Home ಕ್ರೀಡೆ P.Cricket ಚೊಚ್ಚಲ ಟಿ20 ಮ್ಯಾಚ್​ನಲ್ಲಿ ಅತೀ ಹೆಚ್ಚು ರನ್​ ಬಾರಿಸಿದ್ದ ಭಾರತದ ಕ್ರಿಕೆಟಿಗ ನಿವೃತ್ತಿ..!

ಚೊಚ್ಚಲ ಟಿ20 ಮ್ಯಾಚ್​ನಲ್ಲಿ ಅತೀ ಹೆಚ್ಚು ರನ್​ ಬಾರಿಸಿದ್ದ ಭಾರತದ ಕ್ರಿಕೆಟಿಗ ನಿವೃತ್ತಿ..!

2001- 2007ರ ಅವಧಿಯಲ್ಲಿ ಟೀಮ್ ಇಂಡಿಯಾ ಪರ ಆಡಿದ್ದ ಆಲ್​ರೌಂಡರ್ ದಿನೇಶ್ ಮೋಂಗಿಯಾ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದಾರೆ. 2007ರ ಮೇ 12ರಂದು ಬಾಂಗ್ಲಾ ದೇಶದ ವಿರುದ್ಧ ಕೊನೆಯ ಒಡಿಐ ಆಡಿದ್ದ ಮೋಂಗಿಯಾ ಆ ನಂತರ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿರ್ಲಿಲ್ಲ. ಕೊನೆಯ ಮ್ಯಾಚ್ ಆಡಿದ 12 ವರ್ಷದ ಬಳಿಕ ಇಂದು ಅವರು ನಿವೃತ್ತಿ ಘೋಷಿಸಿದ್ದಾರೆ.
1995ರಲ್ಲಿ ಅಂಡರ್ 19 ತಂಡದಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಅವರು, ಸತತ 6 ವರ್ಷಗಳ ಕಾಲ ದೇಶೀಯ ಟೂರ್ನಿಯಲ್ಲಿ ಅದ್ಭುತ ಸ್ಥಿರ ಪ್ರದರ್ಶನ ನೀಡಿ 2001ರಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. 2001ರ ಮಾರ್ಚ್​ 28ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಮುಖೇನ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಎಂಟ್ರಿ ಕೊಟ್ಟಿದ್ದರು. 2003ರ ವಿಶ್ವಕಪ್​ ತಂಡದ ಸದಸ್ಯರೂ ಆಗಿದ್ದರು. 
ಟೀಮ್ ಇಂಡಿಯಾ ಪರ ಒಟ್ಟು 57 ಒಡಿಐಗಳನ್ನು ಆಡಿರುವ ಮೋಂಗಿಯಾ 1 ಸೆಂಚುರಿ, 4 ಹಾಫ್​ ಸೆಂಚರಿ ಸಹಿತ 1230ರನ್​ಗಳಿಸಿದ್ದರು. 2002ರಲ್ಲಿ ಜಿಂಬಾಬ್ವೆ ವಿರುದ್ಧ ಇವರು ಸಿಡಿಸಿದ್ದ ಅಜೇಯ 159ರನ್​ ಸ್ಮರಣೀಯ ಇನ್ನಿಂಗ್ಸ್.
ಚೊಚ್ಚಲ ಟಿ20ಯಲ್ಲಿ ಅತೀ ಹೆಚ್ಚು ರನ್ :
2006ರಲ್ಲಿ ಸೌತ್​ಆಫ್ರಿಕಾ ವಿರುದ್ಧ ಭಾರತ ಆಡಿದ್ದ ಚೊಚ್ಚಲ ಟಿ20ಐನಲ್ಲಿ ಮೋಂಗಿಯಾ ಸ್ಥಾನ ಪಡೆದಿದ್ದರು. ಅದು ಅವರು ಆಡಿದ ಮೊದಲ ಹಾಗೂ ಕೊನೆಯ ಟಿ20ಐ ಕೂಡ. ಆ​ ಪಂದ್ಯದಲ್ಲಿ ಮೋಂಗಿಯಾ 38ರನ್ ಬಾರಿಸಿದ್ದರು. ಆ ಪಂದ್ಯದಲ್ಲಿ ಭಾರತ ಗೆದ್ದಿತ್ತು. 14 ವಿಕೆಟ್​​ ಕೂಡ ಕಿತ್ತಿದ್ದರು. 

ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್​ನಲ್ಲಿ ನಡೆದ ಮ್ಯಾಚ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಸೌತ್​ ಆಫ್ರಿಕಾ 20 ಓವರ್​ಗಳಲ್ಲಿ 9 ವಿಕೆಟ್​ಗೆ 126ರನ್ ಮಾಡಿತ್ತು. ಗುರಿ ಬೆನ್ನತ್ತಿದ ಭಾರತ 19.5 ಓವರ್​ಗಳಲ್ಲಿ 4 ವಿಕೆಟ್​ಗೆ 127ರನ್ ಮಾಡುವ ಮೂಲಕ 6 ವಿಕೆಟ್​ಗಳ ಜಯ ದಾಖಲಿಸಿತ್ತು. ಭಾರತದ ಪರ ಕ್ಯಾಪ್ಟನ್ ವೀರೇಂದ್ರ ಸೇಹ್ವಾಗ್ 34, ಸಚಿನ್ ತೆಂಡೂಲ್ಕರ್ 10ರನ್ ಮಾಡಿದ್ದರು. ಧೋನಿ ಸಂಪಾದನೆ ಶೂನ್ಯ..! ದಿನೇಶ್ ಕಾರ್ತಿಕ್ ಅಜೇಯ 31 ರನ್ ಹಾಗೂ ಸುರೇಶ್ ರೈನಾ ಅಜೇಯ 3ರನ್ ಗಳಿಸಿದ್ದರು.

ದಿನೇಶ್ ಮೋಂಗಿಯಾ 45 ಬಾಲ್​ಗಳಲ್ಲಿ 38ರನ್ ಮಾಡಿದ್ದರು. ಇದು ಭಾರತದ ಪರ ಮಾತ್ರವಲ್ಲದೆ ಇಡೀ ಪಂದ್ಯದಲ್ಲಿ ಎರಡೂ ತಂಡದ ಬ್ಯಾಟ್ಸ್​ಮನ್​ಗಳ ಸ್ಕೋರ್​ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿತ್ತು. ದ.ಆಫ್ರಿಕಾ ಪರ ಮಾರ್ಕೆಲ್ ಗಳಿಸಿದ್ದ 27ರನ್ ಹೈಯಸ್ಟ್​​​ ಇಂಡಿವ್ಯೂಸಲ್ ಸ್ಕೋರ್.
ಆ ಪಂದ್ಯದಲ್ಲಿ ಮೋಂಗಿಯಾ ಅತ್ಯಧಿಕ ರನ್ ಬಾರಿಸಿದ್ದರೂ 28 ಬಾಲ್​ಗಳಲ್ಲಿ 31ರನ್​​ ಬಾರಿಸಿದ್ದ ದಿನೇಶ್ ಕಾರ್ತಿಕ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.

LEAVE A REPLY

Please enter your comment!
Please enter your name here

- Advertisment -

Most Popular

ಕೊರೋನಾ ಇದ್ರೂ ಕಾರ್ಖಾನೆ ಸೀಲ್​ಡೌನ್​ ಯಾಕಿಲ್ಲ? ಐಟಿಸಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ದೇವನಹಳ್ಳಿ : ಬೆಂಗಳೂರು ಹೊರವಲಯದ ಯಲಹಂಕ ತಾಲೂಕು ತರಬಹಳ್ಳಿ ಗ್ರಾಮದ ಸಮೀಪವಿರುವ ಪ್ರತಿಷ್ಠಿತ ಐಟಿಸಿ ಕಂಪನಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಐಟಿಸಿ ಕಾರ್ಖಾನೆಯಲ್ಲಿ ಸಿಗರೇಟ್ ತಯಾರಿಕೆ ಮಾಡಲಾಗುತ್ತಿದ್ದು ಈ ಕಾರ್ಖಾನೆಯಲ್ಲಿ...

ಕೊವಿಡ್ ಸೋಂಕಿತರ ಭೇಟಿ ಮಾಡಿ ಧೈರ್ಯ ತುಂಬಿದ ಸಚಿವ ಆನಂದ್ ಸಿಂಗ್ !!

ಬಳ್ಳಾರಿ : ಬಳ್ಳಾರಿಯ ದಂತ ವೈದ್ಯ ಕಾಲೇಜಿನ ಕೊವಿಡ್ ಅಸ್ಪತ್ರೆಗೆ ಉಸ್ತುವಾರಿ ಮತ್ತು ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನಿಡಿದರು. ಪಿಪಿಇ ಕಿಟ್ ಧರಿಸಿ ಐಸೋಲೇಷನ್ ವಾರ್ಡ್ ಗೆ ಭೇಟಿ ಕೊಟ್ಟ...

ಕೊರೋನಾ ಟೆಸ್ಟ್ ಗಾಗಿ ಶವ ಕೊಳೆಯಲು ಬಿಟ್ಟ ಬ್ರಹ್ಮಾವರ ಸರಕಾರಿ ಆಸ್ಪತ್ರೆ

ಉಡುಪಿ : ಕೊರೋನಾ ವಕ್ಕರಿಸಿದ ಬಳಿಕ ಮಾನವೀಯತೆ ಮರೆಯಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅದು ನಿಜ ಎನ್ನುವದನ್ನು ಬ್ರಹಾವ್ಮರ ಸಮುದಾಯ ಆರೋಗ್ಯ ಕೇಂದ್ರ ಸಾಬೀತು ಮಾಡಿದೆ ಎಂದರೆ ತಪ್ಪಾಗಲಾರದು. ಕೊರೋನಾ ವಿಚಾರವಾಗಿ...

ಪಿಪಿಇ ಕಿಟ್ ಗೆ ಮತ್ತೆ ಬರ..! | ಹರಿದ ಗೌನ್ ಧರಿಸಿಯೇ ಕರ್ತವ್ಯ ನಿರ್ವಹಿಸುತ್ತಿರುವ ಆಂಬುಲೆನ್ಸ್ ಚಾಲಕರು.

ಮಂಡ್ಯ : ಕೊವಿಡ್ ವಿಚಾರದಲ್ಲಿ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿ ಇದು. ಹೌದು, ಒಂದೆಡೆ ಸರ್ಕಾರದ ವಿರುದ್ಧ ವಿಪಕ್ಷಗಳು ಆರೋಪಗಳ ಮೇಲೆ ಆರೋಪ ಹೊರಿಸುತ್ತಲೇ ಇವೆ. ಮತ್ತೊಂದೆಡೆ ಸರ್ಕಾರ ತಮ್ಮ ಕಾರ್ಯವೈಖರಿಯನ್ನ ಹೊಗಳುತ್ತಲೇ ವಿಪಕ್ಷಗಳಿಗೆ ತಿರುಗೇಟು...