ನೈಟ್ ಸಫಾರಿಯಿಂದ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದ ಸ್ಯಾಂಡಲ್ವುಡ್ನ ಶೋಕ್ದಾರ್, ಟಾಕ್ ಆಫ್ ದ ಟೌನ್ ಆಗಿದ್ರು. ಆದ್ರೀಗ ಅರಣ್ಯಾಧಿಕಾರಿಗಳು ಆ ಕೇಸ್ನ ಟ್ರೇಸ್ ಮಾಡಿದ್ದಾರೆ. ಅವಮಾನ ಹಾಗೂ ಅಪಮಾನಗಳಿಂದ ಬಜಾರ್ ಹುಡ್ಗನಿಗೆ ಮುಕ್ತಿ ಕೊಟ್ಟಿದ್ದಾರೆ. ಇಷ್ಟಕ್ಕೂ ಆಗಿದ್ದೇನು ಅನ್ನೋದ್ರ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ.
ಧನ್ವೀರ್ ಗೌಡ.. ಲಾಂಗ್ ಹಿಡಿದು `ಬಜಾರ್’ಗಿಳಿದ ಸ್ಯಾಂಡಲ್ವುಡ್ನ ಶೋಕ್ದಾರ್. ಚೊಚ್ಚಲ ಸಿನಿಮಾದಲ್ಲೇ ಕನ್ನಡ ಸಿನಿಪ್ರಿಯರ ಮನಸೋರೆಗೊಂಡ ಅತ್ಯದ್ಭುತ ಪ್ರತಿಭೆ. ಭವಿಷ್ಯದ ಭರವಸೆಯ ಸ್ಟಾರ್ ನಟನಾಗಿ ಬಾಕ್ಸ್ ಆಫೀಸ್ನಲ್ಲೂ ಧೂಳೆಬ್ಬಿಸಿದ್ದರು.
ದರ್ಶನ್ ಆಪ್ತರ ಗ್ಯಾಂಗ್ನಲ್ಲಿ ಕಾಣಿಸಿಕೊಳ್ತಿದ್ದ ಧನ್ವೀರ್, ಪಕ್ಕಾ ಡಿ ಬಾಸ್ ಹುಡ್ಗ ಅಂತಲೇ ಕರೆಸಿಕೊಳ್ತಿದ್ರು. ಇನ್ನು ಇತ್ತೀಚೆಗೆ ಇವ್ರ ಬರ್ತ್ ಡೇ ಪ್ರಯುಕ್ತ ರಿವೀಲ್ ಆದ ಬಂಪರ್ ಟೀಸರ್ ನೋಡುಗರ ಎದೆ ನಡುಗಿಸಿತ್ತು. ನೆಕ್ಸ್ಟ್ ಲೆವೆಲ್ ಮೇಕಿಂಗ್ನಿಂದ ಬಂಪರ್ ಸೂಪರ್ ಡೂಪರ್ ಹಿಟ್ ಆಗೋ ಸೂಚನೆ ಕೊಟ್ಟಿತ್ತು.
ಹೀಗೆ ಈಗಷ್ಟೇ ಚಿತ್ರರಂಗದಲ್ಲಿ ಅಂಬೆಗಾಲಿಡ್ತಿರೋ ಈ ಪ್ರತಿಭಾನ್ವಿತ ಕಲಾವಿದನಿಗೆ ಹೊಸ ವಿವಾದ ಸುತ್ತಿಕೊಂಡಿತ್ತು. ಬಂಡೀಪುರ ಅಭಯಾರಣ್ಯದಲ್ಲಿನ ನೈಟ್ ಸಫಾರಿ ಮಾಡಿದ್ದಾರೆ ಅನ್ನೋ ಅಪವಾದ ಹೊರೆಸಲಾಗಿತ್ತು. ಅದಕ್ಕೆ ಕಾರಣ, ಅವ್ರೇ ಇನ್ಸ್ಟಾದಲ್ಲಿ ಹಾಕಿಕೊಂಡಿದ್ದ ನೈಟ್ ಸಫಾರಿಯ ಆ ವಿಡಿಯೋ ಝಲಕ್.
ಶ್ರೀಸಾಮಾನ್ಯರಿಗೊಂದು ನ್ಯಾಯವಾದ್ರೆ, ಸ್ಟಾರ್ಗಳಿಗೇ ಒಂದು ನ್ಯಾಯವಾ ಅನ್ನೋ ಕೂಗು ದಟ್ಟವಾಗಿ ಕೇಳಿಬಂತು. ಆದ್ರೆ ಮಾಧ್ಯಮಗಳಲ್ಲಿ ಜಗಜ್ಜಾಹಿರಾದ ಆ ಕೇಸ್ನ ಕೂಲಂಕುಶವಾಗಿ ತನಿಖೆ ಮಾಡಿದ ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿಯಾಗಿರೋ ಎನ್.ಪಿ. ನವೀನ್ ಕುಮಾರ್, ಖುದ್ದು ಧನ್ವೀರ್ ವಿಚಾರಣೆ ನಡೆಸಿದ್ದಾರೆ.
ಸಂಜೆ ಐದು ಗಂಟೆಗೆ ಸಫಾರಿಗೆಂದು ತೆರಳಿದ ಧನ್ವೀರ್ ಹಾಗೂ ಸ್ನೇಹಿತರಿಗೆ ಸಫಾರಿ ವೆಹಿಕಲ್ ಸಿಕ್ಕಿದ್ದು ತಡವಾಗಿತ್ತು. ಹಾಗಾಗಿ ಹುಲಿಯ ಆ ವಿಡಿಯೋ ಕೂಡ 6.25ಕ್ಕೆ ಮಾಡಲಾಗಿತ್ತು. ಅದು ಧನ್ವೀರ್ ಫೋನ್ನಲ್ಲಿ ರೆಕಾರ್ಡ್ ಆಗಿತ್ತು. ಇನ್ನು 6.40ಕ್ಕೆ ಸಫಾರಿಯಿಂದ ವಾಪಸ್ ಕೂಡ ಬಂದಿದ್ರು ಧನ್ವೀರ್. ಹಾಗಾಗಿ ಇದು ನೈಟ್ ಸಫಾರಿ ಅಲ್ಲ, ಇಳಿಸಂಜೆಯಲ್ಲಾದ ಯಡವಟ್ಟು ಅನ್ನೋದು ಖಚಿತ ಪಡಿಸಿದ್ದಾರೆ.
ಇನ್ನು ಈ ಕುರಿತು ಪವರ್ ಟಿವಿ ಜೊತೆ ಮಾತನಾಡಿರೋ ಧನ್ವೀರ್ ಕೂಡ, ಕಾನೂನನ್ನ ಎಲ್ಲರೂ ಗೌರವಿಸಬೇಕು. ನಾನು ಯಾವುದೇ ಉಲ್ಲಂಘಟನೆ ಮಾಡಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.
ಸದ್ಯ ರೇಂಜ್ ಫಾರೆಸ್ಟ್ ಆಫೀಸರ್ ಹೇಳಿಕೆಯಿಂದ ಕಾಂಟ್ರವರ್ಸಿಯಿಂದ ಮುಕ್ತಿ ಪಡೆದಿರೋ ಶೋಕ್ದಾರ್, ಬಂಪರ್ ಶೂಟಿಂಗ್ಗೆ ಸಜ್ಜಾಗ್ತಿದ್ದಾರೆ. ನವೆಂಬರ್ ತಿಂಗಳಾಂತ್ಯಕ್ಕೆ ಶೂಟಿಂಗ್ ಶುರುವಾಗಲಿದ್ದು, ಅಲೆಮಾರಿ ಸಂತು ಆ್ಯಕ್ಷನ್ ಕಟ್ಹೇಳ್ತಿರೋ ಈ ಚಿತ್ರಕ್ಕಾಗಿ ದೇಹ ಹುರಿಗಟ್ಟಿಸಿ, ಡ್ಯಾನ್ಸ್ ಪ್ರಾಕ್ಟೀಸ್ ಕೂಡ ಮಾಡ್ತಿದ್ದಾರೆ.
-ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್