Monday, August 15, 2022
Powertv Logo
Homeದೇಶ3000 ಕೋಟಿ ರುಪಾಯಿಯ ಶಸ್ತ್ರಾಸ್ತ್ರ ಸಂಗ್ರಹಕ್ಕೆ ಒಪ್ಪಿಗೆ

3000 ಕೋಟಿ ರುಪಾಯಿಯ ಶಸ್ತ್ರಾಸ್ತ್ರ ಸಂಗ್ರಹಕ್ಕೆ ಒಪ್ಪಿಗೆ

ದೆಹಲಿ: ಬ್ರಹ್ಮೋಸ್​ ಸೂಪರ್​ಸಾನಿಕ್ ಕ್ರೂಸ್​ ಮಿಸೈಲ್​ ಸೇರಿದಂತೆ 3000 ಕೋಟಿ ರುಪಾಯಿಯ ಶಸ್ತ್ರಾಸ್ತ್ರಗಳ ಸಂಗ್ರಹಕ್ಕೆ ರಕ್ಷಣಾ ಸಚಿವಾಲಯ ಶನಿವಾರ ಒಪ್ಪಿಗೆ ನೀಡಿದೆ. ಶಸ್ತ್ರಾಸ್ತ್ರ ಸಂಗ್ರಹದ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವ ಡಿಫೆನ್ಸ್​ ಅಕ್ವಿಸಿಶನ್​ ಕೌನ್ಸಿಲ್​ನ ಮುಖ್ಯಸ್ಥೆಯಾಗಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ 3000 ಕೋಟಿಯ ಶಸ್ತ್ರಾಸ್ತ್ರ ಸಂಗ್ರಹಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹಿರಿಯ ಸೇನಾಧಿಕಾರಿ ತಿಳಿಸಿದ್ದಾರೆ. ಬ್ರಹ್ಮೋಸ್ ಮಿಸೈಲ್​​ಗಳನ್ನು ಒಳಗೊಂಡ 1 ಬಿಲಿಯನ್​ ಡಾಲರ್​ ಬೆಲೆಯ ಎರಡು ರಹಸ್ಯ ಯುದ್ಧನೌಕೆಗಳನ್ನು ಸೇನೆ ಸಂಗ್ರಹಿಸಲಿದೆ. ದೇಶೀ ನಿರ್ಮಿತ ಬ್ರಹ್ಮೋಸ್​ ಮಿಸೈಲ್​ಗಳು ಯುದ್ಧ ನೌಕೆಯಲ್ಲಿ ಪ್ರಾಥಮಿಕ ಶಸ್ತ್ರಾಸ್ತ್ರವಾಗಿರಲಿದೆ.

6 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments