Home ರಾಜ್ಯ ಯುವಕರ ಸಂಭ್ರಮ ಕಸಿದುಕೊಂಡ ಕೊರೋನಾ !

ಯುವಕರ ಸಂಭ್ರಮ ಕಸಿದುಕೊಂಡ ಕೊರೋನಾ !

ದೇವನಹಳ್ಳಿ : ಇಡೀ ದೇಶದಲ್ಲಿ ಗಣೇಶ ಹಬ್ಬ ಬಂದ್ರೆ ಸಾಕು ಯುವ ಸಮೂಹಕ್ಕೆ ಸಂಭ್ರಮವೋ ಸಂಭ್ರಮ. ಆದ್ರೆ ಈ ಬಾರಿ ಕೊರೋನಾ ವೈರಸ್ ಎಂಬ ಮಹಾ ಮಾರಿ ಆ ಸಂಭ್ರಮವನ್ನೇ ಕಸಿದುಕೊಂಡಿದೆ. ಗಣೇಶ ಹಬ್ಬದ ಒಂದು ತಿಂಗಳು ಮೊದಲು ಯುವಕ ಯುವತಿಯರು ಸಾರ್ವತ್ರಿಕವಾಗಿ ಗಣೇಶ ಹಬ್ಬವನ್ನು ಈ ರೀತಿ ಆಚರಣೆ ಮಾಡಬೇಕು ಆ ರೀತಿ ಆಚರಣೆ ಮಾಡಬೇಕು ಎಂದು ಸಿದ್ಧತೆಗಳನ್ನು ನಡೆಸಿ ಹಬ್ಬದ ದಿನ ಅತ್ಯಂತ ಸಡಗರದಿಂದ ಆಚರಣೆ ಮಾಡಲಾಗುತ್ತಿತ್ತು. ಕೊರೋನಾ ಎಫೆಕ್ಟ್ ನಿಂದ ಆ ಸಂಭ್ರಮ ಮರೆಮಾಚಿದೆ.

ಗಲ್ಲಿ ಗಲ್ಲಿಗಳಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಒಂದು ದಿನ,ಮೂರು ದಿನ, ಐದು ದಿನ , ಒಂಭತ್ತು ದಿನ ಹೀಗಿ ಪ್ರತಿ ನಿತ್ಯ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತಿತ್ತು. ವಯಸ್ಸಿನ ಭೇದ ಬಾವವಿಲ್ಲದೆ ಹಳ್ಳಿ,ಊರು,ಪಟ್ಟಣ,ನಗರಗಳಲ್ಲಿ ಸಾರ್ವತ್ರಿಕ ಗಣೇಶ ಹಬ್ಬವನ್ನು ಶ್ರದ್ಧೆ,ಭಕ್ತಿಯಿಂದ ಆಚರಣೆ ಮಾಡಲಾಗುತ್ತಿತ್ತು. ಈ ಕಣ್ಣಿಗೆ ಕಾಣದ ವೈರಸ್ ಆ ಇಡೀ ಸಂಭ್ರಮಕ್ಕೆ ಧಕ್ಕೆ ಉಂಟು ಮಾಡಿದೆ.

ಇಂದು ದೇಶಾದ್ಯಂತ ಗಣೇಶ ಚತುರ್ಥಿ ಎಲ್ಲ ಕಡೆ ಅತ್ಯಂತ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಪ್ರತಿ ವರ್ಷ ಗಣೇಶ ಪ್ರತಿಷ್ಠಾಪನೆ ಮಾಡುತ್ತಿದ್ದ ಸ್ಥಳಗಳು ಬೀಕೋ ಎನ್ನುತ್ತಿವೆ. ಗಣೇಶ ಹಬ್ಬದ ದಿನ ಯುವಕರು ಇಡೀ ದಿನ ಬೀದಿಗಳಲ್ಲಿ ಹಬ್ಬ ಆಚರಣೆ ಮಾಡಲು ಕಾಣುತ್ತಿದ್ದರು, ಕೊರೊನಾ ಎಫೆಕ್ಟ್ ನಿಂದ ವಿಜೃಂಭಣೆ ಆಚರಣೆಗೆ ಸರ್ಕಾರ ನಿರ್ಭಂದ ಜಾರಿ ಮಾಡಿರುವ ಹಿನ್ನಲೆಯಲ್ಲಿ ಯುವಕರು ಬೀದಿಗಿಳಿದಿಲ್ಲ. ಇನ್ನೂ ಗಣೇಶ ವಿಸರ್ಜನೆ ವೇಳೆ ಅಂತೂ ಯುವ ಸಮೂಹಕ್ಕೆ ಏನೋ ಹುಮಸ್ಸು. ಗಣೇಶ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ,ವಾದ್ಯ ಗೋಷ್ಠಿಗಳೊಂದಿಗೆ ಮೆರವಣಿಗೆ ಮಾಡುತ್ತಾ ವಿಸರ್ಜನೆ ಕಾರ್ಯಕ್ರಮ ನಡೆಸುತ್ತಿದ್ದರು ಅಂತಹ ಸನ್ನಿವೇಶ ಈ ಬಾರಿ ಕಾಣಲು ಸಾಧ್ಯವಿಲ್ಲ.
ಇನ್ನೂ ವಿಜೃಂಭಣೆ ಗಣೇಶ ಆಚರಣೆಗೆ ಬ್ರೇಕ್ ಹಾಕಿದ ಕಾರಣ ಸಾಕಷ್ಟು ವಲಯಗಳಿಂದ ಸಾಕಷ್ಟು ನಷ್ಟ ಉಂಟಾಗಿದೆ. ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದ ಗೌರಿ, ಗಣೇಶ ಮೂರ್ತಿಗಳನ್ನು ತಯಾರು ಮಾಡುತ್ತಿದ್ದ ಸಾವಿರಾರು ಕುಟುಂಬಗಳಿಗೆ ಈ ಬಾರಿ ವ್ಯಾಪಾರ ಇಲ್ಲದೇ ಸಾಕಷ್ಟು ನಷ್ಟ ಉಂಟಾಗಿದೆ.

ಗೌರಿ, ಗಣೇಶ ಹಬ್ಬದ ಹೂ, ಹಣ್ಣು, ತರಕಾರಿ, ದಿನಸಿ ಅಂಗಡಿಗಳಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚು ವ್ಯಾಪಾರ ಆಗುತ್ತಿತ್ತು. ಆದ್ರೆ ಈ ಬಾರಿ ಕಡಿಮೆ ಕಡಿಮೆ ವ್ಯಾಪಾರ. ವಿಜೃಂಭಣೆಯಿಂದ ಗಣೇಶ ಹಬ್ಬ ಆಚರಣೆ ವೇಳೆ ಸಾಂಸ್ಕೃತಿ ಕಾರ್ಯಕ್ರಮಗಳ ತಂಡಕ್ಕೆ, ತಮಟೆ ತಂಡಗಳಿಗೆ,ಆರ್ಕೆಸ್ಟ್ರಾ ತಂಡಗಳಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತಿತ್ತು ಈ ಬಾರಿ ಕೊರೋನಾ ಎಫೆಕ್ಟ್​ನಿಂದ ಅವರನ್ನು ಕೇಳುವವರಿಲ್ಲದಂತೆ ಆಗಿದೆ. ಇನ್ನೂ ಗಲ್ಲಿ ಗಲ್ಲಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಬೀದಿಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗುತ್ತಿತ್ತು. ಇದ್ದರಿಂದ ಮಾಲೀಕರು ಸಾಕಷ್ಟು ಲಾಭ ಪಡೆಯುತ್ತಿದ್ದರು ಅವರಿಗೆ ಕೊರೋನಾ ಎಫೆಕ್ಟ್ ತಟ್ಟಿದೆ.
ಒಟ್ಟಾರೆ ಬಹುತೇಕ ಗೌರಿ ಗಣೇಶ ಹಬ್ಬ ಪ್ರಾರಂಭವಾದಗಿನಿಂದಲೂ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ಆದ್ರೆ ಈ ಬಾರಿ ಕೊರೊನಾ ಇಂತಹ ಪರಿಸ್ಥಿತಿಗೆ ತಂದೊಡ್ಡಿದೆ. ಮುಂದಿನ ಗೌರಿ ಗಣೇಶ ಹಬ್ಬದ ಅಷ್ಟರಲ್ಲಿ ಕೊರೋನಾ ಸಂಪೂರ್ಣವಾಗಿ ಇಡೀ ಪ್ರಪಂಚದಿಂದ ತೊಲಗಲಿ ಎಂಬುದು ಎಲ್ಲರ ಆಶಯ.

-ರಾಮಾಂಜಿ.ಎಂ ಬೂದಿಗೆರೆ

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments