ಬೆಂಗಳೂರು: ಪ್ರತಿವರ್ಷ ದಾಮ್ ದುಂ ಅಂತಾ ನಡೆಯುತ್ತಿದ್ದ ಚಿತ್ರಸಂತೆ ಈ ಬಾರಿ ಅತ್ಯಂತ ಸರಳವಾಗಿ ನಡೆಯಿತು. ಕಲಾವಿದರ ಹಬ್ಬಕ್ಕೆ ಲಕ್ಷಾಂತರ ಜನರು ಆನ್ಲೈನ್ ಮೂಲಕ ಸಾಥ್ ನೀಡಿದರು. ಇವತ್ತಿನ ಚಿತ್ರ ಸಂತೆಯನ್ನು ಕೊರೋನಾ ವಾರಿಯರ್ಸ್ಗೆ ಸಮರ್ಪಿಸಲಾಯಿತು.
ಕೊರೋನಾ ಸಂದರ್ಭದಲ್ಲಿ ರಿಯಲ್ ಹಿರೋ ಆಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೊರೋನಾ ವಾರಿಯರ್ಸ್. ಇವರ ಈ ಕಾರ್ಯಕ್ಕೆ 18 ನೇ ಚಿತ್ರಸಂತೆಯನ್ನು ಸಮರ್ಪಿಸಿಲಾಗಿದೆ. ಇಂದಿನ ಕರ್ನಾಟಕ ಚಿತ್ರಕಲಾ ಪರಿಷತ್ ತುಂಬೆಲ್ಲ ಕೊರೋನಾ ವಾರಿಯರ್ಸ್ ಚಿತ್ರ, ಘೋಷ ವಾಕ್ಯಗಳು ಎದ್ದು ಕಾಣ್ಣುತ್ತಿದ್ದವು. ಚಿತ್ರಸಂತೆಯನ್ನು ಆನ್ಲೈನ್ ಮೂಲಕ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರಾದ ಸುಧಾಮೂರ್ತಿ ಉದ್ಘಾಟನೆ ಮಾಡಿದರು.
ಪ್ರತಿ ವರ್ಷದಂತೆ ಈ ವರ್ಷವು ಕೂಡ ಚಿತ್ರಕಲಾ ಸನ್ಮಾನ ಪ್ರಶಸ್ತಿಯನ್ನು ನೀಡಲಾಯಿತು. ಶ್ರೀ ಕ್ರೇಜ್ರಿವಾಲ್ ಪ್ರಶಸ್ತಿಯನ್ನು ಡಾ. ಚುಡಾಮಣಿ ನಂದಾಗೋಪಾಲ್, ಮತ್ತು ದೇವರಾಜ್ ಅರಸು ಪ್ರಶಸ್ತಿ ಯನ್ನು ಶ್ರೀ ಪಿಎಸ್ ಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್, ಮಾಜಿ ಸಿಎಂ ಎಸ್. ಎಂ. ಕೃಷ್ಣ , ಸಿ.ಎಲ್ ಮಂಜುನಾಥ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಚಿತ್ರಸಂತೆಯಲ್ಲಿ ಸುಮಾರು 1000 ಕ್ಕೂ ಹೆಚ್ಚು ಕಲಾವಿದರು ಆನ್ಲೈನ್ ಮೂಲಕ ಭಾಗಿಯಾಗಿದ್ದರು. ಈ ಬಾರಿ ಸುಮಾರು 22 ಕ್ಕೂ ಹೆಚ್ಚು ದೇಶಗಳ ಕಲಾವಿದ್ರು ಭಾಗಿಯಾಗಿದ್ದು ವಿಶೇಷವಾಗಿತ್ತು. ಅಷ್ಟೇ ಅಲ್ಲ ಚಿತ್ರಕಲಾ ಪರಿಷತ್ನ 10 ಗ್ಯಾಲರಿಗಳಲ್ಲಿ ಸುಮಾರು 300 ಕ್ಕೂ ಹೆಚ್ಚು ಆಯ್ದ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು .