನಡೆಯೋ ವ್ಯವಹಾರವೇ ಹೊರತಾಗಿ ಹೊರಗೆ ನಡೆಯೋ ವ್ಯವಹಾರ ಅಲ್ಲ ಎಂದು ವಾಗ್ದಾಳಿ ನಡೆಸಿದರು.

ಲ್ಯಾಂಡ್​​ ಆರ್ಮಿಯವರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಿ ಅವರು ಹೇಳಿದ್ದಾರೋ ಇಲ್ಲವೋ ಅನ್ನೋದು ಗೊತ್ತಾಗುತ್ತದೆ. ಎಲ್ಲರೂ ಸಹ ಭ್ರಷ್ಟಾಚಾರದಲ್ಲಿ ಮುಳಗಿ ಎಲ್ಲೆಂದರಲ್ಲಿ ಪರ್ಸೆಂಟೆಜ್ ತೆಗೆದುಕೊಳ್ಳುತ್ತೀರಿ. ಒಂದು ಭೂಮಿ ಪೂಜೆಗೂ ಪರ್ಸೆಂಟೆಜ್ ತೆಗೆದುಕೊಂಡು ಪೂಜೆ ಮಾಡುತ್ತೀರಿ ನಿಮಗೆ ನಾಚಿಗೆ ಆಗುವದಿಲ್ಲವಾ?

ಅಲ್ಲದೇ ಒಂದು ಟ್ರಾನ್ಸಫರ್ ಮಾಡಬೇಕಾದ್ರೆ 25-30 ಲಕ್ಷ ಡಿಮ್ಯಾಂಡ್​​ ಮಾಡಿ ಅಧಿಕಾರಿಗಳನ್ನ ತಾಲೂಕಿಗೆ ತರುತ್ತೀರಿ ಕೊಟ್ಟವರೆಲ್ಲ ಕೊಟ್ಟಿನಿ ಅಂತ ಹೇಳುತ್ತಾರ ? ನಾನಿನ್ನೂ ಲಂಚ ಕೊಟ್ಟಿಲ್ಲ ಆದ್ರೆ ನನಗೆ ಕೊಡಬೇಕಾದ ಕಟ್ಟಡದ ಹಣವನ್ನ ಸರ್ಕಾರದ ಅಧಿಕಾರಿಗಳು ಕೊಟ್ಟಿಲ್ಲ ಎಂದು ಹೇಳಿದ್ದೇವೆ. ಅದರ ಬಗ್ಗೆ ಮಾತನಾಡುವುದನ್ನ ಬಿಟ್ಟು ಹುಚ್ಚುತನದಿಂದ ಏನಾದರೂ ಮಾತನಾಡಿದರೆ ಹೇಗೆ. ನಿಮ್ಮ ಹುಚ್ಚುತನದ ಮಾತು ಕೇಳುವಷ್ಟು ಬುದ್ದಿಗೇಡಿಗಳು ಈ ರಾಜ್ಯದಲ್ಲಿ ಇಲ್ಲ. ಕರ್ನಾಟಕದ ಜನ ಬಹಳ ಹುಷಾರಾಗಿದ್ದಾರೆ, ಪ್ರಜ್ಞಾವಂತರಿದ್ದಾರೆ ಆಡಳಿತದಲ್ಲಿರೋರು ತಿಳಿದು ಮಾತನಾಡಬೇಕು ಎಂದರು.

- Advertisment -

Most Popular

Recent Comments