ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ಹಾವಳಿ ಹೆಚ್ಚುತ್ತಿದ್ದಂತೆ ರಾಜ್ಯದಾದ್ಯಂತ ಲಾಕ್ಡೌನ್ ಆದೇಶವನ್ನು ಜಾರಿಗೆ ತಂದರು. ಆದರೆ ರಾಜ್ಯದ ಜನತೆ ಇದ್ಯಾವುದನ್ನು ಲೆಕ್ಕಸದೇ ರಾಜ್ಯದ ಜನತೆ ಅನಾವಶ್ಯಕವಾಗಿ ರಸ್ತೆಗಿಳಿಯುತ್ತಿದ್ದರು. ಹಾಗಾಗಿ ಅನಾವಶ್ಯಕವಾಗಿ ರಸ್ತೆಗಿಳಿದವರನ್ನು ತಡೆಯಲು ಅವರ ವಾಹನಗಳನ್ನು ಜಪ್ತಿ ಮಾಡಿದ್ದರು. ಆದರೆ ಇದೀಗ ಸೀಜ್ ಮಾಡಿರುವ ಎಲ್ಲಾ ಗಾಡಿಗಳನ್ನು ವಾಪಸ್ ಮಾಲೀಕರಿಗೆ ನೀಡಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಲಾಕ್ಡೌನ್ನಲ್ಲಿ ಜಪ್ತಿಯಾದ ವಾಹನಗಳು ಮೇ 1 ರಿಂದ ಮಾಲೀಕರಿಗೆ ಹಿಂತಿರುಗಿಸಲು ನಿರ್ಧರಿಸಲಾಗಿದೆ. ಹಾಗಾಗಿ ಸೀಜ್ ಆದ ಗಾಡಿಗಳ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ವಾಹನಗಳನ್ನು ಮಾಲೀಕರಿಗೆ ಹಿಂತಿರುಗಿಸಲಾಗುತ್ತದೆ. ಇದಕ್ಕೆ ರಾಜ್ಯ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳು ಈಗಾಗಲೇ ಅನುಮತಿಯನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.
It’s decided to return the Corona seized vehicles from 1/5/20 onwards. Those seized first will be returned first.The documents will be verified and vehicle returned. This has approval of Hon CM and HM. We are doing the paperwork to ease the process.
— Bhaskar Rao IPS (@deepolice12) April 30, 2020