Home ಕ್ರೀಡೆ P.Cricket ಧೋನಿಯನ್ನು 7ನೇ ಕ್ರಮಾಂಕದಲ್ಲಿ ಆಡಿಸಿದ್ದಕ್ಕೆ ರವಿಶಾಸ್ತ್ರಿ ಕೊಟ್ಟ ಕಾರಣ ಏನ್ ಗೊತ್ತಾ?

ಧೋನಿಯನ್ನು 7ನೇ ಕ್ರಮಾಂಕದಲ್ಲಿ ಆಡಿಸಿದ್ದಕ್ಕೆ ರವಿಶಾಸ್ತ್ರಿ ಕೊಟ್ಟ ಕಾರಣ ಏನ್ ಗೊತ್ತಾ?

ಲೀಗ್ ಮ್ಯಾಚ್​ಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ನಂಬರ್​ 1 ಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ಸೆಮೀಸ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ 18ರನ್​ಗಳಿಂದ ಸೋಲನುಭವಿಸಿ ನಿರಾಸೆ ಮೂಡಿಸಿದ್ದು ಈಗ ಇತಿಹಾಸ.
ನ್ಯೂಜಿಲೆಂಡ್ ನೀಡಿದ್ದ 240ರನ್​ಗಳ ಗುರಿ ಬೆನ್ನತ್ತುವಾಗ ಭಾರತ ಆರಂಭದಲ್ಲೇ ಎಡವಿತು. ಉಪ ನಾಯಕ ರೋಹಿತ್ ಶರ್ಮಾ (1), ಕನ್ನಡಿಗ ಕೆ,ಎಲ್​ ರಾಹುಲ್​ (1), ನಾಯಕ ವಿರಾಟ್ ಕೊಹ್ಲಿ (1) ಒಬ್ಬರ ಹಿಂದೊಬ್ಬರಂತೆ ಸ್ಕ್ರೀಸ್​ಗೆ ಇಳಿದ ಸ್ಪೀಡಲ್ಲೇ ಪೆವಿಲಿಯನ್ ಸೇರಿಕೊಂಡ್ರು. ಅವರ ಬೆನ್ನಲ್ಲೇ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗೆ ಇಳಿದ ಅನುಭವಿ ಬ್ಯಾಟ್ಸ್​ಮನ್​ ದಿನೇಶ್ ಕಾರ್ತಿಕ್ 6ರನ್​ಗಳನ್ನಷ್ಟೇ ಮಾಡಿ ಔಟ್ ಆದ್ರು. ದಿನೇಶ್​ಗಿಂತಲೂ ಮೊದಲು, ಅಂದ್ರೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​​ಗಿಳಿದಿದ್ದ ಯುವ ಆಟಗಾರ ರಿಷಭ್ ಪಂತ್ (32), ದಿನೇಶ್ ಪೆವಿಲಿಯನ್ ಸೇರಿದ್ಮೇಲೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗೆ ಇಳಿದ ಹಾರ್ದಿಕ್ ಪಾಂಡ್ಯ (32) ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದ್ರೂ ದೊಡ್ಡ ಜೊತೆಯಾಟ ಈ ಇಬ್ರಿಂದ ಬರ್ಲಿಲ್ಲ. ನಂತರ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹೇಂದ್ರ ಸಿಂಗ್ ಧೋನಿ (50) ಹಾಗೂ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಆಲ್​ರೌಂಡರ್ ರವೀಂದ್ರ ಜಡೇಜಾ (77) ಗೆಲ್ಲುವ ಆಸೆಯನ್ನು ಚಿಗುರಿಸಿದ್ದರು. ಅಂತಿಮ ಹಂತದಲ್ಲಿ ಅವರಿಬ್ಬರೂ ಔಟಾಗುವುದರೊಂದಿಗೆ ಭಾರತದ ಗೆಲುವಿನ ಆಸೆಯೂ ಕಮರಿತು.
ಭಾರತ ಸೋಲುತ್ತಿದ್ದಂತೆ ಕೆಲವರು ಧೋನಿಯನ್ನು ಟೀಕಿಸಲು ಆರಂಭಿಸಿದ್ದರು. ಮತ್ತೆ ಕೆಲವರು ಧೋನಿಯನ್ನು 5ನೇ ಕ್ರಮಾಂಕದಲ್ಲೇ ಬ್ಯಾಟಿಂಗ್​ಗೆ ಕಳುಹಿಸಬೇಕಿತ್ತು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಸಿದ್ದು ತಪ್ಪಾಯ್ತು ಅಂತ ಕೆಂಡಮಂಡಲರಾಗಿದ್ದರು. ಇದೀಗ ರವಿಶಾಸ್ತ್ರಿ ಧೋನಿಯನ್ನು 7ನೇ ಸ್ಲಾಟ್​ನಲ್ಲಿ ಕಣಕ್ಕಿಳಿಸಿದ್ದು ಯಾಕಂತ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತಾಡಿರುವ ಶಾಸ್ತ್ರಿ,”ಧೋನಿ ವಿಕೆಟನ್ನು ಆರಂಭದಲ್ಲೇ ಕಳೆದುಕೊಳ್ಳೋಕೆ ಯಾರೂ ಬಯಸಿರಲಿಲ್ಲ. ಯಾಕಂದ್ರೆ ಧೋನಿ ಅದ್ಭುತ ಫಿನಿಶರ್. ಅವರ ಅನುಭವ ಇನ್ನಿಂಗ್ಸ್​ ಕೊನೆಯಲ್ಲಿ ನೆರವಿಗೆ ಬರಲಿದೆ. ಅವರನ್ನು 7ನೇ ಕ್ರಮಾಂಕದಲ್ಲಿ ಬಳಸಿಕೊಳ್ಳೋದ್ರಲ್ಲಿ ತಪ್ಪಿಲ್ಲ ಅಂತ ಇಡೀ ಟೀಮ್ ನಿರ್ಧಾರ ಮಾಡಿತ್ತು” ಎಂದಿದ್ದಾರೆ.
ಇನ್ನು ಈ ಯೋಜನೆಯೂ ಒಂದು ಹಂತದಲ್ಲಿ ಕ್ಲಿಕ್ ಆಗಿತ್ತು. ಧೋನಿ ಉತ್ತಮವಾಗಿಯೇ ಆಡಿದ್ರು. ಪರಿಸ್ಥಿತಿಯನ್ನು ಬದಲಾಯಿಸಿದ್ದರು. ಯಾವ ಬಾಲನ್ನು ಹೇಗೆ ಹೊಡೆಯ ಬೇಕು. ಕೊನೆಯ ಓವರ್​ನಲ್ಲಿ ಜಿಮ್ಮಿ ನೀಶಮ್​ ಬೌಲಿಂಗ್ ಮಾಡಲಿದ್ದು, ಆ ಓವರ್​​ಗೆ ಎಷ್ಟು ರನ್ ಬಾಕಿ ಉಳಿಸಿಕೊಳ್ಳ ಬೇಕೆನ್ನುವುದರ ಲೆಕ್ಕಾಚಾರವನ್ನು ಮಾಡಿಟ್ಟುಕೊಂಡಿದ್ದರು. ಅದೇ ರೀತಿ ಆಡ್ತಿದ್ರು. ಆದರೆ, ಅವರು ರನ್​ಔಟ್​ ಆಗಿದ್ದು ಬ್ಯಾಡ್​​​ಲಕ್ ಅಂತಲೂ ಶಾಸ್ತ್ರಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

ಅಪಮಾನದಿಂದ ಶೋಕ್ದಾರ್ ಮುಕ್ತ.. ನೋ ಮಿಸ್ಟೇಕ್..?!

ನೈಟ್ ಸಫಾರಿಯಿಂದ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದ ಸ್ಯಾಂಡಲ್​ವುಡ್​ನ ಶೋಕ್ದಾರ್, ಟಾಕ್ ಆಫ್ ದ ಟೌನ್ ಆಗಿದ್ರು. ಆದ್ರೀಗ ಅರಣ್ಯಾಧಿಕಾರಿಗಳು ಆ ಕೇಸ್​ನ ಟ್ರೇಸ್ ಮಾಡಿದ್ದಾರೆ. ಅವಮಾನ ಹಾಗೂ ಅಪಮಾನಗಳಿಂದ ಬಜಾರ್ ಹುಡ್ಗನಿಗೆ ಮುಕ್ತಿ...

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

Recent Comments