ಚೀನಾ: ಮಾರಣಾಂತಿಕ ವೈರಸ್ ಕೊರೋನಾಗೆ ಬಲಿಯಾಗುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈಗಾಗಲೇ 700ರ ಗಡಿ ದಾಟಿರುವ ಕೊರೋನಾ ವೈರಸ್ ಸಾರ್ಸ್ನ್ನು ಮೀರಿಸುತ್ತಾ ಅನ್ನೋ ಆತಂಕ ಎಲ್ಲರಲ್ಲೂ ಮನೆ ಮಾಡಿದೆ.
2002-2003 ರಲ್ಲಿ ದಾಳಿಯಿಟ್ಟಿದ್ದ ಸಾರ್ಸ್ ವೈರಸ್ 774 ಜನರನ್ನು ಬಲಿ ಪಡೆದಿತ್ತು. ಈಗ ಕೊರೋನಾ ವೈರಸ್ ಸಾರ್ಸ್ನ್ನು ಸಮೀಪಿಸುತ್ತಿದ್ದು, 724 ಜನರನ್ನು ಬಲಿಯಾಗಿದ್ದಾರೆ. ಹುಬೈ ಪ್ರಾಂತ್ಯವೊಂದರಲ್ಲೆ ಶುಕ್ರವಾರ 81 ಜನರು ಮೃತರಾಗಿದ್ದಾರೆ. ಇದುವರೆಗೂ ಚೀನಾದಲ್ಲಿ ಒಟ್ಟು 34,546 ಜನರಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಕೊರೋನಾ ವೈರಸ್ ಚೀನಾದಿಂದ ಇತರೆ 20 ದೇಶಗಳಿಗೆ ಹರಡಿದ್ದು, ಈ ಹಿನ್ನಲೆಯಲ್ಲಿ ಭಾರತದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.