Saturday, October 1, 2022
Powertv Logo
Homeರಾಜ್ಯಸಿಲಿಕಾನ್​​ ಸಿಟಿಯಲ್ಲಿ ಆತಂಕ ಹುಟ್ಟಿಸಿದ ಡೆಂಗ್ಯೂ: 1,793 ಕೇಸ್‌ ದಾಖಲು

ಸಿಲಿಕಾನ್​​ ಸಿಟಿಯಲ್ಲಿ ಆತಂಕ ಹುಟ್ಟಿಸಿದ ಡೆಂಗ್ಯೂ: 1,793 ಕೇಸ್‌ ದಾಖಲು

ಬೆಂಗಳೂರು : ಸೊಳ್ಳೆ ಕಾಟದಿಂದ ಸಿಲಿಕಾನ್ ಸಿಟಿ ಜನರು ಬಳಲುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ನಗರದಾದ್ಯಂತ 1793 ಡೆಂಗ್ಯು ಪ್ರಕರಣಗಳು ದಾಖಲಾಗಿದೆ.

ನಗರದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು ಡೆಂಗ್ಯು ಮಲೇರಿಯಾ ಹೆಚ್ಚಳದ ಆತಂಕದಲ್ಲಿದ್ದಾರೆ. ಈಗಾಗಲೇ ಡೆಂಗ್ಯು ಮಲೇರಿಯಾ ತಡೆಗೆ ಪಾಲಿಕೆ ಸಿದ್ಧತೆ ನಡೆಸಿದೆ. ಕಳೆದ ವರ್ಷ ಒಟ್ಟು 1800 ಪ್ರಕರಣ ದಾಖಲಾಗಿತ್ತು.ಆದ್ರೆ ಈ ವರ್ಷ ಈಗಲೇ 1793 ಪ್ರಕರಣ ದಾಖಲಾಗಿದೆ.

ನಿಂತ ನೀರಿನಲ್ಲಿ ಹೆಚ್ಚು ಲಾರ್ವಗಳು ಉತ್ಪತ್ತಿಯಾಗುತ್ತಿದೆ, ಇದರಿಂದ ಮುಂದಿನ ದಿನದಲ್ಲಿ ಮತ್ತಷ್ಟು ಕೇಸ್‌ಗಳ ಹೆಚ್ಚಳ ಸಾಧ್ಯತೆ ಹಿನ್ನಲೆ ನೀರು ನಿಲ್ಲದಂತೆ ಬಿಬಿಎಂಪಿ ವಿಶೇಷ ಆಯುಕ್ತರ ಸೂಚನೆ ನೀಡಲಾಗಿದೆ. ಮತ್ತು ಶಾಲಾ ಕಾಲೇಜು ಬಳಿ ಕೂಡಾ ಸೊಳ್ಳೆಗಳು ಹೆಚ್ಚಾಗುತ್ತಿದ್ದು, ಹೀಗಾಗಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಾಲೆ ಅಕ್ಕಪಕ್ಕ, ಮನೆಗಳಲ್ಲಿ ಆರೋಗ್ಯ ಸಿಬ್ಬಂದಿ ಪರಿಶೀಲನೆ ಮಾಡಿ ಲಾರ್ವಿಸೈಡ್ ಹಾಗೂ ಫಾಗ್ ಸಿಂಪಡಣೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕಚಂದ್ರ ಮಾಹಿತಿ ನೀಡಿದರು.

ಸದ್ಯ ಈಸ್ಟ್ ಝೋನ್‌ನಲ್ಲಿ ಅತಿ ಹೆಚ್ಚು ಡೆಂಗ್ಯು ಪ್ರಕರಣಗಳು ದಾಖಲಾಗಿದೆ.

ಬಿಬಿಎಂಪಿಯ 8 ವಲಯದಲ್ಲಿ ಎಷ್ಟು‌ ಡೆಂಗ್ಯು ಪ್ರಕರಣಗಳಿವೆ ಇಲ್ಲಿದೆ ಅಂಕಿ ಅಂಶ:

ಬೊಮ್ಮನಹಳ್ಳಿ ಝೋನ್ – 104 ಪ್ರಕರಣ
ದಾಸರಹಳ್ಳಿ ಝೋನ್ – 38 ಪ್ರಕರಣ
ಈಸ್ಟ್ ಝೋನ್ – 653 ಪ್ರಕರಣ
ಮಹದೇವಪುರ ಝೋನ್ – 342 ಪ್ರಕರಣ
ಆರ್.ಆರ್.ನಗರ ಝೋನ್ – 122 ಪ್ರಕರಣ
ಸೌತ್ ಝೋನ್ – 170 ಪ್ರಕರಣ
ವೆಸ್ಟ್ ಝೋನ್ – 162 ಪ್ರಕರಣ
ಯಲಹಂಕ ಝೋನ್ – 202 ಪ್ರಕರಣ

ಡೆಂಗ್ಯು ನಿಯಂತ್ರಣ ಹೇಗೆ…?

* ಡೋರ್ ಟು ಡೋರ್ ಸರ್ವೆಗೆ ಪಾಲಿಕೆ ಮುಂದು
*ಸೊಳ್ಳೆಗಳಿಗೆ ಫಾಗ್ಗಿಂಗ್ ಸ್ಪ್ರೇ ನಡೆಸಲು ಆರಂಭ
* ಲಾರ್ವಗಳಿಗೆ ಲಾರ್ವೇ ಸ್ಪ್ರೇ
* ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಜನರಿಗೆ ಸೂಚನೆ
* ನೀರು ಹೆಚ್ಚಾಗಿ ಶೇಖರಣೆಯಾಗದಂತೆ ಕ್ರಮಕ್ಕೆ ಸೂಚನೆ
* ದೇಹವನ್ನು ಸಂಪೂರ್ಣವಾಗಿ ಬಟ್ಟೆಯಿಂದ ರಕ್ಷಣೆ ಮಾಡಬೇಕು ಜೊತೆಗೆ ಮನೆಯಲ್ಲಿ ಸೊಳ್ಳೆ ಪರದೆ ಬಳಕೆಗೆ ಸೂಚನೆ
* ಮಕ್ಕಳಿಗೆ ಸೊಳ್ಳೆ ಕಡಿತವಾದರೆ ವೈದ್ಯರ ಸಲಹೆ ಪಡೆಯಲು ಸೂಚನೆ

- Advertisment -

Most Popular

Recent Comments