Home ಸಿನಿ ಪವರ್ 'ಶಿವನಂದಿ'ಗಾಗಿ ಒಂದಾಗ್ತಿದ್ದಾರೆ ದರ್ಶನ್- ದಿನಕರ್?

‘ಶಿವನಂದಿ’ಗಾಗಿ ಒಂದಾಗ್ತಿದ್ದಾರೆ ದರ್ಶನ್- ದಿನಕರ್?

ಸ್ಯಾಂಡಲ್​ವುಡ್​ ಕಂಡ ದಿಗ್ಗಜರಲ್ಲೊಬ್ಬರು ತೂಗದೀಪ್ ಶ್ರೀನಿವಾಸ್.. ಇದೇ ತೂಗದೀಪ ಅವರ ಎರಡು ಕಣ್ಣುಗಳು ಅರ್ಥಾತ್ ಇಬ್ರು ಮಕ್ಕಳು ಇವತ್ತು ಚಂದನವಬೆಳಗುತ್ತಿರೋ ‘ದೀಪ’ಗಳು. ಒಬ್ರು ಸ್ಟಾರ್ ಆ್ಯಕ್ಟರ್, ಇನ್ನೊಬ್ರು ಸ್ಟಾರ್ ಡೈರೆಕ್ಟರ್. ಈ ಅಣ್ತಾಮ್ಮಾಸ್​ ಈಗಾಗಲೇ ಒಟ್ಟಿಗೆ ಸಿನಿಮಾ ಮಾಡಿ ಗೆದ್ದಿದ್ದಾರೆ. ಈಗ ಇದೇ ಯಶಸ್ವಿ ಅಣ್ತಮ್ಮ ಜೋಡಿ ಮತ್ತೆ ಒಂದಾಗ್ತಿದೆ.

ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗದೀಪ್ ಮತ್ತು ದಿನಕರ್ ತೂಗದೀಪ್ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರ್ತಾ ಇದೆ. 2006ರಲ್ಲಿ ಜೊತೆ ಜೊತೆಯಲಿ ಸಿನಿಮಾ ಮೂಲಕ ಡೈರೆಕ್ಷನ್ ಕ್ಯಾಪ್ ತೊಟ್ಟವರು ದಿನಕರ್ ತೂಗದೀಪ್. ನೆನಪಿರಲಿ ಪ್ರೇಮ್​, ಮೋಹಕ ತಾರೆ ರಮ್ಯ ಅಭಿನಯದ ಈ ಸಿನಿಮಾ ದಿನಕರ್ ನಿರ್ದೇಶನದ ಚೊಚ್ಚಲ ಚಿತ್ರ. ಜೊತೆಗೆ ತೂಗದೀಪ್​ ಪ್ರೊಡಕ್ಷನ್​ನ ಮೊದಲ ಸಿನಿಮಾವೂ ಇದೇ.

ತಮ್ಮನ ಚೊಚ್ಚಲ ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ದಿನಕರ್ ಅಣ್ಣ ದರ್ಶನ್ ಅವರನ್ನ ಹಾಕಿಕೊಂಡು ನವಗ್ರಹ ಸಿನಿಮಾ ಮಾಡಿದ್ರು. 2008ರಲ್ಲಿ ತೆರೆಕಂಡ ಈ ಮೂವಿ ಸಿಕ್ಕಾಪಟ್ಟೆ ಸೌಂಡು ಮಾಡ್ತು. ಬಾಕ್ಸ್ ಆಫೀಸಲ್ಲೂ ಅಬ್ಬರಿಸಿತು.

ಹೀಗೆ  ಮೊದಲೆರಡು ಸಿನಿಮಾಗಳಲ್ಲಿ ಯಶಸ್ಸು ಕಂಡ ದಿನಕರ್​​ ಅವರ ಮೂರನೇ ಮೂವಿ ಬಗ್ಗೆ ನಿರೀಕ್ಷೆ ಬೆಟ್ಟದಷ್ಟಾಗಿತ್ತು.  ಚಿತ್ರರಸಿಕರ ನಿರೀಕ್ಷೆಗೆ ದಿನಕರ್ ತಣ್ಣೀರು ಎರಚಲಿಲ್ಲ. 2011ರಲ್ಲಿ ರಿಲೀಸ್ ಸಾರಥಿ ದೊಡ್ಡಮಟ್ಟಿನ ಹಿಟ್ ಆಯ್ತು. ಅಣ್ಣ ದರ್ಶನ್ ಅವರನ್ನು ಹಾಕಿಕೊಂಡು ಮಾಡಿದ ಈ ಸಿನಿಮಾವೂ ದಿನಕರ್​ಗೆ ಸಖತ್ ನೇಮ್ & ಫೇಮ್ ಅನ್ನು ತಂದುಕೊಟ್ಟು, ಸ್ಯಾಂಡಲ್​ವುಡ್​ನ ಸ್ಟಾರ್ ಡೈರೆಕ್ಟರ್ ಗಳ ಸಾಲಿನಲ್ಲಿ ತಂದು ಕೂರಿಸ್ತು.

ಬಳಿಕ ದಿನಕರ್ ಆ್ಯಕ್ಷನ್ ಕಟ್ ಹೇಳಿದ ಲೈಫ್​ ಜೊತೆ ಒಂದ್​ ಸೆಲ್ಫಿ ಕೂಡ ಕ್ಲಿಕ್ ಆಯ್ತು. ಈ ಮೂವಿಗೂ ಮೊದಲೇ ಬಂದ ಚಕ್ರವರ್ತಿ ಸಿನಿಮಾದಲ್ಲಿ ಅಣ್ಣ ದರ್ಶನ್ ಜೊತೆ ದಿನಕರ್ ನಟಿಸಿದ್ರು. ಹೀಗೆ ಜೊತೆ ಜೊತೆಯಲಿ ಸಿನಿಮಾ ಕ್ಷೇತ್ರದಲ್ಲಿ  ಗೆಲ್ತಿರೋ ಅಣ್ತಮ್ಮ ಮತ್ತೆ ಒಟ್ಟಾಗಿ ಸಿನಿಮಾ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ.

ಅಣ್ಣ ದರ್ಶನ್ ಹಾಗೂ ತಮ್ಮ ದಿನಕರ್ ಕಾಂಬಿನೇಷನ್​ನಲ್ಲಿ ಹೊಸದೊಂದು ಸಿನಿಮಾ ಬರಲಿದೆ. ದಿನಕರ್ ಈಗಾಗಲೇ ಸಿನಿಮಾ ಟೈಟಲ್​ ಅನ್ನು ರಿಜಿಸ್ಟರ್ ಮಾಡಿಸಿದ್ದಾರೆ. ಆ ಟೈಟಲ್ ಸಿಕ್ಕಾಪಟ್ಟೆ ಕ್ಯಾಚಿ ಕೂಡ ಇದೆ. ಅಷ್ಟೇ ಅಲ್ಲ ಈಗಾಗಲೇ ಸದ್ದು ಮಾಡ್ತಿರೋ ಹೆಸರದು..!

ದಚ್ಚು ಅಭಿನಯದ ‘ಯಜಮಾನ’ ಸಿನಿಮಾದ ಸೂಪರ್ ಹಾಡು ಶಿವನಂದಿಯನ್ನು ಯಾರ್ ತಾನೆ ಕೇಳಿಲ್ಲಾ..? ಇದೇ ಹಾಡಿನಲ್ಲಿರುವ ಶಿವನಂದಿ  ಟೈಟಲ್ ಅನ್ನು ದಿನಕರ್ ನೋಂದಣಿ ಮಾಡಿಸಿದ್ದಾರೆ.

ಶಿವನಂದಿ ಹಾಡು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.  ದರ್ಶನ್ ಅವರ ಸಿನಿಮಾದ್ದೇ ಸಾಂಗ್ ಬೇರೆ… ಹೀಗಾಗಿ ದರ್ಶನ್​ಗೂ ಸೂಕ್ತವಾದ ಟೈಟಲ್ ಇದಾಗಿದ್ದು, ದಿನಕರ್ ದರ್ಶನ್ ಅವರನ್ನೇ ಹಾಕಿಕೊಂಡು ಶಿವನಂದಿ ಸಿನಿಮಾ ಮಾಡೋದು ಪಕ್ಕಾ ಎಂದು ಹೇಳಲಾಗ್ತಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಅಣ್ಣನಿಗೆ ತಮ್ಮ ಆ್ಯಕ್ಷನ್ ಕಟ್ ಹೇಳ್ತಿರೋ ಮೂರನೇ ಮೂವಿ ಈ ಶಿವನಂದಿ ಆಗಲಿದೆ.  ನವಗ್ರಹ, ಸಾರಥಿಯಲ್ಲಿ ಕ್ಲಿಕ್ಕ ಆಗಿರೋ ಅಣ್ತಮ್ಮ ಕಾಂಬಿನೇಷನ್ ಶಿವನಂದಿಯಲ್ಲೂ ಸಕ್ಸಸ್ ಆಗುತ್ತಾ ಕಾದು ನೋಡ್ಬೇಕು.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments