Saturday, May 28, 2022
Powertv Logo
Homeಸಿನಿಮಾಬೆಂಗಳೂರು ಅಂಡರ್ ವರ್ಲ್ಡ್‌ನ ಮೊದಲ ಡಾನ್ ಪಾತ್ರದಲ್ಲಿ ಡಾಲಿ‌ ಧನಂಜಯ್...!

ಬೆಂಗಳೂರು ಅಂಡರ್ ವರ್ಲ್ಡ್‌ನ ಮೊದಲ ಡಾನ್ ಪಾತ್ರದಲ್ಲಿ ಡಾಲಿ‌ ಧನಂಜಯ್…!

ನಟ ಡಾಲಿ ಧನಂಜಯ್ ಬೆಂಗಳೂರು ಅಂಡರ್ ವರ್ಲ್ಡ್ ನ ಮೊದಲ ಡಾನ್ ಜಯರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಯುವ ಪ್ರತಿಭೆ ಶೂನ್ಯ ಆ್ಯಕ್ಷನ್ ಕಟ್ ಹೇಳಲಿರುವ ಈ ಸಿನಿಮಾದಲ್ಲಿ ಡಾಲಿ ಡಾನ್ ಆಗಿ ಖದರ್ ತೋರಿಸಲಿದ್ದಾರೆ. ಅಲ್ಲಮ ಬಳಿಕ ಧನಂಜಯ್ ನಟಿಸುತ್ತಿರುವ ಮತ್ತೊಂದು ಬಯೋಪಿಕ್ ಇದಾಗಿದ್ದು, ಅಶು ಬೆದ್ರೆ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಅಗ್ನಿ ಶ್ರೀಧರ್ ಈ ಸಿನಿಮಾಕ್ಕೆ ಕಥೆ ಬರೆಯುತ್ತಿದ್ದಾರೆ. ‘ಕಿರಗೂರಿನ‌ ಗಯ್ಯಾಳಿಗಳು’ ಬಳಿಕ‌ , ಅಂದರೆ ನಾಲ್ಕು ವರ್ಷದ ನಂತರ ಶ್ರೀಧರ್ ಸಿನಿಮಾದತ್ತ ಮರಳಿದ್ದಾರೆ.
ಎರಡು ಭಾಗಗಳಲ್ಲಿ, ಪಂಚಭಾಷೆಗಳಲ್ಲಿ ಸಿನಿಮಾ ಪ್ಲ್ಯಾನ್ ಮಾಡಲಾಗಿದ್ದು,‌ ಡಾಲಿ ಹೊರತುಪಡಿಸಿ ಉಳಿದ ತಾರಾಗಣ, ಸಿನಿಮಾ ಟೈಟಲ್ ಇನ್ನಷ್ಟೇ ಅನೌನ್ಸ್ ಆಗಬೇಕಿದೆ. ಸಿನಿಮಾ‌‌‌ ಸದ್ಯದಲ್ಲೇ ಸೆಟ್ಟೇರಲಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments