ದೀಪಿಕಾ ಪಡುಕೋಣೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು ಸ್ಯಾಂಡಲ್ವುಡ್ನ ಐಶ್ವರ್ಯ ಸಿನಿಮಾ ಮೂಲಕ. ಇಂದ್ರಜಿತ್ ಲಂಕೇಶ್ ಆ್ಯಕ್ಷನ್ಕಟ್ ಹೇಳಿದ್ದ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ದೀಪಿಕಾ ಸ್ಕ್ರೀನ್ ಶೇರ್ ಮಾಡಿಕೊಂಡಿದ್ರು. ಆ ಸಿನಿಮಾ ಬಳಿಕ ದೀಪಿಕಾ ಬಾಲಿವುಡ್ ಕಡೆಗೆ ಮುಖ ಮಾಡಿದ್ರು. ಅವರೀಗ ಬಾಲಿವುಡ್ ಸ್ಟಾರ್ ನಟಿ. ಹಿಂದಿ ಸಿನಿರಂಗಕ್ಕೆ ಹೋದ್ಮೇಲೆ ದೀಪಿಕಾ ಕನ್ನಡ ಇರ್ಲಿ ದಕ್ಷಿಣ ಭಾರತದ ಯಾವ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿರ್ಲಿಲ್ಲ. ಇದೀಗ ದಕ್ಷಿಣ ಭಾರತಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.
ಹೌದು, ಟಾಲಿವುಡ್ ಸಿನಿಮಾವೊಂದರಲ್ಲಿ ದೀಪಿಕಾ ನಟಿಸ್ತಿದ್ದಾರೆ. ಪ್ರಭಾಸ್ ಮತ್ತು ಮಹಾನಟಿ ಡೈರೆಕ್ಟರ್ ನಾಗ್ ಅಶ್ವಿನ್ ಕಾಂಬಿನೇಷನ್ನಲ್ಲಿಈಗಾಗಲೇ ಸಿನಿಮಾವೊಂದು ಘೋಷಣೆಯಾಗಿದೆ. ಆ ಸಿನಿಮಾಕ್ಕೆ ದೀಪಿಕಾ ಪಡುಕೋಣೆ ಹೀರೋಯಿನ್ ಅನ್ನೋ ಮಾತು ಕೇಳಿಬಂದಿತ್ತು. ಆದ್ರೆ ಇಷ್ಟು ದಿನ ಅದು ಪಕ್ಕಾ ಆಗಿರ್ಲಿಲ್ಲ. ಇದೀಗ ದೀಪಿಕಾ ಪ್ರಭಾಸ್ ಜೊತೆ ನಟಿಸೋದು ಕನ್ಫರ್ಮ್ ಆಗಿದೆ. ಈ ಬಗ್ಗೆ ವೈಜಯಂತಿ ಮೂವೀಸ್ ತನ್ನ ಅಧಿಕೃತ ಟ್ವಿಟರ್ ಅಕೌಂಟ್ನಲ್ಲಿ ಈ ವಿಷ್ಯವನ್ನು ಹಂಚಿಕೊಂಡಿದೆ. ವೈಜಯಂತಿ ಮೂವೀಸ್ ಕಳೆದ 50 ವರ್ಷಗಳಿಂದ ಬಹುಭಾಷೆಗಳಲ್ಲಿ ಸಿನಿಮಾಗಳನ್ನು ಮಾಡ್ಕೊಂಡ್ ಬರ್ತಿದೆ. ಶ್ರೀದೇವಿ, ಸೌಂದರ್ಯಾ, ವಿಜಯಶಾಂತಿ, , ಜಯಪ್ರದಾ, ಸುಹಾಸಿನಿಶಿಲ್ಪಾ ಶೆಟ್ಟಿ, ನಗ್ಮಾ, ನಯನತಾರಾ, ತ್ರಿಷಾ, ಪೂಜಾ ಹೆಗ್ಡೆ, ಕೀರ್ತಿ ಸುರೇಶ್, ಸಮಂತಾ ಸೇರಿದಂತೆ ಅನೇಕ ನಟಿಯರು ಈ ಬ್ಯಾನರ್ನ ಸಿನಿಮಾಗಳಲ್ಲಿ ನಟಿಸಿದ್ದು, ಇದೀಗ ಆ ಪಟ್ಟಿಗೆ ದೀಪಿಕಾ ಪಡುಕೋಣೆ ಸೇರ್ತಿದ್ದಾರೆ.
ದೀಪಿಕಾ ಆಯ್ಕೆ ಬಗ್ಗೆ ಟ್ವೀಟ್ ಮಾಡಿರೋ ಡೈರೆಕ್ಟರ್ ನಾಗ್ ಅಶ್ವಿನ್, ‘ರಾಜನಿಗೆ ಸರಿಯಾದ ರಾಣಿ ಬೇಕಲ್ವಾ’? ಹಾಗಾಗಿ ಬಹಳ ಯೋಚ್ನೆ ಮಾಡಿ ಈ ನಿರ್ಧಾರ ತೆಗೆದಿಕೊಂಡಿದ್ದೀವಿ’ ಅಂತ ಹೇಳಿದ್ದಾರೆ. ಸದ್ಯ ಪ್ರಭಾಸ್ ಅಭಿನಯದ ‘ರಾಧೆ ಶ್ಯಾಮ್’ ಸಿನಿಮಾ ಚಿತ್ರೀಕರಣ ಸ್ವಲ್ಪ ಬಾಕಿ ಇದೆ. ಇತ್ತೀಚೆಗಷ್ಟೇ ಈ ಸಿನಿಮಾದ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು. ದೀಪಿಕಾ ಪತಿ ರಣವೀರ್ ಸಿಂಗ್ ಜೊತೆ ನಟಿಸಿ, ನಿರ್ಮಿಸಿರೋ ’83’ ಚಿತ್ರದ ರಿಲೀಸ್ಗೆ ವ್ಹೇಟ್ ಮಾಡ್ತಿದ್ದಾರೆ. ಇನ್ನು ದೀಪಿಕಾ ಪ್ರಭಾಸ್ ಜೊತೆ ನಟಿಸಲಿರೋ ಟಾಲಿವುಡ್ ಸಿನಿಮಾ ಸೆಟ್ಟೇರೋದು 2021ಕ್ಕೆ ಅಂತ ತಿಳಿದುಬಂದಿದೆ.
As promised, here it is – our next big announcement! WELCOMING THE SUPERSTAR ♥️https://t.co/QqWERCVywC#Prabhas @deepikapadukone @nagashwin7 @vyjayanthifilms #Prabhas21 #DeepikaPrabhas
— Vyjayanthi Movies (@VyjayanthiFilms) July 19, 2020