Saturday, October 1, 2022
Powertv Logo
Homeಸಿನಿಮಾದಿಗಂತ್​ ಖಜಾನೆ ಖಾಲಿ ಖಾಲಿ

ದಿಗಂತ್​ ಖಜಾನೆ ಖಾಲಿ ಖಾಲಿ

ಸಿಟಿ ಬಿಟ್ಟು ಮಲೆನಾಡು ಸೇರಿರೋ ದಿಗಂತ್ ದಂಪತಿ ಅಕೌಂಟ್​ನಲ್ಲಿ ಖಾಸಿಲ್ಲದೆ ಒದ್ದಾಡ್ತಿದ್ದಾರೆ. ಕೋರ್ಟು, ಕಚೇರಿ ಅಂತ ಅಲೆದಾಡ್ತಿದ್ದಾರೆ. ಇಷ್ಟಕ್ಕೂ ಮದ್ವೆ ಆದ್ಮೇಲೆ ದಿಗಂತ್ ಲೈಫ್ ಯಾಕೆ ಹೀಗಾಗೋಯ್ತು ಅನ್ನೋದ್ರ ಜೊತೆ ಸದ್ಯ ಅವ್ರ ಪರಿಸ್ಥಿತಿ, ಮನಸ್ಥಿತಿಯನ್ನೂ ನಿಮಗೆ ಪರಿಚಯಿಸ್ತೀವಿ ಬನ್ನಿ.

ಚಿತ್ರ ಬಿಡುಗಡೆಗೂ ಮುನ್ನ ಹೊರಬರುವ ಟ್ರೇಲರ್ ನೋಡಿದ ಕೂಡಲೆ, ಅಭಿಮಾನಿಗಳಲ್ಲಿ ಸಿನಿಮಾ ನೋಡುವ ಕಾತುರ ಇನ್ನಷ್ಟು ಹೆಚ್ಚುತ್ತದೆ. ಸದ್ಯ ಭಾರಿ ಸದ್ದು ಮಾಡುತ್ತಿದ್ದೆ  ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರದ  ಟ್ರೈಲರ್. ತಾರಾ ಜೋಡಿ ದಿಗಂತ್ ಹಾಗೂ ಐಂದ್ರಿತಾ ರೇ ನಾಯಕ- ನಾಯಕಿಯಾಗಿ ನಟಿಸಿರೋ  ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರದ ಟ್ರೈಲರ್, ರೀಸೆಂಟ್ ಆಗಿ ಲಹರಿ ಮ್ಯೂಸಿಕ್ ಚಾನಲ್ ಮೂಲಕ ರಿಲೀಸ್ ಆಗಿದೆ.

ಯೂಟ್ಯೂಬ್ ವೀವ್ಸ್ ಏರಿಸಿಕೊಳ್ತಿರೋ ಈ ಟ್ರೈಲರ್​ಗೆ ಪ್ರಶಂಸೆಗಳ ಸುರಿಮಳೆ ಕೂಡ ಆಗ್ತಿದೆ. ಇದೇ ಏಪ್ರಿಲ್ ಕೊನೆಯಲ್ಲಿ ಚಿತ್ರ ತೆರೆಗೆ ಬರುತ್ತಿದ್ದು, ಚಿತ್ರ ಬಿಡುಗಡೆಗೆ ಪ್ರೇಕ್ಷಕಪ್ರಭುಗಳು ಕಾತರರಾಗಿ ಕಾಯುತ್ತಿದ್ದಾರೆ. ಸಿಲ್ಕ್ ಮಂಜು ನಿರ್ಮಿಸಿರುವ ಈ ಚಿತ್ರವನ್ನು ವಿನಾಯಕ ಕೋಡ್ಸರ ನಿರ್ದೇಶಿಸಿದ್ದಾರೆ. ರವೀಂದ್ರ ಜೋಶಿ  ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸೋದ್ರ ಜೊತೆಗೆ ಒಂದು ಪಾತ್ರವನ್ನು ಪೋಷಿಸಿದ್ದಾರೆ ಕೂಡ.

ಪ್ರಜ್ವಲ್ ಪೈ ಸಂಗೀತ ನಿರ್ದೇಶನ ಹಾಗೂ ನಂದಕಿಶೋರ್ ಛಾಯಾಗ್ರಹಣವಿರುವ ಈ ಚಿತ್ರದ  ದೂದ್​ಪೇಡಾ ದಿಗಂತ್ ಬರೀ ಐಂದ್ರಿತಾ ರೇ ಜೊತೆಗಷ್ಟೇ ರೊಮ್ಯಾನ್ಸ್ ಮಾಡ್ತಿಲ್ಲ. ಬದಲಿಗೆ ರಂಜಿನಿ ರಾಘವನ್  ಜೊತೆಗೂ ಕಮಾಲ್ ಮಾಡಲಿದ್ದಾರೆ.

ಪಕ್ಕಾ ಮಲ್ನಾಡ್ ಬ್ಯಾಕ್​ಡ್ರಾಪ್​ನಲ್ಲಿ ಚಿತ್ರಿತವಾಗಿರೋ ಈ ಸಿನಿಮಾದಲ್ಲಿ ನೇಟಿವಿಟಿ, ಭಾಷೆ ಎಲ್ಲವೂ ಮಲೆನಾಡಿನದ್ದೇ. ಅಲ್ಲಿನ ಸೊಗಡು, ಸೊಬಗು ಹೆಚ್ಚಿಸೋ ಸಿನಿಮಾಗಳ ಸಾಲಿಗೆ ಇದು ಸೇರಲಿದ್ದು, ದಿಗಂತ್ ಈ ಹಿಂದೆ ಗಾಳಿಪಟ ಚಿತ್ರದ ಪಾತ್ರವನ್ನು ಹೋಲುವಂತಿದೆ.

ಅಕೌಂಟ್​​ನಲ್ಲಿ ಹಣ ಇಲ್ಲದೆ, ಕೋರ್ಟ್​ ಮೆಟ್ಟಿಲೇರೋ ದಿಗ್ಗಿಗೆ ನ್ಯಾಯ ಸಿಗುತ್ತಾ ಇಲ್ವಾ ಅನ್ನೋದು ಸಿನಿಮಾನ ದೊಡ್ಡ ಪರದೆಯಲ್ಲೇ ನೋಡಿ ಅರ್ಥೈಸಿಕೊಳ್ಳಬೇಕಿದೆ. ಮನಸಾರೆ, ಪಾರಿಜಾತ, ಶಾರ್ಪ್​ ಶೂಟರ್ ಸಿನಿಮಾಗಳ ನಂತ್ರ ದಿಗಂತ್- ಐಂದ್ರಿತಾ ರೇ ಮತ್ತೊಮ್ಮೆ ಒಂದೇ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸತಿ ಪತಿ ಇಬ್ರೂ ಒಟ್ಟಿಗೆ ನಟಿಸಿರೋ ಸಿನಿಮಾ ಇದಾಗಿದ್ದು, ಟ್ರೈಲರ್ ಭರವಸೆ ಮೂಡಿಸಿದೆ. ಬಾಲಿವುಡ್ ಸುತ್ತಿಬಂದ ದಿಗಂತ್​ಗೆ ಲಕ್ ಕೈಕೊಟ್ಟಿದ್ದು, ಈ ಸಿನಿಮಾದಿಂದ ಖಾತೆಗೆ ಹಣ ಬರೋದ್ರ ಜೊತೆ, ಸಿನಿಮಾಗಳು ಕೈಹಿಡಿಯುತ್ವಾ ಅನ್ನೋದು ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

 

- Advertisment -

Most Popular

Recent Comments