ನವದೆಹಲಿ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಷಿನ್ ಗನ್ ಎತ್ತಿ ಗುರಿಯಿಟ್ಟಿದ್ದಾರೆ..! ಸಚಿವರು ಬಂದೂಕು ಹಿಡಿದಿರೋದು ಎಲ್ಲರ ಗಮನ ಸೆಳೆದಿದೆ. ಫೋಟೋ ನೋಡಿ ನೀವು ಕೂಡ, ಹೌದಲ್ವಾ ನಮ್ ಮಿನಿಸ್ಟ್ರು ಗನ್ ಹಿಡಿದಿದ್ದಾರಲ್ಲಾ.. ವಾರೇ ವ್ಹಾವ್.. ಅಂತ ನೀವೂ ಮೂಗಿನ ಮೇಲೆ ಬೆರಳಿಟ್ಟು ಕೊಂಡ್ರಾ..!?
ಹೌದು ಇನ್ನೂ ಭಾರತ – ಚೀನಾ ನಡುವೆ ಲಡಾಖ್ನಲ್ಲಿ ಗಡಿ ಬಿಕ್ಕಟ್ಟು ಶಮನವಾಗಿಲ್ಲ.. ಆದ್ರಿಂದ ಅಲ್ಲಿನ ಸದ್ಯದ ಪರಿಸ್ಥಿತಿ ಮತ್ತು ಭದ್ರತೆ ಬಗ್ಗೆ ತಿಳಿದುಕೊಳ್ಳೋಕೆ ಅಂತ ರಾಜನಾಥ್ ಸಿಂಗ್ ಇಂದು ಲೆಹ್ಗೆ ಭೇಟಿ ನೀಡಿದ್ದಾರೆ. ಈ ವೇಳೆ ಗಡಿ ಸುರಕ್ಷತೆಗಾಗಿ ಸೈನಿಕರು ಬಳಸೋ ಅತ್ಯಾಧುನಿಕ ಪಿಕಾ ಮಷಿನ್ಗನ್ ಹಿಡಿದು ಗುರಿಯಿಟ್ಟರು. ಪಿಕಾ ಮಷಿನ್ ಗನ್ ಬಗ್ಗೆ ಸೇನಾಧಿಕಾರಿಗಳಿಂದ ಮಾಹಿತಿ ಪಡೆದ್ರು. ಆಮೇಲೆ ಅದನ್ನು ಮೇಲಿತ್ತಿ ಗುರಿ ಇಟ್ಟು ಗಮನಸೆಳೆದ್ರು..!
ಭಾರತ – ಚೀನಾ ಗಡಿಯಲ್ಲಿ ಶಮನವಾಗದ ಬಿಕ್ಕಟ್ಟು ; ಲೆಹ್ಗೆ ರಾಜನಾಥ್ ಸಿಂಗ್ ಭೇಟಿ