Sunday, June 26, 2022
Powertv Logo
Homeದೇಶಜಗತ್ತಿನಲ್ಲಿ ಸೋಂಕಿತರ ಸಂಖ್ಯೆ 61,50,483 ಕ್ಕೆ ಏರಿಕೆ : 3 ಲಕ್ಷದ 70 ಸಾವಿರಕ್ಕೂ ಆಧಿಕ...

ಜಗತ್ತಿನಲ್ಲಿ ಸೋಂಕಿತರ ಸಂಖ್ಯೆ 61,50,483 ಕ್ಕೆ ಏರಿಕೆ : 3 ಲಕ್ಷದ 70 ಸಾವಿರಕ್ಕೂ ಆಧಿಕ ಜನ ಸಾವು  

ಜಿನೇವಾ: ಜಗತ್ತಿನಾದ್ಯಂತ ಕೋವಿಡ್ -19 ತನ್ನ ಕದಂಬಬಾಹು ಚಾಚುತ್ತಲೇ ಇದೆ. ಕೇವಲ 24 ಗಂಟೆಯಲ್ಲಿ 1,24,103 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈವರೆಗೆ ಒಟ್ಟು 61,50,483 ಜನರಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಸಾವಿನ ಸಂಖ್ಯೆಯೂ ಏರುತ್ತಿದ್ದು, ಒಂದೇ ದಿನದಲ್ಲಿ 4,084 ಜನ  ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ಈವರೆಗೆ ಒಟ್ಟು 3,70,506 ಮಂದಿ ಸೋಂಕಿತರು  ಮೃತಪಟ್ಟಿದ್ದಾರೆ. ಇದರ ನಡುವೆ ಗುಣಮುಖರಾದವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಈವರೆಗೆ 27,33,952 ಜನ ಸಾವನ್ನಪ್ಪಿದ್ದಾರೆ.

ಜಗತ್ತಿನ ದೊಡ್ಡಣ್ಣ ಅಮೆರಿಕಾವನ್ನು ಮಹಾಮಾರಿ ಬಿಡದೇ ಕಾಡುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ  ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸೋಂಕಿತರ ಸಂಖ್ಯೆ  ಕೇವಲ 24 ಗಂಟೆಯಲ್ಲಿ 23,290 ರಷ್ಟು ಏರಿಕೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ  18,16,820 ಏರಿಕೆಯಾಗಿದೆ. ಇನ್ನು ಅಮೆರಿಕಾದಲ್ಲಿ ಈವರೆಗೆ  5,35,238 ಮಂದಿ ಸೋಂಕಿನಿಂದ ಗುಣಮುಖರಾಗಿದ್ದರೆ, ಸಾವನ್ನಪ್ಪಿದವರ ಸಂಖ್ಯೆಯೂ 1,05,557 ಕ್ಕೆ ಏರಿಕೆಯಾಗಿದೆ.

ಜಗತ್ತಿನ ಸೋಂಕಿತರ ಪಟ್ಟಿಯಲ್ಲಿ ಬ್ರೆಜಿಲ್ ಎರಡನೇ ಸ್ಥಾನದಲ್ಲಿದ್ದು, 30,102 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 4,98,440 ಕ್ಕೆ ಏರಿಕೆಯಾಗಿದೆ. ಇನ್ನು ಈವರೆಗೆ 28,834 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಒಟ್ಟು 2,05,371 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ರಷ್ಯಾ ಮೂರನೇ ಸ್ಥಾನಕ್ಕೆ ಬಂದು ನಿಂತಿದ್ದು, ರಷ್ಯಾದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, 3,96,575 ಕ್ಕೆ ಏರಿಕೆಯಾಗಿದ್ದು, ಕೇವಲ ಒಂದೇ ದಿನದಲ್ಲಿ 8,952 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಈವರೆಗೆ ಒಟ್ಟು 4,555 ಜನ ಸೋಂಕಿತರು ಮೃತಪಟ್ಟಿದ್ದಾರೆ.

ಇನ್ನು ಸ್ಪೇನ್​ನಲ್ಲಿ ಒಟ್ಟು 2,86,308 ಜನ ಸೋಂಕಿತರು ಪತ್ತೆಯಾಗಿದ್ದು, ಈವರೆಗೆ ಒಟ್ಟು 27,125 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇದರ ನಡುವೆ 1,96,958 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಜಗತ್ತಿನ ಸೋಂಕಿತರ ಪಟ್ಟಿಯಲ್ಲಿ ಸ್ಪೇನ್ ನಂತರದ ಸ್ಥಾನದಲ್ಲಿ ಯುಕೆ ಇದ್ದು, ಒಂದೇ ದಿನದಲ್ಲಿ 1,604 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2,72,826 ಕ್ಕೆ ಏರಿದೆ. ಇನ್ನು ಅಲ್ಲಿ ಸಾವನ್ನಪ್ಪಿದವರ ಸಂಖ್ಯೆಯೂ ಹೆಚ್ಚಾಗಿದ್ದು, 38,376 ಕ್ಕೇರಿಕೆಯಾಗಿದೆ.

ಮೂರನೇ ಸ್ಥಾನದಲ್ಲಿದ್ದ ಇಟಲಿಯು 6 ನೇ ಸ್ಥಾನಕ್ಕೆ ಇಳಿದಿದ್ದು, ಅಲ್ಲಿ ಕಳೆದ 24 ಗಂಟೆಯಲ್ಲಿ 416 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2,32,664 ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯು ಏರಿಕೆಯಾಗಿದ್ದು, ಮೃತಪಟ್ಟವರ ಸಂಖ್ಯೆಯೂ 33 ಸಾವಿರದ ಗಡಿ ದಾಟಿದೆ. ಇಲ್ಲಿ ಚೇತರಿಸಿಕೊಂಡವರ ಸಂಖ್ಯೆಯೂ ಏರಿಕೆಯಾಗಿದ್ದು, 1,55,633 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.  

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments