ದೇವನಹಳ್ಳಿ : ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದೇಶದಲ್ಲಿ ಅತ್ಯುನ್ನತ ಸ್ಥಾನ ಪಡೆದುಕೊಂಡಿರುವ ವಿಮಾನ ನಿಲ್ದಾಣ. ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಮಾಡಿಕೊಳ್ಳುತ್ತಿರುವ ವಿಮಾನ ನಿಲ್ದಾಣ. ದಿನನಿತ್ಯ ಸಾವಿರಾರು ಪ್ರಯಾಣಿಕರು ಈ ವಿಮಾನ ನಿಲ್ದಾಣದಿಂದ ಸಂಚಾರ ಮಾಡುತ್ತಾರೆ. ಈ ವಿಮಾನ ನಿಲ್ದಾಣದಿಂದ ಸಾವಿರಾರು ಟ್ಯಾಕ್ಸಿ ಚಾಲಕರು ಜೀವನ ಸಾಗಿಸುತ್ತಿದ್ದಾರೆ. ದಿನ ಒಂದಕ್ಕೆ ಸಾವಿರಾರು ಟ್ಯಾಕ್ಸಿಗಳು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಯ ನಿರ್ವಹಿಸುತ್ತಿವೆ. ಇದೀಗ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ರೈಲು ಪ್ರಾರಂಭವಾಗುವುದರಿಂದ ಟ್ಯಾಕ್ಸಿ ಚಾಲಕರ ಆದಾಯಕ್ಕೆ ಕತ್ತರಿ ಬೀಳುತ್ತದೆ. ಈಗಾಗಲೇ ವಿಮಾನ ನಿಲ್ದಾಣದ ಬಳಿ ರೈಲ್ವೆ ಸ್ಟೇಷನ್ ಕಾಮಗಾರಿ ಬಿರುಸಾಗಿ ಸಾಗುತ್ತಿದೆ. ಇನ್ನೆನು ಒಂದು ತಿಂಗಳಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ. ಕೇಂದ್ರ ರೈಲ್ವೆ ಸಚಿವರು ಕೆಐಎಎಲ್ ರೈಲ್ವೆ ಸ್ಟೇಷನ್ ಬಗ್ಗೆ ಮಾಹಿತಿಯನ್ನು ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ಮೂಲಕ ತಲುಪಬೇಕಾದರೆ ಕನಿಷ್ಠ 500 ರಿಂದ 1000 ರೂ ನೀಡಬೇಕು. ಇದೀಗ ವಿಮಾನ ನಿಲ್ದಾಣದಲ್ಲಿ ರೈಲೈ ನಿಲ್ದಾಣ ಪ್ರಾರಂಭವಾದರೆ ಕೇವಲ 30 ರೂಪಾಯಿಯಲ್ಲಿ ಕೆಐಎಎಲ್ ತಲುಪಬಹುದು. ಜೊತೆಗೆ ಸಿಲಿಕಾನ್ ಸಿಟಿ ಅಂದ್ರೆ ಪ್ರಯಾಣಿರು ಭಯ ಬೀಳುವುದು ದಿನನಿತ್ಯ ನಗರದಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ನಲ್ಲಿ ಟ್ಯಾಕ್ಸಿಗಳ ಮೂಲಕ ಏರ್ಪೋಟ್ ತಲುಪಬೇಕಾದರೆ ಕನಿಷ್ಠ ಅಂದ್ರು ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಅದೇ ರೈಲಿನಲ್ಲಿ ಸಂಚಾರ ಮಾಡಿದರೆ ಅತಿ ಬೇಗನೆ ವಿಮಾನ ನಿಲ್ದಾಣಕ್ಕೆ ತಲುಪಬಹುದು. ಈ ಎಲ್ಲ ಕಾರಣಗಳಿಂದ ಪ್ರಯಾಣಿಕರು ಟ್ಯಾಕ್ಸಿಗಳನ್ನು ಬಳಸಿಕೊಳ್ಳುವುದು ಕ್ಷೀಣಿಸುತ್ತದೆ. ಇದರಿಂದ ಟ್ಯಾಕ್ಸಿ ಚಾಲಕರ ಆದಾಯಕ್ಕೆ ಕತ್ತರಿ ಬೀಳುತ್ತದೆ. ಇನ್ನೂ ಏರ್ಪೋರ್ಟ್ ಗೆ ಶೀಘ್ರದಲ್ಲೇ ಮೆಟ್ರೋ ರೈಲು ಸಹ ಪ್ರಾರಂಭವಾಗುತ್ತದೆ. ಈಗಾಗಲೇ ಮೆಟ್ರೋ ಕಾಮಗಾರಿ ಸಹ ಆರಂಭವಾಗಿದೆ. ಇದರಿಂದ ಸಹ ಟ್ಯಾಕ್ಸಿ ಚಾಲಕರಿಗೆ ಸಂಕಷ್ಟ ಎದುರಾಗಿದೆ. ರೈಲಿಗಿಂತಲೂ ಮೆಟ್ರೋ ರೈಲಿನಲ್ಲಿ ಬೇಗನೆ ವಿಮಾನ ನಿಲ್ದಾಣಕ್ಕೆ ಸೇರಿಕೊಳ್ಳಬಹುದು. ಈ ಎಲ್ಲ ಕಾರಣಗಳಿಂದ ಬಹುತೇಕ ಟ್ಯಾಕ್ಸಿ ಚಾಲಕರಿಗೆ ಉದ್ಯೋಗ ಇಲ್ಲದಂತೆ ಆಗುತ್ತದೆ ಜೊತೆಗೆ ಆದಾಯ ಸಹ ಕಡಿಮೆ ಆಗುತ್ತದೆ.
ರಾಮಾಂಜಿ.ಎಂ ಬೂದಿಗೆರೆ ಪವರ್ ಟಿವಿ ದೇವನಹಳ್ಳಿ.