ಏರ್​ ಶೋನಲ್ಲಿ ಬೆಂಕಿ ಅವಘಡ : ಸ್ಥಳಕ್ಕೆ ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್ ಭೇಟಿ

0
205

ಬೆಂಗಳೂರು : ಯಲಹಂಕದಲ್ಲಿ ನಡೆಯುತ್ತಿರುವ ಏರ್ ಶೋನಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಕಾರುಗಳು ಸುಟ್ಟು ಭಸ್ಮವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗೇಟ್- 5 ರಲ್ಲಿ ನಡೆದ ಅಗ್ನಿ ದುರಂತದಲ್ಲಿ ಸುಮಾರು 277 ಕಾರುಗಳು ಸುಟ್ಟು ಭಸ್ಮವಾಗಿದ್ದವು. ಈ ಹಿನ್ನೆಲೆ ಪೊಲೀಸರ ತನಿಖೆ ಕೂಡ ಚುರುಕುಗೊಂಡಿದ್ದು, ನಿರ್ಮಲಾ ಸೀತಾರಾಮನ್ ಘಟನೆ ಬಗ್ಗೆ​​ ಮಾಹಿತಿ ಪಡೆದಿದ್ದಾರೆ.
ಇಂದು ಏರ್ ಶೋನ ಕೊನೆಯ ದಿನವಾಗಿದ್ದು, ನಿನ್ನೆ ದುರ್ಘಟನೆ ನಡೆದಿದ್ದರೂ ಲೋಹದ ಹಕ್ಕಿಗಳ ಹಾರಾಟ ಕಣ್ತುಂಬಿಕೊಳ್ಳಲು ಬರುವವರ ಸಂಖ್ಯೆ ಕಡಿಮೆಯಾಗಿಲ್ಲ.

LEAVE A REPLY

Please enter your comment!
Please enter your name here