Home ಸಿನಿ ಪವರ್ ''ಪ್ರೀತಿಯಲ್ಲಿ ಬಂದ್ರೆ ಪ್ರೇಮಲೋಕ ಕಟ್ಟೋನು. ರಣ ವೀಳ್ಯ ಕೊಟ್ರೆ ರಣಧೀರ ಆಗೋನು''..!

”ಪ್ರೀತಿಯಲ್ಲಿ ಬಂದ್ರೆ ಪ್ರೇಮಲೋಕ ಕಟ್ಟೋನು. ರಣ ವೀಳ್ಯ ಕೊಟ್ರೆ ರಣಧೀರ ಆಗೋನು”..!

ಕ್ರೇಜಿಸ್ಟಾರ್ ರವಿಚಂದ್ರನ್ ಚಂದನವನದ ಹೊಸತನದ ಹರಿಕಾರ. ರವಿಮಾಮನ ಸಿನಿಮಾ ಅಂದ್ರೆ ಅಲ್ಲೊಂದು ವಿಭವನ್ನತೆ ಇರುತ್ತೆ. ಟೈಟಲ್​ನಿಂದಲೇ ಸಖತ್ ಸೆನ್ಷೇಷನ್ ಕ್ರಿಯೇಟ್ ಆಗಿರುತ್ತೆ. ಸ್ಯಾಂಡಲ್​ವುಡ್​ನ ಎವರ್​ಗ್ರೀನ್ ಸ್ಟಾರ್ ರವಿಚಂದ್ರನ್ ಈಗ ‘ದಶರಥ’ನಾಗಿ ಬರ್ತಿದ್ದಾರೆ.
ಚಾಲೆಂಜಿಂಗ್​ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’ದಲ್ಲಿ ಮಹಾಭಾರತದ ಕೃಷ್ಣನಾಗಿ ಮಿಂಚಲಿರುವ ರವಿಚಂದ್ರನ್, ‘ದಶರಥ’ದಲ್ಲಿ ರಾಮಾಯಣದ ಶ್ರೀರಾಮನ ತಂದೆ ದಶರಥನ ಪಾತ್ರದಾರಿಯಾಗಿ ಮಿಂಚುತ್ತಿದ್ದಾರಾ..? ದಶರಥ ಕೂಡ ಒಂದು ಪೌರಾಣಿಕ ಸಿನಿಮಾನಾ..? ಅಲ್ಲ, ದಶರಥ ಪೌರಾಣಿಕ ಸಿನಿಮಾವಲ್ಲ. ಇಲ್ಲಿ ರವಿಮಾಮ ಕಲಿಯುಗದ ದಶರಥ.
ಇದೀಗ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ರವಿಮಾಮ ಮತ್ತೊಮ್ಮೆ ಲಾಯರ್ ಆಗಿ ಮಿಂಚುತ್ತಿದ್ದಾರೆ. ಯುದ್ಧಕಾಂಡ, ಬ್ರಹ್ಮ ವಿಷ್ಣು ಮಹೇಶ್ವರ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಕಪ್ಪು ಕೋಟು ಧರಿಸಿದ್ದ ಚಂದನವನದ ‘ಅಣ್ಣಯ್ಯ’ ಮತ್ತೆ ದಶರಥದಲ್ಲಿ ಲಾಯರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಯದ್ಧಕಾಂಡದಲ್ಲಿ ಲಾಯರ್ ಆಗಿ ಸಕ್ಸಸ್ ಕಂಡಿದ್ದ ಕನಸುಗಾರ ದಶರಥದಲ್ಲೂ ಲಾಯರ್ ಆಗಿ ಕ್ಲಿಕ್ ಆಗಲಿದ್ದಾರೆ ಅನ್ನೋದು ಟ್ರೇಲರ್​ನಿಂದಲೇ ಪ್ರೂವ್ ಆಗಿದೆ. ‘ಇವ್ನು ಪ್ರೀತಿಯಲ್ಲಿ ಬಂದ್ರೆ ಪ್ರೇಮಲೋಕ ಕಟ್ಟೋನು. ರಣ ವೀಳ್ಯ ಕೊಟ್ರೆ ರಣಧೀರ ಆಗೋನು’ ಅನ್ನೋ ಪಂಚಿಂಗ್​ ಡೈಲಾಗ್​ಗೆ ಫ್ಯಾನ್ಸ್​ ಫುಲ್ ಫಿದಾ ಆಗಿದ್ದು, ಟ್ರೇಲರ್ ನೋಡಿದ್ರೆ ಇದೊಂದು ಪಕ್ಕಾ ಸಸ್ಪೆನ್ಸ್, ಥ್ರಿಲ್ಲರ್, ಫ್ಯಾಮಿಲಿ ಎಂಟರ್​​ಟ್ರೈನರ್ ಮೂವಿ ಅನ್ಸುತ್ತೆ.
 ಇನ್ನು ಎಂ.ಎಸ್​ ರಮೇಶ್ ದಶರಥನಿಗೆ ಆ್ಯಕ್ಷನ್ ಕಟ್ ಹೇಳಿದ್ದು, ಸೋನಿಯಾ ಅಗರ್ವಾಲ್, ಮೇಘಶ್ರೀ, ರಂಗಾಯಣ ರಘು, ಪ್ರಿಯಾಮಣಿ ಮೊದಲಾದವರು ತಾರಗಣದಲ್ಲಿದ್ದಾರೆ. ಇದೇ ತಿಂಗಳ 26ಕ್ಕೆ ಸಿನಿಮಾ ರಿಲೀಸ್ ಆಗಲಿದೆ. 

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments