ಭಾರತ ರತ್ನ ಪ್ರಶಸ್ತಿ ತಿರಸ್ಕರಿಸಲು ಭೂಪೇನ್​ ಕುಟುಂಬ ನಿರ್ಧಾರ

0
448

ಗುವಾಹಟಿ: ಖ್ಯಾತ ಅಸ್ಸಾಮಿ ಗಾಯಕ ಭೂಪೇನ್ ಹಝಾರಿಕಾ ಅವರಿಗೆ ಈ ವರ್ಷ ಮೋದಿ ಸರ್ಕಾರ ಘೋಷಿಸಿರುವ ‘ಭಾರತ ರತ್ನ’ ಪ್ರಶಸ್ತಿಯನ್ನು ಅವರ ಕುಟುಂಬ ತಿರಸ್ಕರಿಸಿದೆ. ಪೌರತ್ವ ಮಸೂದೆಯ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಪ್ರಶಸ್ತಿ ತಿರಸ್ಕರಿಸಲು ಅವರ ಕುಟುಂಬ ನಿರ್ಧರಿಸಿದೆ.

ಈ ವರ್ಷದ ಗಣತಂತ್ರ ದಿನದಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಸಾಮಾಜಿಕ ಕಾರ್ಯಕರ್ತ ದಿ.ನಾನಾಜಿ ದೇಶಮುಖ ಅವರೊಂದಿಗೆ ಹಝಾರಿಕಾ ಅವರಿಗೆ ಮರಣೋತ್ತರವಾಗಿ ಈ ಅತ್ಯುನ್ನತ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಆದರೆ ಪ್ರಶಸ್ತಿಯನ್ನು ತಿರಸ್ಕರಿಸುವ ವಿಷಯದಲ್ಲಿ ಹಝಾರಿಕಾ ಕುಟುಂಬ ಸದಸ್ಯರ ನಡುವೆ ಒಮ್ಮತದ ಕೊರತೆಯಿದೆ. ಅಮೆರಿಕದಲ್ಲಿ ವಾಸವಾಗಿರುವ ಹಝಾರಿಕಾರ ಪುತ್ರ ತೇಜ್ ಹಝಾರಿಕಾ ಅವರು ಪೌರತ್ವ ಮಸೂದೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಪ್ರಶಸ್ತಿಯನ್ನು ತಿರಸ್ಕರಿಸುವಂತಹ ಪ್ರಮುಖ ನಿರ್ಧಾರವನ್ನು ಒಬ್ಬನೇ ವ್ಯಕ್ತಿಯು ತೆಗೆದುಕೊಳ್ಳುವಂತಿಲ್ಲ ಎಂದು ಹಝಾರಿಕಾರ ಸೋದರ ಸಮರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here