ಗ್ರೀನ್​ ಝೋನ್​ನಿಂದ ಆರೆಂಜ್ ಝೋನ್​ಗೆ ಇಳಿದ ದಾವಣಗೆರೆ : ಇಂದು ಮತ್ತೊಬ್ಬರಲ್ಲಿ ಕೋವಿಡ್-19 ಸೋಂಕು ದೃಢ

0
458

ದಾವಣಗೆರೆ: ರಾಜ್ಯದಲ್ಲಿ ಪತ್ತೆಯಾಗಿರುವ ಸೋಂಕಿತರ ಅಂಕಿ ಅಂಶದ ಅನ್ವಯ ಜಿಲ್ಲೆಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಅದರಲ್ಲಿ ದಾವಣೆಗೆರೆಯಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿರದೇ ಇದ್ದ ಕಾರಣ ಗ್ರೀನ್ ಝೋನ್ ಎಂದು ಸರ್ಕಾರ ಘೋಷಣೆ ಮಾಡಿತ್ತು. ಆದರೆ ಇದೀಗ ದಿನಕ್ಕೊಂದು ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ದಾವಣಗೆರೆಯನ್ನು ಗ್ರೀನ್ ಝೋನ್​ನಿಂದ ಇಳಿಸಿ ಆರೆಂಜ್ ಝೋನ್​ಗೆ ಸೇರಿಸಲಾಗಿದೆ.

ದಾವಣಗೆರೆಯಲ್ಲಿ ಇಂದು ಮತ್ತೆ ಇನ್ನೊಂದು ಸೋಂಕು ಪ್ರಕರಣ ಕಂಡುಬಂದಿದೆ. 69 ವರ್ಷದ ವೃದ್ಧನಲ್ಲಿ ಸೋಂಕು ಪತ್ತೆಯಾಗಿದ್ದು, ಏಪ್ರಿಲ್ 28 ರಂದು ಉಸಿರಾಟ ತೊಂದರೆ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೋನಾ ಟೆಸ್ಟ್ನಲ್ಲಿ ರಿಸಲ್ಟ್ ಪಾಸಿಟಿವ್ ಬಂದಿದೆ. ಹಾಗಾಗಿ ವೃದ್ಧನ ಸಂಪರ್ಕದಲ್ಲಿದ್ದ 9 ಜನರನ್ನು ಐಸೋಲೇಷನ್ ಮಾಡಲಾಗಿದೆ. ಹಾಗೆಯೇ  ಅವರ ಟ್ರಾವೆಲ್ ಹಿಸ್ಟರಿಯನ್ನು ಪತ್ತೆ ಮಾಡಲಾಗುತ್ತಿದೆ. ಅಷ್ಟೆ ಅಲ್ಲದೆ ಜಾಲಿನಗರ ಹಾಗೂ ಭಾಷಾ ನಗರವನ್ನು ಸೀಲ್​ಡೌನ್ ಮಾಡುವಂತೆ ಆದೇಶವನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಿಗಿ ಹೇಳಿದ್ದಾರೆ. 

LEAVE A REPLY

Please enter your comment!
Please enter your name here