ಸ್ವಾಭಿಮಾನದ ಹೆಸರಲ್ಲಿ ಮಂಡ್ಯ ರಣಕಣದಲ್ಲಿ ಭಾರೀ ಸಂಚಲವನ್ನು ಉಂಟು ಮಾಡಿದವರು ಸುಮಲತಾ ಅಂಬರೀಶ್. ಲೋಕಸಭಾ ಎಲೆಕ್ಷನ್ನಲ್ಲಿ ಮೈತ್ರಿಗೆ ಸೆಡ್ಡು ಹೊಡೆದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮತ ಪೆಟ್ಟಿಗೆಯಲ್ಲಿ ಅವರ ರಾಜಕೀಯ ಭವಿಷ್ಯ ಈಗ ಭದ್ರವಾಗಿದೆ. ಸುಮಲತಾ ಕೇಳಿದ ಸ್ವಾಭಿಮಾನದ ಮತ ಭಿಕ್ಷೆಯನ್ನು ಮತದಾರರು ನೀಡಿ ಹರಸಿದ್ದಾರ ಅನ್ನೋದನ್ನು ತಿಳಿಯಲು ಮೇ.23ರ ತನಕ ಕಾಯಲೇ ಬೇಕು.
ಎಲೆಕ್ಷನ್ ರಿಸೆಲ್ಟ್ ಸಿಕ್ಕಾಪಟ್ಟೆ ಟೆನ್ಶನ್.. ಈ ರಿಸೆಲ್ಟ್ ಟೆನ್ಶನ್ ಮುಗಿದ ಕೂಡಲೇ ಸುಮಕ್ಕನಾ ಸಿನಿಮಾ ರಿಲೀಸ್ ಆಗ್ತಿದೆ..! ತಾಯಿಗೆ ತಕ್ಕ ಮಗ ಸಿನಿಮಾದ ಬಳಿಕ ಸುಮಲತಾ ಅವರ ಯಾವ್ಧೇ ಸಿನಿಮಾ ರಿಲೀಸ್ ಆಗಿರಲಿಲ್ಲ. ಆ ಸಿನಿಮಾ ರಿಲೀಸ್ ಆಗಿ ಕೆಲದಿನಗಳಲ್ಲೇ ಅಂಬಿ ಅವರನ್ನು ಕಳೆದುಕೊಂಡ ಸುಮಲತಾ ಅವರು ಯಾವ್ದೇ ಸಿನಿಮಾದಲ್ಲಿ ನಟಿಸಿಲ್ಲ. ನಂತರ ಸಕ್ರಿಯ ರಾಜಕಾರಣಲ್ಲಿ ತೊಡಗಿಸಿಕೊಂಡಿದ್ದು ಗೊತ್ತೇ ಇದೆ.
ರಾಜಕಾರಣಕ್ಕೆ ಧುಮುಕಿರೋ ಸುಮಲತಾ ಅಗ್ನಿಪರೀಕ್ಷೆ ಎದುರಿಸಿಯಾಗಿದೆ. ಈಗ ರಿಸೆಲ್ಟ್ ಬರಬೇಕಷ್ಟೇ. ರಿಸೆಲ್ಟ್ ಬಂದ ಮರು ದಿನವೇ ಸುಮಲತಾ ಅವರ ಸಿನಿಮಾ ಕೂಡ ರಿಲೀಸ್ ಆಗ್ತಿದೆ.
ಅಂಬಿ ವಿಧಿವಶರಾಗೋ ಮುನ್ನವೇ ಶೂಟಿಂಗ್ ಕಂಪ್ಲೀಟ್ ಆಗಿದ್ದ ಡಾಟರ್ ಆಫ್ ಪಾರ್ವತಮ್ಮ ಚಿತ್ರ ಈಗ ರಿಲೀಸ್ ಗೆ ರೆಡಿಯಾಗಿದೆ. ಮೇ.23ಕ್ಕೆ ಎಲೆಕ್ಷನ್ ರಿಸೆಲ್ಟ್.. ಮೇ.24ಕ್ಕೆ ಸುಮಕ್ಕನಾ ಡಾಟರ್ ಆಫ್ ಪಾರ್ವತಮ್ಮ ರಿಲೀಸ್ ಆಗಲಿದೆ.
ದಿಶಾ ಎಂಟರ್ಟೈನ್ಮೆಂಟ್ ಬ್ಯಾನರ್ನಲ್ಲಿ ಡಾಟರ್ ಆಫ್ ಪಾರ್ವತಮ್ಮ ನಿರ್ಮಾಣವಾಗಿದ್ದು, ಕೆ.ಎಂ ಶಶಿಧರ್, ಎಂ.ವಿಜಯಲಕ್ಷ್ಮೀ ಮತ್ತು ಕೃಷ್ಣೇಗೌಡ ಬಂಡವಾಳ ಹಾಕಿದ್ದಾರೆ, ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರೋದು ಡೈರೆಕ್ಟರ್ ಶಂಕರ್. ಚಿತ್ರದಲ್ಲಿ ಅರುಳ್.ಕೆ ಸೋಮಸುಂದರನ್ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಮಿಥುನ್ ಮುಕುಂದನ್ ಸಂಗೀತದ ಬಲ ತುಂಬಿದ್ದಾರೆ,
ಇನ್ನು ಸುಮಲತಾ ಅವರಲ್ಲದೆ ನಟಿ ಹರಿಪ್ರಿಯಾ ಮುಖ್ಯಭೂಮಿಯಲ್ಲಿ ನಟಿಸಿದ್ದಾರೆ. ಹರಿಪ್ರಿಯಾ ಅವರ 25ನೇ ಚಿತ್ರ ಈ ಡಾಟರ್ ಆಫ್ ಪಾರ್ವತಮ್ಮ. ಇದು ಕ್ರೈಮ್ನ ಸುತ್ತ ಸುತ್ತಲಿರೋ ಕಥೆಯಾಗಿದ್ದು, ಹರಿಪ್ರಿಯಾ ವೈದೇಹಿ ಅನ್ನೋ ಹೆಸರಿನ ತನಿಖಾಧಿಕಾರಿ ಪಾತ್ರಕ್ಕೆ ಜೀವ ತುಂಬಿದ್ದಾರೆ. : ಸುಮಲತಾ ಅಂಬರೀಶ್ ಅವರು ಹರಿಪ್ರಿಯಾ ಅವರ ತಾಯಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಒಟ್ನಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುವ ಡಾಟರ್ ಆಫ್ ಪಾರ್ವತಮ್ಮ ಮೇ. 24ಕ್ಕೆ ರಿಲೀಸ್ ಆಗಲಿದೆ. ಮೇ.23ರಕ್ಕೆ ಲೋಕಸಭಾ ಚುನಾವಣೆಯ ರಿಸೆಲ್ಟ್..! ಮಂಡ್ಯ ರಣಕಣದಲ್ಲಿ ಸುಮಲತಾ ಗೆಲುವಿನ ನಗೆಬೀರಿ ಅಭಿಮಾನಿಗಳ ಮುಂದೆ ‘ಡಾಟರ್ ಆಫ್ ಪಾರ್ವತಮ್ಮ’ ಆಗಿ ಬರ್ತಾರಾ ಅನ್ನೋದು ಕುತೂಹಲ… ಒಂದೆಡೆ ಮತಹಬ್ಬ, ಮತ್ತೊಂದೆಡೆ ಸಿನಿಹಬ್ಬ… ಏನ್ ಆಗುತ್ತೆ ಕಾದುನೋಡೋಣ.
-ಚರಿತ ಪಟೇಲ್
2rehearse
$10 deposit online casino https://cybertimeonlinecasino.com/
online casino no deposit bonus codes https://1freeslotscasino.com/