Thursday, October 6, 2022
Powertv Logo
Homeರಾಜ್ಯಕರ್ನಾಟಕದಲ್ಲಿ ಇಂದು 11 ಜನರಲ್ಲಿ ಕೊರೋನಾ ಪತ್ತೆ : ತುಮಕೂರಿನಲ್ಲಿ ಎರಡನೇ ಬಲಿ ಪಡೆದ ಕೊರೋನಾ...

ಕರ್ನಾಟಕದಲ್ಲಿ ಇಂದು 11 ಜನರಲ್ಲಿ ಕೊರೋನಾ ಪತ್ತೆ : ತುಮಕೂರಿನಲ್ಲಿ ಎರಡನೇ ಬಲಿ ಪಡೆದ ಕೊರೋನಾ – ಸಾವಿನ ಸಂಖ್ಯೆ 21 ಕ್ಕೇರಿಕೆ

ಬೆಂಗಳೂರು: ಕರ್ನಾಟಕದಲ್ಲಿ ಇಂದು ಒಟ್ಟು 11ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ರಾಜ್ಯದಲ್ಲಿ  ಸೋಂಕಿತರ ಸಂಖ್ಯೆ  534 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸೋಂಕಿನಿಮದ ಸಾವನ್ನಪ್ಪಿದವರ ಸಂಖ್ಯೆ 21 ಏರಿದೆ.

ಬೆಳಗ್ಗೆ ಬಂದಿರುವ ಹೆಲ್ತ್ ಬುಲೆಟಿನ್ ಪ್ರಕಾರ  ರಾಜ್ಯದಲ್ಲಿ 9 ಕೇಸ್​ಗಳು ಪತ್ತೆಯಾಗಿದ್ದವು. ಅದರಲ್ಲಿ 8 ಪ್ರಕರಣಗಳು ಕಲಬುರಗಿಯಲ್ಲಿ ಪತ್ತೆಯಾಗಿದ್ದರೆ,ಬೆಳಗಾವಿಯಲ್ಲಿ  ಒಂದು ಪ್ರಕರಣ ಪತ್ತೆಯಾಗಿತ್ತು. ಇದೀಗ ಮತ್ತೊಂದು ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದ್ದು, ದಾವಣಗೆರೆಯಲ್ಲಿ ಒಂದು ಹಾಗೂ ಮೈಸೂರಿನಲ್ಲಿ ಒಂದು ಕೊರೋನಾ ಪ್ರಕರಣ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 534 ಕ್ಕೆ ಏರಿಕೆಯಾಗಿದೆ.

ಇನ್ನೊಂದೆಡೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯು ಹೆಚ್ಚಾಗುತ್ತಿದೆ. ಈವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯೂ 21 ಕ್ಕೇರಿದೆ. ಮಹಾಮಾರಿ ಕೊರೋನಾ ತುಮಕೂರಿನಲ್ಲಿ ತನ್ನ ಎರಡನೇ ಬಲಿಯನ್ನು ಪಡೆದುಕೊಂಡಿದೆ. ತುಮಕೂರಿನಲ್ಲಿ 74 ವರ್ಷದ ಮಹಿಳೆ ತೀವ್ರ ಉಸಿರಾಟ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ.

13 COMMENTS

  1. My brother suggested I might like this web site. He was totally right. This post actually made my day. You cann’t imagine simply how much time I had spent for this info! Thanks!

LEAVE A REPLY

Please enter your comment!
Please enter your name here

- Advertisment -

Most Popular

Recent Comments