‘ಪೊಗರು’ ಡೈರೆಕ್ಟರ್ ಜೊತೆ ಧ್ರುವ ಸರ್ಜಾ ಮತ್ತೊಂದು ಸಿನಿಮಾ..!

0
390

ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾಗಿಂದ ಬರ್ತ್​ಡೇ ಸಂಭ್ರಮ. 31ನೇ ಹುಟ್ಟುಹಬ್ಬದ ಖುಷಿಯಲ್ಲಿರುವ ಧ್ರುವ ಸರ್​ಪ್ರೈಸ್​ ನ್ಯೂಸೊಂದನ್ನು ಕೊಟ್ಟಿದ್ದಾರೆ. ಪೊಗರು ಬಳಿಕ ಧ್ರುವ ಹೊಸ ಸಿನಿಮಾ ಯಾವ್ದು ಅನ್ನುವ ಕುತೂಹಲ ಎಲ್ಲರಲ್ಲಿಯೂ ಇತ್ತು. ಸದ್ಯ ಯಾರ ಜೊತೆ ಸಿನಿಮಾ ಮಾಡಲಿದ್ದಾರೆ ಅನ್ನೋ ವಿಷಯ ತಿಳಿದಿದೆ. ಆದರೆ, ಟೈಟಲ್​ ಇನ್ನೂ ಗೊತ್ತಾಗಿಲ್ಲ.
2012ರಲ್ಲಿ ‘ಅದ್ದೂರಿ’ಯಾಗಿ ಸ್ಯಾಂಡಲ್​ವುಡ್​​ಗೆ ಎಂಟ್ರಿಕೊಟ್ಟ ಧ್ರುವ ಸರ್ಜಾ ಮೊದಲ ಮೂರು ಸಿನಿಮಾಗಳಲ್ಲೂ ಗೆದ್ದಿದ್ದಾರೆ. 2014ರಲ್ಲಿ ಬಂದ ಬಹದ್ದೂರ್, 2017ರಲ್ಲಿ ತೆರೆಕಂಡ ಭರ್ಜರಿ ಸಿನಿಮಾಗಳು ಕೂಡ ಸೂಪರ್ ಹಿಟ್. ಸರ್ಜಾ ಮೊದಲ ಸಿನಿಮಾ ಅದ್ದೂರಿಗೆ ಆ್ಯಕ್ಷನ್ ಕಟ್ ಹೇಳಿದ್ದವರು ಎ.ಪಿ ಅರ್ಜುನ್. ಎರಡನೇ ಮೂವಿ ಬಹದ್ದೂರ್ ಡೈರೆಕ್ಟರ್ ಚೇತನ್ ಕುಮಾರ್. ಇದೇ ಬಹದ್ದೂರ್​ ಕಾಂಬಿನೇಷನ್​, ಅಂದ್ರೆ ಧ್ರುವ -ಚೇತನ್ ಜೋಡಿಯ ‘ ಭರ್ಜರಿ’ ಕೂಡ ಹಿಟ್ ಆಗಿತ್ತು. ಹೀಗೆ ಸಾಲು ಸಾಲು ಸಿನಿಮಾಗಳ ಸಕ್ಸಸ್​​ನಲ್ಲಿರುವ ಧ್ರುವ ಅವರ ‘ಪೊಗರು’ ರಿಲೀಸ್​ಗೆ ಫ್ಯಾನ್ಸ್ ಕಾಯ್ತಿದ್ದಾರೆ.
ಪೊಗರು ನಂತರ ಈ ಡೈರೆಕ್ಟರ್ ನಂದ ಕಿಶೋರ್ ಮತ್ತು ಧ್ರುವ ಮತ್ತೊಂದು ಸಿನಿಮಾ ಒಟ್ಟಾಗಿ ಮಾಡ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆ ಸುದ್ದಿ ಈಗ ಕನ್ಫರ್ಮ್​ ಆಗಿದೆ. ಧ್ರುವ ‘ಪೊಗರು’ ಡೈರೆಕ್ಟರ್ ನಂದ ಕಿಶೋರ್​ ಜೊತೆಯೇ 5 ನೇ ಸಿನಿಮಾ ಮಾಡಲಿದ್ದಾರೆ. ಜನವರಿಯಲ್ಲಿ ಈ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದ್ದು, ಸದ್ಯಕ್ಕಿನ್ನೂ ಟೈಟಲ್ ಅನೌನ್ಸ್ ಆಗಿಲ್ಲ.

LEAVE A REPLY

Please enter your comment!
Please enter your name here