ಹೊಸ ತಂಡದೊಂದಿಗೆ ‘6-5=2’ ಡೈರೆಕ್ಟರ್ ಕಮ್​ಬ್ಯಾಕ್..!

0
268

ಚಂದನವನದಲ್ಲಿ ಒಂದ್​ ಕಡೆ ಸ್ಟಾರ್​ ನಟರ ಸಿನಿಮಾಗಳು ವಿಶ್ವಮಟ್ಟದಲ್ಲಿ ಸದ್ದು ಮಾಡ್ತಾ ಇದ್ರೆ, ಇನ್ನೊಂದೆಡೆ ಹೊಸಬರು ಹವಾಳಿ ಇಡುತ್ತಿದ್ದಾರೆ. ಇದೀಗ ಮತ್ತೊಂದು ಹೊಸ ಟೀಮ್ ಚಿತ್ರರಸಿಕರ ಮನಗೆಲ್ಲಲು ಬರ್ತಿದೆ. 6-5 = 2 ಖ್ಯಾತಿಯ ಡೈರೆಕ್ಟರ್ ಆ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

2013ರಲ್ಲಿ ತೆರೆಕಂಡಿದ್ದ 6-5=2 ಸಿನಿಮಾ ಖ್ಯಾತಿಯ ಡೈರೆಕ್ಟರ್ ಅಶೋಕ್ ಕೆ.ಎಸ್ ‘ದಿಯಾ’ ಎಂಬ ಸಸ್ಪೆನ್ಸ್​ ಥ್ರಿಲ್ಲರ್  ಸಿನಿಮಾ ಮೂಲಕ ಕಮ್​​ಬ್ಯಾಕ್ ಆಗ್ತಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಪ್ರೊಡ್ಯೂಸರ್  ಕೃಷ್ಣ ಚೈತನ್ಯ ನಿರ್ಮಾಣದ ‘ದಿಯಾ’ ಮೂಲಕ ಹೊಸಬರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡ್ತಿದ್ದಾರೆ.

ದೀಕ್ಷಿತ್ ಮತ್ತು ಪೃಥ್ವಿ ಅಂಬಾರ್ ‘ದಿಯಾ’ ನಾಯಕರು. ಖುಷಿ ಈ ಚಿತ್ರದ ನಾಯಕಿ. ದೀಕ್ಷಿತ್ ಪ್ರೀತಿ ಎಂದರೇನು, ಸಾಕ್ಷಿ ಧಾರವಾಹಿ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದು, ಸದ್ಯ ನಾಗಿಣಿ ಸೀರಿಯಲ್​ನಿಂದ ಬಹು ದೊಡ್ಡ ಜನಪ್ರಿಯತೆಗಳಿಸಿದ್ದಾರೆ. ಕಿರಿತೆರೆಯ ಸ್ಟಾರ್ ದೀಕ್ಷಿತ್ ದಿಯಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಡ್ತಿದ್ದಾರೆ.

ಇನ್ನೊಬ್ಬ ನಾಯಕ ನಟ ಪೃಥ್ವಿ ಅಂಬಾರ್ ಮೂಲತಃ ಆರ್​ಜೆ. ತುಳು ಚಿತ್ರರಂಗದಲ್ಲಿ ಛಾಪು ಮೂಡಿಸಿರುವ  ಇವರು ರಾಧಾ ಕಲ್ಯಾಣ, ಲವಲವಿಕೆ, ಸಾಗರ ಸಂಭ್ರಮ ಧಾರವಾಹಿಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಕನ್ನಡದಲ್ಲಿ ರಾಜರು ಮತ್ತು ಡಿ.ಕೆ ಬಾಸ್​ ಸಿನಿಮಾದಲ್ಲಿ ನಟಿಸಿದ್ದರು. ದಿಯಾದಿಂದ ಒಂದೊಳ್ಳೆ ಬ್ರೇಕ್ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಇನ್ನು ಉಗ್ರಂ ಖ್ಯಾತಿಯ ತಿಲಕ್‌ ಶೇಖರ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದಿಯಾಗೆ ವಿಶಾಲ್ ವಿಠಲ್, ಸೌರಭ್ ವಾಘ್ ಮರೆ ಅವರ ಛಾಯಗ್ರಹಣವಿದೆ. ಅಜನೀಶ್​ ಲೋಕನಾಥ್ ಹಿನ್ನೆಲೆ ಸಂಗೀತ ನೀಡಿದ್ದು, ಸಿನಿಮಾ ನವೆಂಬರ್ 8ರಂದು ರಿಲೀಸ್ ಆಗಲಿದ್ದು, ದಿಯಾ ಕಮಾಲ್ ಮಾಡುತ್ತಾ ಕಾದು ನೋಡೋಣ.

LEAVE A REPLY

Please enter your comment!
Please enter your name here