Monday, August 15, 2022
Powertv Logo
Homeರಾಜ್ಯಅನುಮಾನಸ್ಪದ ರೀತಿ ಪ್ರೇಮ ಜೋಡಿ ಶವ ಪತ್ತೆ

ಅನುಮಾನಸ್ಪದ ರೀತಿ ಪ್ರೇಮ ಜೋಡಿ ಶವ ಪತ್ತೆ

ರಾಮನಗರ : ವಿವಾಹಿತರಿಬ್ಬರು ಅನುಮಾನಾಸ್ಪದ ರೀತಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ದಾಸೇಗೌಡನಪಾಳ್ಯ ಗ್ರಾಮದಲ್ಲಿ ನಡೆದಿದೆ.

ಮಾಗಡಿ ತಾಲೂಕಿನ ಬ್ಯಾಲಕೆರೆ ಗ್ರಾಮದ ಮೋಹನ್ ಕುಮಾರ್(24) ಹಾಗೂ ದಾಸೇಗೌಡನದೊಡ್ಡಿ ಗ್ರಾಮದ ಪುಷ್ಪಲತಾ(24) ಮೃತ ದುರ್ದೈವಿಗಳು. ಅವರಿಬ್ಬರೂ ಬೇರೆ ಬೇರೆ ಊರಿನವರು. ಇಬ್ಬರು ಸಹಾ ಈಗಾಗಲೇ ಮದುವೆಯಾಗಿ ಇಬ್ಬರಿಗೂ ಮಕ್ಕಳಿದ್ದಾರೆ. ಆದರೂ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದ್ರೀಗ ಇವರಿಬ್ಬರು ನೆನ್ನೆ ಗ್ರಾಮದಲ್ಲಿಯೇ ಅನುಮಾನಸ್ಪವಾಗಿ ಸಾವನ್ನಪ್ಪಿದ್ದಾರೆ.

ಪುಷ್ಪಲತಾ ವಾರದ ಹಿಂದೆ ಗಂಡನ ಜೊತೆ ಗಲಾಟೆ ಮಾಡಿಕೊಂಡು ದಾಸೇಗೌಡನಪಾಳ್ಯಕ್ಕೆ ಬಂದಿದ್ದಳು. ಈ ಮಧ್ಯೆ ಮೋಹನ್ ಕುಮಾರ್ ಹಾಗು ಪುಷ್ಪಲತಾಳಿಗೂ ಪರಿಚಯವಾಗಿತ್ತು. ಇಬ್ಬರು ಸಹಾ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಇಬ್ಬರ ಮೃತದೇಹಗಳು ಪುಷ್ಪಲತಾ ಅವರ ಮಾವಿನ ತೋಟದಲ್ಲಿ ಪತ್ತೆಯಾಗಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಮೋಹನ್ ಮೃತ ದೇಹ ಪತ್ತೆಯಾದರೆ, ನೆಲದ ಮೇಲೆ ಮಲಗಿರುವ ಸ್ಥಿತಿಯಲ್ಲಿ ಪುಷ್ಪಲತಾ ಮೃತದೇಹ ಪತ್ತೆಯಾಗಿದೆ. ಕುದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿ ಬಂದ ನಂತರ ಸತ್ಯಾಸತ್ಯತೆ ಹೊರ ಬರಲಿದೆ.

4 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments