Homeರಾಜ್ಯಇತರೆವಾರ್ತಾ ಇಲಾಖೆ ನಿರ್ದೇಶಕರಿಂದ ಗ್ರಾಮ ವಾಸ್ತವ್ಯ!

ವಾರ್ತಾ ಇಲಾಖೆ ನಿರ್ದೇಶಕರಿಂದ ಗ್ರಾಮ ವಾಸ್ತವ್ಯ!

ಮುಖ್ಯಮಂತ್ರಿಗಳು, ಸಚಿಚರು, ಜಿಲ್ಲಾಧಿಕಾರಿಗಳು ಕೂಡ ಗ್ರಾಮ ವಾಸ್ತವ್ಯ ಮಾಡೊದನ್ನ ನೋಡಿರ್ತಿವಿ, ಆದ್ರೆ ಇಲ್ಲೊಂದು ಗ್ರಾಮದಲ್ಲಿ ವಾರ್ತಾ ಇಲಾಖೆ ನಿರ್ದೇಶಕರು ರಾತ್ರಿ ವಾಸ್ತವ್ಯ ಹೂಡಿ ಗ್ರಾಮದ ಸಮಸ್ಯೆಗಳನ್ನ ಕೇಳುವ ಮೂಲಕ ಇರುಳಿಗ ಸಮುದಾಯದ ಕುಟುಂಬಗಳಿಗೆ ಸ್ಫೂರ್ತಿ ತುಂಬಿದ್ರು.
ಹೌದು ರಾಮನಗರ ಜಿಲ್ಲೆ ಅದೆಷ್ಟೋ ಘಟಾನುಘಟಿ ನಾಯಕರುಗಳನ್ನು ರಾಜ್ಯಕ್ಕೆ ನೀಡಿದೆ, ಮೂವರು ಮುಖ್ಯಮಂತ್ರಿಗಳನ್ನು ಈ ಜಿಲ್ಲೆ ನೀಡಿದೆ, ಆದ್ರೆ ಇನ್ನೂ ಕೂಡ ಅದೆಷ್ಟೋ ಗ್ರಾಮಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಅಂತಹ ಗ್ರಾಮಗಳಲ್ಲಿ ಒಂದಾದ ಕನಕಪುರ ತಾಲ್ಲೂಕಿನ ಕೂತಗಾನಹಳ್ಳಿ ಇರುಳಿಗರ ಕಾಲೋನಿಯಲ್ಲಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎಸ್. ಶಂಕರಪ್ಪ ಅವರು ಗ್ರಾಮದಲ್ಲಿ ವಾಸ್ತವ್ಯ ಹೂಡಿ ಸಮಸ್ಯೆಗಳನ್ನು ಆಲಿಸುವ ಜೊತೆಗೆ ಗ್ರಾಮದ ಜನರಿಗೆ ಆರೋಗ್ಯ ತಪಾಸಣೆ, ಹಾಗೂ ಗ್ರಾಮಗಳಲ್ಲಿ ಸ್ವಚ್ಚತೆ ಕಾರ್ಯ ಹಮ್ಮಿಕೊಂಡಿದ್ದರು. ಸರ್ಕಾರದ ಸೌಲಭ್ಯಗಳ ಬಗ್ಗೆ ಗಿರಿಜನರಿಗೆ ಅರಿವು ಮೂಡಿಸುವ ಮೂಲಕ ಗ್ರಾಮದ ಜನರ ಮೆಚ್ಚುಗೆಗೆ ಪಾತ್ರರಾದರು.


ಇನ್ನೂ ಈ ಕಾಲೋನಿಯಲ್ಲಿ ಸುಮಾರು 120 ಕ್ಕೂ ಹೆಚ್ಚು ಗಿರಿಜನರು ವಾಸಿಸುತ್ತಿದ್ದು ಕಾಡಂಚಿನ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಪ್ರಮುಖವಾಗಿ ಕಾಲೋನಿಗೆ ಬಸ್ ಸಂಪರ್ಕವಿಲ್ಲ, ಜನರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಅಕೌಂಟ್ ಸೇರಿದಂತೆ ಅನೇಕ ಸಮಸ್ಯೆಗಳು ಇದ್ದವು. ಇದೆಲ್ಲಾ ಸಮಸ್ಯೆಗಳ ಮನಗಂಡ ವಾರ್ತಾಧಿಕಾರಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಜೊತೆ ಮಾತನಾಡಿ, ಆದಷ್ಟು ಬೇಗ ಸಮಸ್ಯೆಗಳಿಗೆ ಪರಿಹಾರ ಮಾಡುವ ಭರವಸೆ ನೀಡುವ ಮೂಲಕ ಸರ್ಕಾರ ನಿಮ್ಮ ಜೊತೆ ಇದೆ ಎಂಬ ಅರಿವು ಮೂಡಿಸಿದ್ರು. ಜೊತೆಗೆ ಪ್ರತಿ ನಾಲ್ಕನೆ ಶನಿವಾರ ಈ ರೀತಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಹೇಳಿದ್ರು.
ಅದು ಏನೇ ಇರಲಿ ವಾರ್ತಾ ಇಲಾಖೆ ಕೇವಲ ಪ್ರಚಾರಕ್ಕೆ ಸೀಮಿತವಲ್ಲ. ಗ್ರಾಮದಲ್ಲಿ ವಾಸ್ತವ್ಯ ಹೂಡಿ, ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments