Thursday, October 6, 2022
Powertv Logo
Homeಸಿನಿಮಾದೀಪಿಕಾ ಪಡುಕೋಣೆ ಪ್ರಿಯಾ ವಾರಿಯರ್​ಗೆ ಟ್ಯಾಗ್ ಮಾಡಿದ ವಿಡಿಯೋದಲ್ಲಿ ಏನಿದೆ?

ದೀಪಿಕಾ ಪಡುಕೋಣೆ ಪ್ರಿಯಾ ವಾರಿಯರ್​ಗೆ ಟ್ಯಾಗ್ ಮಾಡಿದ ವಿಡಿಯೋದಲ್ಲಿ ಏನಿದೆ?

ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಮಲೆಯಾಳಂ ಬೆಡಗಿ, ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್​​ ಅವರನ್ನು ಟ್ಯಾಗ್ ಮಾಡಿ ಇನ್ಸ್ಟಾಗ್ರಾಮಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆ ವಿಡಿಯೋದ್ದೇ ಕಾರುಬಾರು.
ಅರೆ, ದೀಪಿಕಾ ಪ್ರಿಯಾಗೆ ಅದೆಂಥಾ ವಿಡಿಯೋವನ್ನು ಟ್ಯಾಗ್ ಮಾಡಿರಬಹದು. ಆ ವಿಡಿಯೋಕ್ಕೂ ಪ್ರಿಯಾಗೂ ಯಾವ ರೀತಿಯ ನಂಟಿರಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಸಹಜ.. ಆ ಕುತೂಹದಿಂದಲೇ ನೆಟ್ಟಿಗರು ವಿಡಿಯೋ ಕ್ಲಿಕ್ ಮಾಡಿ ನೋಡ್ತಿದ್ದಾರೆ. ಅಲ್ಲದೆ ದೀಪಿಕಾ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿರೋ ಆ ವಿಡಿಯೋ ಈಗ ಬರೀ ಇನ್ಸ್ಟಾಗ್ರಾಮ್​ ಮಾತ್ರವಲ್ಲದೆ ಫೇಸ್​ಬುಕ್, ವಾಟ್ಸಮ್​ ಎಲ್ಲಾ ಕಡೆಗಳಲ್ಲೂ ಹವಾ ಸೃಷ್ಠಿಸಿದೆ.

ನಿಮಗೆ ಗೊತ್ತೇ ಇದೆ, ದೀಪಿಕಾ ಪಡುಕೋಣೆ  ಛಾಪಾಕ್​ ಅನ್ನೋ ಸಿನಿಮಾದಲ್ಲಿ ಆ್ಯಕ್ಟ್ ಮಾಡ್ತಿದ್ದಾರೆ. ಪದ್ಮಾವತಿ ಬಳಿಕ ದೀಪಿಕಾ ನಟಿಸುತ್ತಿರುವ ಛಪಾಕ್ ಟ್ರೈಲರ್, ಪೋಸ್ಟರ್​ಗಳಿಂದ ಸಖತ್ ಸದ್ದು ಮಾಡ್ತಿದೆ. ಮದ್ವೆ ಬಳಿಕ ದೀಪಿಕಾ ನಟಿಸಿರೋ ಮೊದಲ ಸಿನಿಮಾ ಈ ಚಪಾಕ್. ಸೆಟ್ಟೇರಿದಲ್ಲಿಂದಲೂ ಒಂದಲ್ಲ ಒಂದು ರೀತಿಯಲ್ ಸದ್ದು ಮಾಡ್ತಿದೆ. 

ಆ್ಯಸಿಡ್ ದಾಳಿಗೆ ಒಳಗಾದ ಯುವತಿಯ ಕಥೆ ಛಪಾಕ್ ಸಿನಿಮಾ. ಸದ್ಯ ದೀಪಿಕಾ ಪಡುಕೋಣೆ ಕೂಡ ಚಿತ್ರಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ಸ್ಟಾಗ್ರಾಮ್​ನಲ್ಲಿ ಪ್ರೊಡೆಕ್ಷನ್ ವಿಡಿಯೋಗಳನ್ನು ಪೋಸ್ಟ್ ಮಾಡಿ, ಸಿನಿಮಾ ಮೇಲಿನ ಕ್ಯೂರಿಯಾಸಿಟಿಯನ್ನು ಹೆಚ್ಚಿಸುತ್ತಿದ್ದಾರೆ.

ಅಂತೆಯೇ ಮತ್ತೊಂದು ವಿಡಿಯೋವನ್ನು ಅಪ್​ ಮಾಡಿ, ಮಲೆಯಾಳಂ ಚೆಲುವೆ ಪ್ರಿಯಾ ಪ್ರಕಾಶ್​ ವಾರಿಯರ್​ಗೆ ಟ್ಯಾಗ್ ಮಾಡಿದ್ದಾರೆ. ಸಿನಿಮಾ ನಿರ್ದೇಶಕಿ ಮೇಘನಾ ಗುಲ್ಜಾರ್ ಜೊತೆ ಮಾತನಾಡುವ ವಿಡಿಯೋವನ್ನು ದೀಪಿಕಾ ಅಪ್​ಲೋಡ್ ಮಾಡಿ, ಪ್ರಿಯಾಗೆ ಟ್ಯಾಗ್ ಮಾಡಿದ್ದಾರೆ.ಆ ವಿಡಿಯೋ ಕೊನೆಯಲ್ಲಿ ‘ಟೇಕ್ ದಟ್ ಪ್ರಿಯಾವಾರಿಯರ್’ ಅಂತ ಬರೆಯಲಾಗಿದೆ.

ಗುಲ್ಜಾರ್​​​​​​​​ ಜೊತೆ ಮಾತನಾಡುತ್ತಾ ಕ್ಯಾಮರಾ ಕಡೆಗೆ ತಿರುಗಿದ ದೀಪಿಕಾ ಕಣ್ಣು ಹೊಡೆದಿದ್ದಾರೆ. ಪ್ರಿಯಾ ಜನಪ್ರಿಯವಾಗಿದ್ದು ಕೂಡ ಕಣ್ಸನ್ನೆಯಿಂದ. ಹೀಗಾಗಿ ದೀಪಿಕಾ ಪ್ರೀತಿಯಿಂದ ಪ್ರಿಯಾಗೆ ಕಣ್ಸನ್ನೆ ವಿಡಿಯೋವನ್ನು ಟ್ಯಾಗ್ ಮಾಡಿದ್ದಾರೆ. ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿರೋ ದೀಪಿಕಾ ಕಣ್ಸನ್ನೆ ಅರೆಕ್ಷಣ ಎಲ್ಲರನ್ನೂ ಭಾವುಕರನ್ನಾಗಿಸುತ್ತದೆ.

8 COMMENTS

  1. reduslim foro femenino opiniones [url=https://comprarcialis5mg.org/reduslim/]reduslim[/url] reduslim sara carbonero es verdad
    reduslim mercadona foto [url=https://comprarcialis5mg.org/reduslim-kaufen/]reduslim[/url] web oficial de reduslim
    cialis 5mg prezzo [url=https://comprarcialis5mg.org/it/cialis-5mg-prezzo/]cialis[/url] cialis
    [url=http://users.atw.hu/t35zt/index.php?site=news_comments&newsID=3]reduslim en mercadona precio[/url] 5c497f7

LEAVE A REPLY

Please enter your comment!
Please enter your name here

- Advertisment -

Most Popular

Recent Comments