ಬಳ್ಳಾರಿ: ಕೊರೋನಾ ಲಸಿಕೆ ಪಡೆದಿದ್ದ ವ್ಯಕ್ತಿಯೋರ್ವ ಸಾವಿಗೀಡಾದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕೊರೋನಾ ಲಸಿಕೆ ಪಡೆದ ಎರಡು ದಿನಗಳಲ್ಲಿ ವ್ಯಕ್ತಿ ಮೃತಪಟ್ಟಿದ್ದಾನೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಾಗರಾಜ್ (43) ಸಾವಿಗೀಡಾದವರು.
ನಾಗರಾಜ್ ಸಂಡೂರಿನ ಆರೋಗ್ಯ ಇಲಾಖೆಯಲ್ಲಿ ಡಿ ಗ್ರೂಪ್ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ. ಈತ ಜ 16 ರಂದು ದೇಶಾದ್ಯಂತ ನಡೆದಿದ್ದ ಕೊರೋನಾ ಲಸಿಕೆ ಮಹಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ. ಅಭಿಯಾನದಲ್ಲಿ ಪಾಲ್ಗೊಂಡು ಲಸಿಕೆ ಹಾಕಿಸಿಕೊಂಡಿದ್ದ. ಲಸಿಕೆ ಪಡೆದ ಎರಡು ದಿನಕ್ಕೆ ನಾಗರಾಜ್ ಮೃತಪಟ್ಟಿದ್ದಾರೆ.
ಆದ್ರೆ, ಈ ಬಗ್ಗೆ ಸ್ಪಷ್ಟನೇ ನೀಡಿರುವ ಜಿಲ್ಲಾಡಳಿತ ಮೃತ ನಾಗರಾಜ್ ಗೆ ಬಿಪಿ ಶುಗರ್ ಇತ್ತು ಅಲ್ಲದೇ ಹೃದಯಾಘಾತದಿಂದ ಸಾವಾಗಿದೆ. ಆತನ ಸಾವಿಗೆ ಕೊರೋನಾ ಲಸಿಕೆ ಕಾರಣ ಅಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಕೊರೋನಾ ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು ಯಾವುದೇ ಭಯಪಡಬೇಕಿಲ್ಲ ಜಿಲ್ಲೆಯಲ್ಲಿ ಲಸಿಕೆ ಪಡೆದ ಎಲ್ಲರೂ ಸುರಕ್ಷಿತವಾಗಿ ಆರೋಗ್ಯದಿಂದ್ದಾರೆ. ನಾಗರಾಜ್ ಮೃತಪಟ್ಟಿರೋದಕ್ಕೆ ಲಸಿಕೆ ಕಾರಣ ಅಲ್ಲ ಎಂದು ಜಿಲ್ಲಾಡಳಿತ ಹೇಳಿದೆ.
– ಅರುಣ್ ನವಲಿ ಬಳ್ಳಾರಿ