ಗಡಿ ಕಾಯುವ ಜೊತೆಗೆ ಅಲ್ಲಿ ಕ್ರಿಕೆಟ್​ ಕೂಡ ಆಡಿದ್ರು ಧೋನಿ..!

0
192

ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ವೆಸ್ಟ್ ಇಂಡೀಸ್​ ಟೂರ್​ನಿಂದ ದೂರ ಉಳಿದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಮರಳಿರುವುದು ಎಲ್ರಿಗೂ ಗೊತ್ತೇ ಇದೆ.
ಇಂಡಿಯನ್​ ಟೆರಿಟೊರಿಯಲ್​​ ಆರ್ಮಿ 106 ಬೆಟಾಲಿಯನ್​​ನಲ್ಲಿ ಲೆಫ್ಟಿನೆಂಟ್​ ಕರ್ನಲ್​​ ಆಗಿ ಧೋನಿ ಎರಡು ವಾರಗಳ ಕಾಲ ಸೇವೆ ಸಲ್ಲಿಸಿದ್ರು. ಸೇನೆಯಲ್ಲಿ ಸೇವಾ ನಿರತರಾಗಿದ್ದ ಧೋನಿ ಸೈನಿಕರೊಂದಿಗೆ ವಾಲಿಬಾಲ್ ಆಡಿದ್ದು, ಹಾಡು ಹೇಳಿದ್ದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಇದೀಗ ಅವರು ಮಕ್ಕಳ ಜೊತೆ ಕ್ರಿಕೆಟ್​ ಆಡಿದ್ದು. ಆ ಫೋಟೋ ಈಗ ವೈರಲ್ ಆಗಿದೆ. ಆಗಸ್ಟ್​ 14ರಂದು ಧೋನಿ ಲಡಾಕ್​ ಸೇನಾ ಬೇಸ್​ ಮತ್ತು ಮಿಲಟರಿ ಆಸ್ಪತ್ರೆಗೆ ಭೇಟಿ ನೀಡಿದ್ರು. ಈ ವೇಳೆ ಬಾಸ್ಕೆಟ್​ ಬಾಲ್​ ಕೋರ್ಟ್​ನಲ್ಲಿ ಲೇಹ್ ಮಕ್ಕಳ ಜೊತೆ ಮಾಹಿ ಕ್ರಿಕೆಟ್ ಆಡಿದ್ದರು. ಈ ಫೋಟೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

LEAVE A REPLY

Please enter your comment!
Please enter your name here