Home ಕ್ರೀಡೆ P.Cricket ಯಾರೂ ಬ್ರೇಕ್​ ಮಾಡಲಾಗದ ಧೋನಿಯ ವರ್ಲ್ಡ್​ ರೆಕಾರ್ಡ್​ಗಳು ..!

ಯಾರೂ ಬ್ರೇಕ್​ ಮಾಡಲಾಗದ ಧೋನಿಯ ವರ್ಲ್ಡ್​ ರೆಕಾರ್ಡ್​ಗಳು ..!

ಮಿಸ್ಟರ್ ಕೂಲ್ ಮಹೇಂದ್ರ ಸಿಂಗ್ ಧೋನಿ ಇನ್ಮುಂದೆ ಟೀಮ್ ಇಂಡಿಯಾ ಪರ ಮೈದಾನಕ್ಕೆ ಇಳಿಯಲ್ಲ, ಅವರ ಹೆಲಿಕಾಪ್ಟರ್ ಶಾಟ್ ಕಣ್ತುಂಬಿಕೊಳ್ಳೋಕೆ ಆಗಲ್ಲ, ಸಿಕ್ಸರ್ ಸಿಡಿಸಿ ಮ್ಯಾಚ್​ ಗೆಲ್ಲಿಸುವುದನ್ನು ನೋಡೋ ಅವಕಾಶವೂ ಇಲ್ಲ ಅನ್ನೋ ಕಟು ಸತ್ಯವನ್ನು ಅರಗಿಸಿಕೊಳ್ಳಲು ಕಷ್ಟವಾದ್ರೂ ಭಾರವಾದ ಮನಸ್ಸಿಂದ ಒಪ್ಪಿಕೊಳ್ಳಲೇ ಬೇಕಿದೆ ಅಭಿಮಾನಿಗಳು!

 ವಿಶ್ವ ಕ್ರಿಕೆಟ್ ಕಂಡ ಅದ್ಭುತ ಬ್ಯಾಟ್ಸ್​ಮನ್, ವಿಕೆಟ್ ಕೀಪರ್, ನಾಯಕ ಧೋನಿ ನಿನ್ನೆ ರಾತ್ರಿ 7.29 ನಿಮಿಷಕ್ಕೆ ಇನ್ಸ್ಟಾಗ್ರಾಮ್​ ಮೂಲಕ ನಿವೃತ್ತಿ ಘೋಷಿಸಿದ್ದಾರೆ. 16 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಧೋನಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಆ ರೆಕಾರ್ಡ್​​ಗಳಲ್ಲಿ ಬಹುಪಾಲು ರೆಕಾರ್ಡ್​ಗಳನ್ನು ಭವಿಷ್ಯದಲ್ಲಿ ಬೇರೊಬ್ಬ ಆಟಗಾರ ಬ್ರೇಕ್ ಮಾಡೋದು ಕಷ್ಟ ಸಾಧ್ಯ..! ಅಂಥಾ ಕೆಲ ರೆಕಾರ್ಡ್​ಗಳು ಇಲ್ಲಿವೆ.

 ಅತಿ ಹೆಚ್ಚು ಟಿ20 ಗೆಲುವು ಪಡೆದಿರುವ ಕ್ಯಾಪ್ಟನ್ : 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್​​ ಗೆದ್ದ ನಾಯಕ ಧೋನಿ, ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ಕ್ಯಾಪ್ಟನ್ ಅನ್ನೋ ಕೀರ್ತಿಗೆ ಪಾತ್ರರಾಗಿದ್ದಾರೆ. 25 ನೇ ವಯಸ್ಸಲ್ಲಿ ಟೀಮ್ ಇಂಡಿಯಾ ಸಾರಥ್ಯ ವಹಿಸಿದ್ದ ಮಾಹಿ 2007 ರಿಂದ 2017ರವರೆಗೆ 72 ಟಿ20 ಮ್ಯಾಚ್​​ಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಇದರಲ್ಲಿ 41  ಮ್ಯಾಚ್​ಗಳಲ್ಲಿ ಗೆಲುವು ಪಡೆದಿದ್ದಾರೆ.

 IPLನಲ್ಲೂ ಯಶಸ್ವಿ ಕ್ಯಾಪ್ಟನ್ :  ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್​ನ ಯಶಸ್ವಿ ನಾಯಕ ಕೂಡ ಹೌದು. ಹಿಟ್​ಮ್ಯಾನ್ ರೋಹಿತ್ ಶರ್ಮಾ ನಾಯಕನಾಗಿ ಮುಂಬೈ ಇಂಡಿಯನ್ಸ್ ತಂಡವನ್ನು 4 ಬಾರಿ ಚಾಂಪಿಯನ್ ಪಟ್ಟಕ್ಕೆ ಏರಿಸಿದ್ದಾರೆ ನಿಜ, ಆದರೆ, ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಹೆಚ್ಚು ಬಾರಿ ( 9 ಬಾರಿ) ಫೈನಲ್​ಗೆ ಕರೆದೊಯ್ದ ಕ್ಯಾಪ್ಟನ್! ಅಲ್ಲದೆ 2008 ರಿಂದ 2019ರವರೆಗೆ  ಧೋನಿ 104 ಮ್ಯಾಚ್​ಗಳನ್ನು ಗೆಲ್ಲಿಸಿಕೊಟ್ಟಿದ್ದು, IPLನಲ್ಲಿ 100 ಗೆಲುವು ಪಡೆದ ಮೊದಲ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 ಐಸಿಸಿಯ ಎಲ್ಲಾ ಟ್ರೋಫಿಗಳನ್ನು ಗೆದ್ದವರು : ಧೋನಿ ನಾಯಕತ್ವದಲ್ಲಿ ಭಾರತ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಚಾಂಪಪಿಯನ್ ಟ್ರೋಫಿಯನ್ನು ಗೆದ್ದಿದೆ. ಹೀಗೆ ಎಲ್ಲಾ ಐಸಿಸಿ ಟ್ರೋಫಿ ಗೆದ್ದ ಕ್ಯಾಪ್ಟನ್ ಅನ್ನೋ ಶ್ರೇಯ ಮಿಸ್ಟರ್​ ಕೂಲ್ ಅವರದ್ದು.

 ಕಮ್ಮಿ ಇನ್ನಿಂಗ್ಸ್​ನಲ್ಲಿ ನಂ 1 ಪಟ್ಟ : ಒಡಿಐನಲ್ಲಿ ಅತಿ ಕಡಿಮೆ ಇನ್ನಿಂಗ್ಸ್​ನಲ್ಲಿ ನಂಬರ್​ 1 ಬ್ಯಾಟ್ಸ್​ಮನ್ ಆದ ದಾಖಲೆ ಕೂಡ ಧೋನಿ ಹೆಸರಲ್ಲಿದೆ. ಧೋನಿ ಒಡಿಐಗೆ ಪದಾರ್ಪಣೆ ಮಾಡಿ 48 ಇನ್ನಿಂಗ್ಸ್​ಗಳಲ್ಲೇ ಮೊದಲ ಸ್ಥಾನ ಪಡೆದಿದ್ದರು. ಆ ದಾಖಲೆಯನ್ನು ಇನ್ನೂ ಕೂಡ ಯಾರೂ ಬ್ರೇಕ್ ಮಾಡಲು ಆಗಿಲ್ಲ.

 ಅರ್ಧಶತಕ : 5 ಬೇರೆ ಬೇರೆ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಅರ್ಧಶತಕ ಸಿಡಿಸಿರುವ ಏಕೈಕ ಆಟಗಾರ ಧೋನಿ.

 ಸಿಕ್ಸರ್​ :  ಧೋನಿ 20 ಬಾರಿ ಸಿಕ್ಸರ್ ಬಾರಿಸಿ ಮ್ಯಾಚ್ ಗೆಲ್ಲಿಸಿಕೊಟ್ಟ ಕೀರ್ತಿಗೂ ಪಾತ್ರರಾಗಿದ್ದಾರೆ.

 ಶತಕ : 7ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿ ಅತಿ ಹೆಚ್ಚು ( 2 ಶತಕ) ಸೆಂಚುರಿ ಸಿಡಿಸಿದ  ಬ್ಯಾಟ್ಸ್​ಮನ್ ಕೂಡ ಹೌದು.

 ಅತಿ ಹೆಚ್ಚು ರನ್ : ಏಕದಿನ ಕ್ರಿಕೆಟ್​ನಲ್ಲಿ 5 ಮತ್ತು ಅದಕ್ಕಿಂತಲೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತಿ ಹೆಚ್ಚು ರನ್ (8324), 6 ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ (4031) ರನ್ ಬಾರಿಸಿದ ದಾಖಲೆ ಮಾಡಿದ್ದಾರೆ.

 ಹೆಚ್ಚು ಬಾರಿ ನಾಟ್​ ಔಟ್ : ಧೋನಿ 84 ಒಡಿಐ ಮ್ಯಾಚ್​ಗಳಲ್ಲಿ ಅಜೇಯರಾಗಿ ಉಳಿದಿದ್ದರು. ಚೇಸಿಂಗ್ ಸಂದರ್ಭದಲ್ಲಿ 51 ಬಾರಿ ಧೋನಿ ನಾಟ್​ಔಟ್ ಆಗಿದ್ದು, ಅದರಲ್ಲಿ 47 ಪಂದ್ಯಗಳಲ್ಲಿ ಭಾರತ ಗೆದ್ದಿದೆ ಅನ್ನೋದು ವಿಶೇಷ. 2 ಮ್ಯಾಚ್​​ಗಳು ಡ್ರಾ ಆಗಿದ್ದು, 2 ಮ್ಯಾಚ್​​ಗಳಲ್ಲಿ ಭಾರತ ಸೋತಿದೆ.  ಒಟ್ಟಾರೆ 84 ಏಕದಿನ ಪಂದ್ಯಗಳಲ್ಲಿ ಅಜೇಯರಾಗಿ ಉಳಿದಿದ್ದು ವರ್ಲ್ಡ್​ ರೆಕಾರ್ಡ್​. ಸೌತ್ ಆಫ್ರಿಕಾದ ಮಾಜಿ ಆಲ್​ರೌಂಡರ್ ಶಾನ್ ಪೊಲಾಕ್ 72 ಬಾರಿ ನಾಟ್​ಔಟ್ ಆಗಿದ್ದರು.

 ಹೆಚ್ಚು ಸ್ಟಂಪಿಂಗ್  : ಟೆಸ್ಟ್, ಏಕದಿನ, ಟಿ20 ಮೂರೂ ಮಾದರಿ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಅತೀ ಹೆಚ್ಚು ಸ್ಟಂಪಿಂಗ್​ ಮಾಡಿದ ದಾಖಲೆಯನ್ನು ಧೋನಿ ಹೊಂದಿದ್ದಾರೆ. ಏಕದಿನ ಪಂದ್ಯಗಳಲ್ಲಿ 120, ಟೆಸ್ಟ್​​ನಲ್ಲಿ 38 ಹಾಗೂ ಟಿ20ಯಲ್ಲಿ 34 ಸ್ಟಂಪಿಂಗ್ ಸೇರಿದಂತೆ ಒಟ್ಟು 195 ಸ್ಟಂಪಿಂಗ್ ಮಾಡಿದ್ದು, ಸೌತ್ ಆಫ್ರಿಕಾದ ಮಾರ್ಕ್​ ಬೌಷರ್​ ಹಾಗೂ ಆಸ್ಟ್ರೇಲಿಯಾದ ಆ್ಯಡಮ್ ಗಿಲ್​ಕ್ರಿಸ್ಟ್​ ನಂತರದ ಸ್ಥಾನದಲ್ಲಿದ್ದಾರೆ.

 ಒಡಿಐನಲ್ಲಿ 50+ ಸರಾಸರಿ :  ಧೋನಿ ಟೀಮ್ ಇಂಡಿಯಾ ಪರ 350 ಏಕದಿನ ಮ್ಯಾಚ್​ಗಳನ್ನು ಆಡಿದ್ದಾರೆ. 50 ರನ್​ ಸರಾಸರಿಯಲ್ಲಿ 10 ಸಾವಿರ ರನ್ ಬಾರಿಸಿದ್ದಾರೆ. 273 ಇನ್ನಿಂಗ್ಸ್​​ಗಳಲ್ಲಿ ಈ ರನ್ ಮಳೆ ಹರಿಸಿರುವ ಧೋನಿ,  ವೇಗವಾಗಿ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿದ್ದಾರೆ.

 

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments