Home ಕ್ರೀಡೆ P.Cricket ಟಿ20 ವರ್ಲ್ಡ್​​​ಕಪ್​ ನಡೆಯಲ್ಲ ; IPLನಲ್ಲಿ ಮಿಂಚಿದ್ರೂ ಧೋನಿಗೆ ಕಮ್​ಬ್ಯಾಕ್ ಚಾನ್ಸ್​​ ಇಲ್ಲ?

ಟಿ20 ವರ್ಲ್ಡ್​​​ಕಪ್​ ನಡೆಯಲ್ಲ ; IPLನಲ್ಲಿ ಮಿಂಚಿದ್ರೂ ಧೋನಿಗೆ ಕಮ್​ಬ್ಯಾಕ್ ಚಾನ್ಸ್​​ ಇಲ್ಲ?

ಮಹೇಂದ್ರ ಸಿಂಗ್ ಧೋನಿ..  ವಿಶ್ವಕ್ರಿಕೆಟ್​ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ಕ್ಯಾಪ್ಟನ್. ಭಾರತಕ್ಕೆ ಎರಡು ವರ್ಲ್ಡ್​​​​​ಕಪ್​​ ( 2007ರ ಟಿ20, 2011ರ ಒಡಿಐ) ತಂದುಕೊಟ್ಟ ಯಶಸ್ವಿ ನಾಯಕ. ಕ್ರಿಕೆಟ್​ ದುನಿಯಾದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದ  ಬ್ಯಾಟಿಂಗ್ ಸುನಾಮಿ, ಮಿಂಚಿನ ವೇಗದಿ ಸ್ಟಂಪಿಂಗ್ ಮಾಡ್ತಿದ್ದ ವಿಕೆಟ್​ ಕೀಪರ್ … ಅದೆಷ್ಟೇ ಕಮ್ಮಿ ಬಾಲ್​ಗಳಿಗೆ ಅದೆಷ್ಟೇ ದೊಡ್ಡ ಮೊತ್ತ ಚೇಸ್​ ಮಾಡ್ಬೇಕಾದ ಸಂದರ್ಭವಿರ್ಲಿ, ಧೋನಿ ಕ್ರೀಸ್​ನಲ್ಲಿದ್ದರೆ ಖಂಡಿತಾ ಅದು ಸಾಧ್ಯ ಅನ್ನೋ ನಂಬಿಕೆಯಿದ್ದ ಕಾಲವಿತ್ತು. ಇಂಥಾ ಧೋನಿ 2019ರ ವರ್ಲ್ಡ್​ಕಪ್​ ಬಳಿಕ ಟೀಮ್​ ಇಂಡಿಯಾದಲ್ಲಿಲ್ಲ. ಆದ್ರೆ ಧೋನಿ ಕಮ್​ಬ್ಯಾಕ್ ಆಗ್ತಾರೆ ಅನ್ನೋ ವಿಶ್ವಾಸ ಅಭಿಮಾನಿಗಳಲ್ಲಿತ್ತು. ಏನಿಲ್ಲ ಅಂದ್ರೂ ಟಿ20 ವರ್ಲ್ಡ್​ಕಪ್​ನಲ್ಲಿ ಧೋನಿ ಆಡೇ ಆಡ್ತಾರೆ ಅನ್ನೋ ಭರವಸೆ ಇತ್ತು! ಐಪಿಎಲ್​ನಲ್ಲಿ ಧೋನಿ ಬ್ಯಾಟ್​ ಸದ್ದು ಮಾಡುತ್ತೆ .. ಆ ಮೂಲಕ ಮತ್ತೆ ಬ್ಲ್ಯೂ ಜರ್ಸಿ ತೊಡ್ತಾರೆ ಅನ್ನೋ ಕಾನ್ಫಿಡೆನ್ಸ್​​​ನಲ್ಲಿ, ಧೋನಿಯನ್ನು ಮತ್ತೆ ಮೈದಾನದಲ್ಲಿ ನೋಡೋ ತವಕದಲ್ಲಿ ಅಭಿಮಾನಿಗಳಿದ್ರು…. ಆದ್ರೆ ಬಹುಶಃ ಅದಿನ್ನು ಕಷ್ಟ ಸಾಧ್ಯ…! ಕೊರೋನಾ ಮಹಾಮಾರಿ ಆ ನಿರೀಕ್ಷೆಗಳಿಗೂ ಬೆಂಕಿಇಟ್ಟುಬಿಟ್ಟಿದೆ!

ಹೌದು, ನಿಮ್ಗೆ ಆಲ್​ರೆಡಿ ಗೊತ್ತಿರುವಂತೆ ಕೊರೋನಾ ದೆಸೆಯಿಂದ ಟಿ20 ವರ್ಲ್ಡ್​​ಕಪ್ ಈ ವರ್ಷ ನಡೀತಾ ಇಲ್ಲ. ಅದು ಮುಂದೂಡಲ್ಪಟ್ಟಿದೆ. ಐಪಿಎಲ್ ಏನೋ ನಡೆಯೋ ಸಾಧ್ಯತೆ ಹೆಚ್ಚಿದೆ. ಆದ್ರೆ ಅದಕ್ಕಿನ್ನೂ ಪಕ್ಕಾ ಮುಹೂರ್ತ ಫಿಕ್ಸ್ ಆಗಿಲ್ಲ. ಐಪಿಎಲ್ ನಡೆದು ಧೋನಿ ಅಬ್ಬರಿಸಿದ್ರೂ ಮುಂದಿನ ಟಿ20 ವರ್ಲ್ಡ್​ಕಪ್​ ಗೆ ಆಯ್ಕೆ ಆಗೋದು ಡೌಟೇ.. ಯಾಕಂದ್ರೆ 39ವರ್ಷದ ಧೋನಿ ರೀ ಎಂಟ್ರಿಗೆ ವಯಸ್ಸು ಅಡ್ಡಿ ಆಗ್ಬಹುದು..! ಯುವಕರಿಗೆ ಧೋನಿ ಚಾನ್ಸ್ ಕೊಡ್ಲಿ.. ಅವ್ರು ನಿವೃತ್ತಿಯಾಗ್ಲಿ ಅನ್ನೋ ಅಭಿಪ್ರಾಯ ಹಿರಿಯ, ಮಾಜಿ ಕ್ರಿಕೆಟರ್​​ಗಳ ಅಭಿಪ್ರಾಯ … ಬಿಸಿಸಿಐ ಕೂಡ ಧೋನಿಯನ್ನು ಗೌರವಯುತವಾಗಿ ಸೆಂಡ್​​ಆಫ್ ನೀಡೋ ಯೋಚ್ನೆಯಲ್ಲಿದೆ. ಆದ್ರೆ, ಅಭಿಮಾನಿಗಳಿಗೆ ಧೋನಿ ಮತ್ತೆ ಆಡ್ಬೇಕು ಅನ್ನೋ ಆಸೆ… ಎಲ್ಲದಕ್ಕೂ ಸದ್ಯದಲ್ಲೇ ಉತ್ತರ ಸಿಗಲಿದೆ.

LEAVE A REPLY

Please enter your comment!
Please enter your name here

- Advertisment -

Most Popular

‘ನಾನೇ ಸಭಾಪತಿ ಎಂದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ’

ಹುಬ್ಬಳ್ಳಿ: ಜೆಡಿಎಸ್ ನಿಂದ ನಾನೇ ಸಭಾಪತಿ ಅಭ್ಯರ್ಥಿ. ಬಿಜೆಪಿ ಉಪಸಭಾಪತಿಗೆ ಸ್ಪರ್ದೆ ಮಾಡಿದ್ರೆ ನಾನೇ ಸಭಾಪತಿ ಆಗುವೆ ಎಂದು ವಿಧಾನ ಪರಿಷತ್  ಸದಸ್ಯ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,...

ಕೆಎಲ್ ಇ ಸಂಸ್ಥೆಗೆ ನೀಡಿದ ಭೂಮಿ ಮರಳಿ ಪಡೆಯುಲ್ಲ: ಬಸವರಾಜ್ ಹೊರಟ್ಟಿ

ಹುಬ್ಬಳ್ಳಿ: ಮೂರು ಸಾವಿರಮಠದ ಆಸ್ತಿ ವಿವಾದ ಕುರಿತಂತೆ ಉನ್ನತ ಸಮಿತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ದಿಂಗಾಲೇಶ್ವರ ಶ್ರೀಗಳ ವಿರುದ್ದ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಕಿಡಿಕಾರಿದರು. ನಗರದಲ್ಲಿಂದು ಮಾತನಾಡಿದ ಅವರು, ನಾನು ಮಠದ...

ಪಂಜರದ ಗಿಣಿಗೆ ಇಂದು ಬಿಡುಗಡೆ ಭಾಗ್ಯ..!

ಬೆಂಗಳೂರು: ಡ್ರಗ್ಸ್ ಕೇಸ್ ನಲ್ಲಿ ನಟಿ ರಾಗಿಣಿ ಅರೆಸ್ಟ್ ಆಗಿದ್ದರು, ಆದರೆ ಬೆಲ್ ಸಿಕ್ಕೂ ನಾಲ್ಕು ದಿನ ಆದರೂ ಇಂದು ಸಂಜೆ ನಟಿ ರಾಗಿಣಿ ದ್ವಿವೇದಿ ಪರಪ್ಪನ ಅಗ್ರಹಾರ ಜೈಲಿನಿಂದ ಸಂಜೆ ಬಿಡುಗಡೆಯಾಗಲಿದ್ದಾರೆ. ನಟಿ...

ಯಾವ ಸರ್ಕಾರವೂ ರೈತರಿಗೆ ತೊಂದರೆ ಕೊಡುವ ಕೆಲಸ ಮಾಡಲ್ಲ: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಕೃಷಿ ಕಾಯ್ದೆ ಪ್ರಯೋಗ ಆಗಲಿ. ಒಂದೆರೆಡು ವರ್ಷ ಪ್ರಯೋಗ ಆಗಲಿ. ಆಗ ರೈತರಿಗೆ ತೊಂದರೆಯಾದರೆ ವಾಪಸ್ ಪಡೆಯೋಕೆ ತಯರಾಗುತ್ತಾರೆ. ಯಾವ ಸರ್ಕಾವೂ ರೈತರಿಗೆ ತೊಂದರೆ ನೀಡುವ ಕೆಲಸ ಮಾಡಲ್ಲ ಎಂದು ಬೃಹತ್ ಕೈಗಾರಿಕೆ...

Recent Comments