ನವದೆಹಲಿ: ಚುನಾವಣಾ ಆಯೋಗ ದೆಹಲಿ ವಿಧಾನಸಭಾ ಚುನಾವಣೆ ದಿನಾಂಕವನ್ನು ಪ್ರಕಟಿಸಿದೆ. ಫೆಬ್ರವರಿ 8ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. 80.55 ಲಕ್ಷ ಪುರುಷ ಹಾಗೂ 66.35 ಲಕ್ಷ ಮಹಿಳೆಯರನ್ನು ಸೇರಿದಂತೆ ಒಟ್ಟು 1,46,92,136 ಮತದಾರರಿದ್ದಾರೆ. 13,750 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 11ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ವಿವರಿಸಿದ್ದಾರೆ.
ಚುನಾವಣೆ ವೇಳಾಪಟ್ಟಿ
ನಾಮಪತ್ರ ಸಲ್ಲಿಕೆ ಪ್ರಾರಂಭ – ಜನವರಿ 14
ನಾಪಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ – ಜನವರಿ 21
ನಾಮಪತ್ರ ಪರಿಶೀಲನೆ ದಿನಾಂಕ – ಜನವರಿ 22
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕ- ಜನವರಿ 24
ಮತದಾನ ದಿನಾಂಕ- ಫೆಬ್ರವರಿ- 8
ಫಲಿತಾಂಶ ದಿನಾಂಕ- ಫೆಬ್ರವರಿ- 11