Homeರಾಜ್ಯಬೆಂಗಳೂರು ‘KGF-2 ಚಿತ್ರಕ್ಕೆ ಡೇಟ್ ಫಿಕ್ಸ್’

 ‘KGF-2 ಚಿತ್ರಕ್ಕೆ ಡೇಟ್ ಫಿಕ್ಸ್’

ಬೆಂಗಳೂರು: ಇಡೀ ವಿಶ್ವವೇ ಎದುರು ನೋಡ್ತಿರೋ ರಾಕಿಂಗ್​​​ ಸ್ಟಾರ್​ ಸಿನಿಮಾ ಕೆಜಿಎಫ್​ನ ಚಾಪ್ಟರ್ 2 ರಿಲೀಸ್ ಡೇಟ್ ಅನೌನ್ಸ್ ಆಗಿದೆ. ನಿರ್ದೇಶಕ ಪ್ರಶಾಂತ್ ನೀಲ್, ತಮ್ಮ ಟ್ವಿಟರ್ ಮೂಲಕ ಇದೇ ಜುಲೈ 16ಕ್ಕೆ ವರ್ಲ್ಡ್​ ವೈಡ್ ರಿಲೀಸ್ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್- ಬಿಟೌನ್ ಸಂಜಯ್ ದತ್ ಮುಖ್ಯಭೂಮಿಕೆಯ ಈ ಸಿನಿಮಾ ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಏಕಕಾಲದಲ್ಲಿ ತೆರೆಗಪ್ಪಳಿಸಲಿದೆ.

ಮಾಸ್ಟರ್​ಮೈಂಡ್ ಟೆಕ್ನಿಷಿಯನ್ಸ್, ಮಾನ್​ಸ್ಟರ್ ಡೈರೆಕ್ಟರ್ ಹಾಗೂ ಹೀರೋನ ರೇರ್ ಕಾಂಬೋ ಚಿತ್ರ ಇದಾಗಿದ್ದು, ಇತ್ತೀಚೆಗೆ ತೆರೆಕಂಡ ಟೀಸರ್ 16 ಕೋಟಿ ಯೂಟ್ಯೂಬ್ ವೀವ್ಸ್​ನಿಂದ ಆಲ್​ಟೈಮ್ ರೆಕಾರ್ಡ್​ ಬರೆದಿದೆ. ಕೆಜಿಎಫ್ ಮೊದಲ ಭಾಗದಿಂದ 250 ಕೋಟಿ ಬ್ಯುಸಿನೆಸ್ ಮಾಡಿದ್ದ ಹೊಂಬಾಳೆ ಫಿಲಂಸ್ ಬ್ಯಾನರ್, ಈ ಬಾರಿ 500ಕೋಟಿ ಟಾರ್ಗೆಟ್ ಇಟ್ಟಿದೆ ಅನ್ನೋದು ಸಿನಿ ಪಂಡಿತರ ಲೆಕ್ಕಾಚಾರ. ಬಾಲಿವುಡ್ ಹಾಗೂ ಹಾಲಿವುಡ್ ಫಿಲ್ಮ್ ಮೇಕರ್ಸ್​ ಹುಬ್ಬೇರಿಸಿರೋ ಕೆಜಿಎಫ್ ಈ ಬಾರಿ ಬಾಕ್ಸಾಫೀಸ್​ನಲ್ಲಿ ಎಷ್ಟು ಕೋಟಿ ದೋಚುತ್ತೆ ಅನ್ನೋದು ಕಾದುನೋಡಬೇಕಿದೆ.​​​​

LEAVE A REPLY

Please enter your comment!
Please enter your name here

- Advertisment -

Most Popular

Recent Comments