ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಈ ಮಹಾಮಾರಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹೌದು ಕೇವಲ 24 ಗಂಟೆಯಲ್ಲಿ ಮೂವರು ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ ಕೊರೋನಾಗೆ ಒಟ್ಟು 25 ಮಂದಿ ಸಾವನ್ನಪ್ಪಿದ್ದಾರೆ.
ಇಂದು ಮೃತಪಟ್ಟವರಲ್ಲಿ ಒಬ್ಬರು 69 ವರ್ಷದ ಪುರುಷ ಆಗಿದ್ದು, ದಾವಣಗೆರೆ ಜಿಲ್ಲೆಯ ನಿವಾಸಿಯಾಗಿದ್ದಾರೆ. ಏಪ್ರಿಲ್ 28 ರಂದು ತೀವ್ರವಾದ ಉಸಿರಾಟ ತೊಂದರೆ, ಮಧುಮೇಹ ಮತ್ತು ಹೃದಯ ಖಾಯಿಲೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೇ 1 ರಂದು ಹೃದಯಾಘಾತದಿಂದ ಪೇಷೆಂಟ್ 556 ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ.
ಇನ್ನು 82 ವರ್ಷದ ಪೇಷೆಂಟ್ 590 ಸೋಂಕಿತ ಬೀದರ್ ಜಿಲ್ಲೆಯ ನಿವಾಸಿಯಾಗಿದ್ದು, ಏಪ್ರಿಲ್ 27 ರಂದು ತೀವ್ರ ಉಸಿರಾಟದ ತೊಂದರೆಯಿಂದ ಬೀದರ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಏಪ್ರಿಲ್ 28 ರಂದು ನಿಧನ ಹೊಂದಿದ್ದು, ಮೇ 1 ರಂದು ಬಂದ ಹೆಲ್ತ್ ರಿಪೋರ್ಟ್ ಪ್ರಕಾರ ಮೃತ ವ್ಯಕ್ತಿಯಲ್ಲಿ ಕೋವಿಡ್-19 ದೃಢಪಟ್ಟಿದೆ.
ಬೆಂಗಳೂರು ನಗರದ 63 ವರ್ಷದ ಪೇಷೆಂಟ್ 557 ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ. ದೀರ್ಘಕಾಲಿನ ಮಧುಮೇಹ ಹಾಗೂ ಮೂತ್ರಪಿಂಡ ವೈಫಲ್ಯತೆ ಹಿನ್ನೆಲಯಲ್ಲಿ ಡಯಾಲಿಸಿಸ್ ಪಡೆಯುತ್ತಿದ್ದರು. ಕಿಮೋ ಥೆರಪಿಯನ್ನು ಪಡೆಯುತ್ತಿದ್ದರು. ತೀವ್ರತರ ಉಸಿರಾಟ ತೊಂದರೆಯಿಂದ ಏಪ್ರಿಲ್ 30 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮೇ 2 ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.