Tuesday, September 27, 2022
Powertv Logo
Homeದೇಶರಾಷ್ಟ್ರ ರಾಜಧಾನಿಯಲ್ಲಿ ಇಂದು ವಿಧಾನಸಭೆ ಚುನಾವಣೆ : ಮತದಾನ ಆರಂಭ

ರಾಷ್ಟ್ರ ರಾಜಧಾನಿಯಲ್ಲಿ ಇಂದು ವಿಧಾನಸಭೆ ಚುನಾವಣೆ : ಮತದಾನ ಆರಂಭ

ನವದೆಹಲಿ: ವಿಧಾನಸಭೆಯ 70 ಕ್ಷೇತ್ರಗಳಲ್ಲಿ ಇಂದು ಮತದಾನ ಆರಂಭವಾಗಿದೆ. ಮತದಾನ ಸಂಬಂಧ ರಾಷ್ಟ್ರ ರಾಜಧಾನಿಯಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ದೆಹಲಿ ಚುನಾವಣಾ ಅಖಾಡದಲ್ಲಿ ಒಟ್ಟು 672 ಅಭ್ಯರ್ಥಿಗಳಿದ್ದು, ಅದರಲ್ಲಿ 593 ಪುರುಷರು ಹಾಗೂ 79 ಮಹಿಳೆಯರಿದ್ದಾರೆ. ಇನ್ನು ಮತದಾರರು ಒಟ್ಟು 1.47 ಕೋಟಿ ಆಗಿದ್ದು, ಅದರಲ್ಲಿ 81,05,236 ಪುರುಷ ಮತದಾರರು ಮತ್ತು 66,80,277 ಮಹಿಳಾ ಮತದಾರರಿದ್ದಾರೆ.  ಬೆಳಿಗ್ಗೆ 8 ಗಂಟೆಗೆ ಆರಂಭವಾಗಿರುವ ಮತದಾನ ಸಂಜೆ 6 ಗಂಟೆಗೆ ಕೊನೆಗೊಳ್ಳಲಿದ್ದು, ಇದಕ್ಕಾಗಿ 13,750 ಮತಗಟ್ಟೆಗಳ ಸ್ಥಾಪನೆಯನ್ನು ಮಾಡಲಾಗಿದೆ.

2015 ರಲ್ಲಿ ಬಿಜೆಪಿ ಶೇಕಡಾ 32.2 ರಷ್ಟು ಮತದಾನ ಪಡೆದಿತ್ತು. ಕಾಂಗ್ರೆಸ್ 9.7ರಷ್ಟು ಮತ ಹಾಗೂ ಆಪ್ ಪಕ್ಷ 54.3 ಮತಗಳನ್ನು ಪಡೆದು ಜಯಭೇರಿ ಬಾರಿಸಿತ್ತು. ಹಾಗಾಗಿ ಈ ಬಾರಿಯೂ ಆಮ್ ಆದ್ಮಿ ಪಕ್ಷ ಗೆದ್ದು, ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಮತ್ತೊಮ್ಮೆ 5 ವರ್ಷ ಅಧಿಕಾರದ ಚುಕ್ಕಾಣಿ ಹಿಡಿಯುವ ನಿರೀಕ್ಷೆಯಲ್ಲಿದ್ದಾರೆ.

15 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments