ಕಲಬುರಗಿ: ರಾಜ್ಯದಲ್ಲಿ ಇಂದು ಮಹಾಮಾರಿ ಕೊರೋನಾಗೆ ಮತ್ತೊಂದು ಬಲಿಯಾಗಿದೆ. ಈ ಮೂಲಕ ಕೋರೋನಾ ಸೋಂಕಿಗೆ ಬಲಿಯಾವದರ ಸಂಖ್ಯೆ 20ಕ್ಕೇರಿದೆ.
ಕಲಬುರಗಿಯ ಅಳಂದದ 57 ವರ್ಷದ ವ್ಯಕ್ತಿ ಇಂದು ಸಾವನ್ನಪ್ಪಿದ್ದು, ಉಸಿರಾಟ ಸಮಸ್ಯೆಯಿಂದ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಏಪ್ರಿಲ್ 21 ರಂದು ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ತೀವ್ರ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು ಮೃತಪಟ್ಟಿದ್ದಾರೆ. ಹಾಗಾಗಿ ಈವರೆಗೆ ಕಲಬುರಗಿಯಲ್ಲಿ ಒಟ್ಟು 5 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಕೋವಿಡ್ 19 ಸೋಂಕಿತ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. 57ವರ್ಷದ ಅಳಂದದ ನಿವಾಸಿಯಾಗಿದ್ದ ಇವರಲ್ಲಿ ಏಪ್ರಿಲ್ 21ರಂದು ಕೊರೋನಾ ಪಾಸಿಟಿವ್ ಬಂದಿತ್ತು. ಉಸಿರಾಟದ ತೊಂದರೆಯಿಂದ GIMSಗೆ ದಾಖಲಾಗಿದ್ದು, ತೀವ್ರ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು. ಇದರೊಂದಿಗೆ ಕಲ್ಬುರ್ಗಿ ಜಿಲ್ಲೆಯಲ್ಲಿ ಒಟ್ಟು 5 ಕೋವಿಡ್ ಮರಣ ಸಂಭವಿಸಿದಂತಾಗಿದೆ
— Dr Sudhakar K (@mla_sudhakar) April 27, 2020